ಬೆಂಗಳೂರು: ಆರ್​ಟಿಇ ಅಡಿ ಬಡ ಮಕ್ಕಳಿಗೆ ಸಿಗುತ್ತಿಲ್ಲ ಸೀಟು, ಪ್ರಧಾನಿ ಮೋದಿಗೆ ಪತ್ರ ಅಭಿಯಾನ ಆರಂಭಿಸಿದ ಪೋಷಕರು, ಮಕ್ಕಳು

ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದ ಆರ್​ಟಿಇ ಬೆಂಗಳೂರಿನಲ್ಲಿ ಹೇಳ ಹೆಸರಿಲ್ಲದೆ ಕಣ್ಮರೆ ಆಗುತ್ತಿದೆ. ಅದೆಷ್ಟೋ ಹೆತ್ತವರಿಗೆ ಪ್ರತಿಷ್ಠಿತ ಶಾಲೆಯಲ್ಲಿ ತನ್ನ ಮಕ್ಕಳು ಓದಬೇಕು ಎಂಬ ಆಸೆ ಇದ್ದರೂ ಅದೊಂದು ತಿದ್ದುಪಡಿ ಪೋಷಕರ ನಿದ್ದೆ ಕೆಡಿಸಿತ್ತು. ಸದ್ಯ ಆರ್​ಟಿಇ ಅಡಿ ಸೀಟ್​​ಗಾಗಿ ಮಕ್ಕಳು ಮತ್ತು ಪೋಷಕರು ವಿನೂತನ ಹಾದಿ ಹಿಡಿದಿದ್ದಾರೆ. ಏನದು? ತಿಳಿಯಲು ಮುಂದೆ ಓದಿ.

ಬೆಂಗಳೂರು: ಆರ್​ಟಿಇ ಅಡಿ ಬಡ ಮಕ್ಕಳಿಗೆ ಸಿಗುತ್ತಿಲ್ಲ ಸೀಟು, ಪ್ರಧಾನಿ ಮೋದಿಗೆ ಪತ್ರ ಅಭಿಯಾನ ಆರಂಭಿಸಿದ ಪೋಷಕರು, ಮಕ್ಕಳು
ಆರ್​ಟಿಇ ಅಡಿ ಬಡ ಮಕ್ಕಳಿಗೆ ಸಿಗುತ್ತಿಲ್ಲ ಸೀಟು, ಪ್ರಧಾನಿ ಮೋದಿಗೆ ಪತ್ರ ಅಭಿಯಾನ ಆರಂಭಿಸಿದ ಪೋಷಕರು, ಮಕ್ಕಳು
Follow us
Vinay Kashappanavar
| Updated By: Ganapathi Sharma

Updated on: Aug 21, 2024 | 11:42 AM

ಬೆಂಗಳೂರು, ಆಗಸ್ಟ್ 21: ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟು ಬಡ ವಿದ್ಯಾರ್ಥಿಗಳಿಗೆ ಕೊಡಬೇಕು ಎಂಬ ನಿಯಮ 2009ರಲ್ಲಿ ರೂಪಿಸಲಾಗಿತ್ತು. ಆಗ ಅದೆಷ್ಟೋ ಜನ ಪೋಷಕರು ದೊಡ್ಡ ದೊಡ್ಡ ಶಾಲೆಯಲ್ಲಿ ಮಕ್ಕಳಿಗೆ ಸೀಟು ಪಡೆದು ಖುಷಿಪಟ್ಟರು. ಈ ಕಾಯ್ದೆಗೆ ಹೆಚ್​ಡಿ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ 2019ರಲ್ಲಿ ತಿದ್ದುಪಡಿ ಮಾಡಲಾಯಿತು. ನಂತರ ಆರ್‌ಟಿಇ ಕಾಯ್ದೆ ಅಡಿಯಲ್ಲಿ ಸೀಟು ಪಡೆಯುವ ಅರ್ಜಿಗಳ ಸಂಖ್ಯೆ ಇಳಿಮುಖವಾಯಿತು. ಇದೇ ಕಾರಣಕ್ಕೆ ಈಗ ಲಕ್ಷಾಂತರ ವಿದ್ಯಾರ್ಥಿಗಳು ಆರ್​ಟಿಇ ಕಾಯ್ದೆಯ ತಿದ್ದುಪಡಿ ಮಾಡಲು ಪ್ರಧಾನಿಗೆ ಪತ್ರ ಬರೆಯುವ ಮೂಲಕ ಅಭಿಯಾನ ಶುರು ಮಾಡಿದ್ದಾರೆ.

