ನಮ್ಮ ಮೆಟ್ರೋ ಇಲ್ಲದೆ ಜನರ ಪರದಾಟ; ದುಪ್ಪಟ್ಟು ಹಣ ಪೀಕುತ್ತಿರುವ ಆಟೋ, ಕ್ಯಾಬ್ ಚಾಲಕರು

ಸಿಲಿಕಾನ್ ಸಿಟಿ ಜನರ ನೆಚ್ಚಿನ ಸಾರಿಗೆ ಮಿತ್ರ ಅಂದರೆ ಅದು ನಮ್ಮ ಮೆಟ್ರೋ. ಆದರೆ ಗ್ರೀನ್ ಲೈನ್​ನ ವಿಸ್ತರಿತ ಮಾರ್ಗದ ಟೆಸ್ಟಿಂಗ್ ಕಾರ್ಯಾದ ಹಿನ್ನೆಲೆಯಲ್ಲಿ ಇಡೀ ದಿನ ಮೆಟ್ರೋ ಸಂಚಾರವಿರಲಿಲ್ಲ. ಇದರಿಂದ ಜನರು ಪರದಾಡಿದ್ರೆ, ಇದನ್ನು ಬಂಡವಾಳ ಮಾಡಿಕೊಂಡ ಕೆಲ ಆಟೋ, ಕ್ಯಾಬ್ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ.

ನಮ್ಮ ಮೆಟ್ರೋ ಇಲ್ಲದೆ ಜನರ ಪರದಾಟ; ದುಪ್ಪಟ್ಟು ಹಣ ಪೀಕುತ್ತಿರುವ ಆಟೋ, ಕ್ಯಾಬ್ ಚಾಲಕರು
ಮೆಟ್ರೋ ಇಲ್ಲದೆ ಜನರ ಪರದಾಟ; ದುಪ್ಪಟ್ಟು ಹಣ ಪೀಕಿದ ಆಟೋ, ಕ್ಯಾಬ್ ಚಾಲಕರು
Follow us
| Updated By: ಆಯೇಷಾ ಬಾನು

Updated on: Aug 21, 2024 | 8:58 AM

ಬೆಂಗಳೂರು, ಆಗಸ್ಟ್​.21: ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗಿನ ಹಸಿರು ಮಾರ್ಗದ ಮುಂದುವರಿದ ಭಾಗವಾಗಿ, ನಾಗಸಂದ್ರ ಟು ಮಾದಾವರ ವರೆಗೆ ಮೆಟ್ರೋ (Namma Metro) ಸಂಚಾರವನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಿಗ್ನಲ್ ಟೆಸ್ಟಿಂಗ್ ಮಾಡಲಾಗ್ತಿದೆ. ಆದ್ದರಿಂದ ನಾಗಸಂದ್ರ ಟು ಪೀಣ್ಯ ಇಂಡಸ್ಟ್ರಿ ಮೆಟ್ರೋ ಸ್ಟೇಷನ್ ವರೆಗೆ ದಿನಪೂರ್ತಿ ಮೆಟ್ರೋ ಸಂಚಾರವಿಲ್ಲ. ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗಬೇಕಾದ ಪ್ರಯಾಣಿಕರು ಪರದಾಡ್ರಿದ್ದಾರೆ. ಮೆಟ್ರೋ ಸ್ಟೇಷನ್ ಬಳಿ ನಿಂತು ಓಲಾ, ಉಬರ್ ಮೂಲಕ ಆಟೋ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಬಂಡವಾಳ ಮಾಡಿಕೊಂಡ ಆಟೋ, ಕ್ಯಾಬ್ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ.

ನಾಗಸಂದ್ರ ದಿಂದ ಪೀಣ್ಯ ಇಂಡಸ್ಟ್ರಿಗೆ ನಾರ್ಮಲ್ ಆಗಿ ಆಟೋದಲ್ಲಿ 50 ರುಪಾಯಿ ಆಗುತ್ತೆ. ಆದರೆ ಚಾಲಕರು 150 ರಿಂದ 200 ರುಪಾಯಿ ವರೆಗೆ ವಸೂಲಿ ಮಾಡ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ನಿನ್ನೆ ನಾಗಸಂದ್ರ ಟು ಪೀಣ್ಯ ಮೆಟ್ರೋ ಸಂಚಾರವಿಲ್ಲದ ಕಾರಣ, ಆ ಭಾಗದ ಜನರೆಲ್ಲ ಏಕಾಏಕಿ ಪೀಣ್ಯ ಇಂಡಸ್ಟ್ರಿ ಮೆಟ್ರೋಗೆ ಆಗಮಿಸಿದ್ದರು. ಇದರಿಂದ ಮೆಟ್ರೋ ಸ್ಟೇಷನ್ ತುಂಬಾ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಸ್ಟೇಷನ್ ಹೊರಗಿನ ರೋಡ್ ವರೆಗೂ ಕ್ಯೂ ನಿಂತು ಟಿಕೆಟ್ ಪಡೆದು ಸಂಚಾರ ಮಾಡಿದ್ರು. ನಾಗಸಂದ್ರ ಟು ಮಾದಾವರ ಮೆಟ್ರೋ ಸಿಗ್ನಲ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ, ಈ ತಿಂಗಳ 23 ಮತ್ತು 30 ಸೆಪ್ಟೆಂಬರ್‌ 6 ಮತ್ತು 11 ರಂದು ಪೂರ್ಣ ದಿನ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ನಡುವೆ ಸಂಚಾರವಿರುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 30 ದಿನ ಸಂಚಾರ ಬಂದ್​, ಮಾರ್ಗ ಬದಲಾವಣೆ ಇಲ್ಲಿದೆ

ಈ ಬಗ್ಗೆ ಮಾತನಾಡಿದ ಮಹಿಳಾ ಪ್ರಯಾಣಿಕರು ಇವತ್ತು ಮೆಟ್ರೋ ಸಂಚಾರ ಇಲ್ಲ ಅನ್ನೋ ಮಾಹಿತಿ ನಮಗೆ ಇರಲಿಲ್ಲ ಆಫೀಸ್ ಗೆ ಹೋಗಬೇಕು. ಈಗ ಮೆಟ್ರೋ ಇಲ್ಲಾಂದ್ರೆ ತುಂಬಾ ಕಷ್ಟ ಆಗುತ್ತದೆ. ಅಲ್ಲದೆ ಆಸ್ಪತ್ರೆಗೆ ಕೂಡ ಹೋಗಬೇಕು ಎಂದು ಮಹಿಳೆಯೊಬ್ಬರು ನೋವು ತೋಡಿಕೊಂಡಿದ್ದಾರೆ.

ಒಟ್ನಲ್ಲಿ ಬಿಎಂಆರ್​ಸಿಎಲ್ ನಿನ್ನೆಯೇ ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಪ್ರಯಾಣಿಕರು ಹೇಳ್ತಿರೋದು ಮೆಟ್ರೋ ರೈಲುಗಳಲ್ಲಿ, ಸ್ಟೇಷನ್ ಗಳಲ್ಲಿ ದೊಡ್ಡದಾದ ಮಾಹಿತಿ ಫಲಕಗಳಲ್ಲಿ ಮಾಹಿತಿ ನೀಡಬೇಕಿತ್ತು. ಏಕಾಏಕಿ ಮೆಟ್ರೋ ಸಂಚಾರವಿಲ್ಲ ಅಂದರೆ ಹೇಗೆ ಎಂದು ಕಿಡಿಕಾರಿದ್ದಾರೆ. ‌

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