ಪೋಷಕರು ಹಾಗೂ ಮಕ್ಕಳಿಂದ ಪ್ರಧಾನಿಗೆ ಪತ್ರ ಅಭಿಯಾನ ಆರಂಭವಾಗಿದ್ದು ಖಾಸಗಿ ಶಾಲೆಗಳ ಒಕ್ಕೂಟವೂ ಮಕ್ಕಳಿಗೆ ಅಭಿಯಾನದಲ್ಲಿ ಸಾಥ್ ಕೊಡುತ್ತಿದೆ. ಆರ್​ಟಿಇ ಕಾಯ್ದೆಗೆ ಮಾಡಲಾದ ತಿದ್ದುಪಡಿಯಿಂದ ಲಕ್ಷಂತಾರ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಈ ಹಿಂದೆ ಕುಮಾರಸ್ವಾಮಿ 2019 ರಲ್ಲಿ ಸಿಎಂ ಆದ ವೇಳೆ ಶಿಕ್ಷಣ ಕಾಯ್ದೆಗೆ ತಂದ ತಿದ್ದುಪಡಿಯಿಂದ ಬೆಂಗಳೂರಿನಲ್ಲಿ ಆರ್​ಟಿಇ ಕೇವಲ ಬೆರಳಣೆಕೆಯಷ್ಟು ವಾರ್ಡ್​​ಗಳಲ್ಲಿ ಮಾತ್ರ ಸಿಮೀತ ಆಗುವ ಹಾಗಾಗಿದೆ. ರಾಜ್ಯದಲ್ಲಿ ಆರ್​ಟಿಇ ಕಾಯ್ದೆಗೆ ಮರು ತಿದ್ದುಪಡಿಗೆ ಎಲ್ಲಡೆ ಒತ್ತಾಯ ಶುರುವಾಗಿದೆ. ಆದರೆ ಶಿಕ್ಷಣ ಸಚಿವರು ಮಾತ್ರ ಸದ್ಯ ಆರ್ ಆರ್​ಟಿಇ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಆರ್​ಟಿಇ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ಏನು?

ಆರ್‌ಟಿಇ ಅಡಿಯಲ್ಲಿ ಸೀಟು ಪಡೆಯಬೇಕಾದರೆ ಪಾಲಕರು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಅರ್ಜಿ ಹಾಕಬಹುದು ಎಂದು ಬದಲಾವಣೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಇರುವುದರಿಂದ ಪಾಲಕರಿಗೆ ಆರ್‌ಟಿಇ ಕಾಯ್ದೆ ಅಡಿ ಪ್ರಯೋಜನ ಪಡೆಯುವುದು ಕಷ್ಟವಾಗಿದೆ. ಅರ್ಜಿ ಹಾಕಿದರೂ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಪಾಲಕರು ಆಸಕ್ತಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಶಿಕ್ಷಣದಲ್ಲಿ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್

ಆರ್​ಟಿಇ ತಿದ್ದುಪಡಿಗೆ ಈಗ ಪ್ರಧಾನಿ ಮೊರೆ ಹೋಗಲು ಮಕ್ಕಳು ಮತ್ತು ಪೋಷಕರು ಅಭಿಯಾನ ಆರಂಭ ಮಾಡಿದ್ದಾರೆ. ಇದು ಬದಲಾವಣೆ ತರಬಲ್ಲದೇ ಎಂಬುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?