ಬೆಂಗಳೂರಿನ ಈ ರಸ್ತೆಯಲ್ಲಿ 30 ದಿನ ಸಂಚಾರ ಬಂದ್, ಮಾರ್ಗ ಬದಲಾವಣೆ ಇಲ್ಲಿದೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೆಲವು ರಸ್ತೆಗಳಲ್ಲಿ 30 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಯಾವ ಯಾವ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ? ಇಲ್ಲಿದೆ ವಿವರ. ಮಾರ್ಗ ಬದಲಾವಣೆ ಇಲ್ಲಿದೆ.
ಬೆಂಗಳೂರು, ಆಗಸ್ಟ್ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೆಲವು ರಸ್ತೆಗಳಲ್ಲಿ 30 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ (Bengaluru Traffic Police) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ ಯಾವ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ? ಇಲ್ಲಿದೆ ವಿವರ
ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ:
ಕಬ್ಬನ್‌ಪೇಟೆ ಮುಖ್ಯ ರಸ್ತೆಯ ಅವಿನ್ಯೂ ರಸ್ತೆಯಿಂದ ಸಿದ್ದಣ್ಣ ಗಲ್ಲಿವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಬನ್ನಪ್ಪ ಪಾರ್ಕ್ ರಸ್ತೆಯ ಅವಿನ್ಯೂ ರಸ್ತೆಯಿಂದ 15ನೇ ಕ್ರಾಸ್‌ವರೆಗೆ, ವಿಲ್ ರಸ್ತೆಯ ಡಾ.ಟಿ.ಸಿ.ಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಅಕ್ಕಿಪೇಟೆ ಮುಖ್ಯ ರಸ್ತೆವರೆಗೆ, ಆರ್ಟಿ ಸ್ಟ್ರೀಟ್ನ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ, ಅವ್ಯೆನ್ಯೂ ರಸ್ತೆವರೆಗೆ ಮತ್ತು ಬಳೆಪೇಟೆ ಮುಖ್ಯರಸ್ತೆವರೆಗೆ, ಸಿಟಿ ಸ್ಟ್ರೀಟ್ನ ದೇವರದಾಸಿಮಯ್ಯ ರಸ್ತೆಯಿಂದ ಓಟಿಸಿ ರಸ್ತೆ (ನಗರ್ತ ಪೇಟೆ ಮುಖ್ಯರಸ್ತೆ) ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಮಾರ್ಗ ಬದಲಾವಣೆ ಇಲ್ಲಿದೆ
- ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿ ಕಾಮಗಾರಿ ಸಂದರ್ಭದಲ್ಲಿ ಬನ್ನಪ್ಪರಸ್ತೆ ಮತ್ತು ಕೆಜಿ ರಸ್ತೆಗಳನ್ನು ಪರ್ಯಾಯ ಮಾರ್ಗವಾಗಿ ಉಪಯೋಗಿಸಬಹುದು.
- ಪೊಲೀಸ್ ಠಾಣೆ ಜಂಕ್ಷನ್‌ನಿಂದ ಅವೆನ್ಯೂ ರಸ್ತೆಕಡೆ ಸಂಚರಿಸುವ ವಾಹನಗಳು ಕೆಜಿ ರಸ್ತೆ ಮುಖಾಂತರ ಸಂಚರಿಸಿ ಅವೆನ್ಯೂ ರಸ್ತೆ ತಲುಪಬಹುದು.
- ಬನ್ನಪ್ಪ ರಸ್ತೆಯಲ್ಲಿ ಕಾಮಗಾರಿ ಸಂದರ್ಭದಲ್ಲಿ ಕಬ್ಬನ್‌ಪೇಟೆ ಮುಖ್ಯರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಉಪಯೋಗಿಸಬಹುದು.
- ರಾಯನ್ ರಸ್ತೆ ಜಂಕ್ಷನ್‌ನಿಂದ ಬರುವ ವಾಹನಗಳು ಡಾ.ಟಿ.ಸಿ.ಎಂ. ರಾಯನ್ ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು – ಗೂಡ್ ಶೆಡ್ ರಸ್ತೆಯಲ್ಲಿ ಸಾಗಿ -ಶಾಂತಲಾ ಜಂಕ್ಷನ್ ನಲ್ಲಿ – ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.
“ಸಂಚಾರ ಸಲಹೆ / Traffic advisory” pic.twitter.com/lMRseISinc
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 20, 2024
ಬಿನ್ನಿಮಿಲ್ ಜಂಕ್ಷನ್ ನಿಂದ ಬರುವ ವಾಹನಗಳು ಬನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಾಗಿ -ಸಿರಸಿ ವೃಕ್ಷದಲ್ಲಿ ಎಡ ತಿರುವು ಪಡೆದು ಮೈಸೂರು ರಸ್ತೆ ಮೂಲಕ ಸಂಚರಿಸಬಹುದು.
ಮೈಸೂರು ರಸ್ತೆಯಿಂದ ಬರುವ ವಾಹನಗಳು ಗೂಡ್ ಶೆಡ್ ರಸ್ತೆಯಲ್ಲಿ ಸಾಗಿ ಶಾಂತಲಾ ಜಂಕ್ಷನ್ ನಲ್ಲಿ – ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯರಸ್ತೆ ಮುಖಾಂತರ ಸಂಚರಿಸಬಹುದು.
ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಜಿಕಾ ತಲೆನೋವು, ಗರ್ಭಿಣಿಯರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಗೆ ಸಿದ್ಧತೆ
ಆರ್.ಟಿ ಸ್ಟ್ರೀಟ್ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಮಾಮೂಲ್ ಪೇಟೆಗೆ (ಬೆಳ್ಳಿ ಬಸವಣ್ಯ ದೇವಸ್ಥಾನ ರಸ್ತೆ) ಎಡ ತಿರುವು ಪಡೆದು ಅವೆನ್ಯೂ ರಸ್ತೆಯನ್ನು ಸಂಪರ್ಕಿಸಬಹುದು.
ಆರ್.ಟಿ ಸ್ಟ್ರೀಟ್ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಬಳಪೇಟೆ ಮುಖ್ಯರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಚಿಕ್ಕಪೇಟೆ ವೃತ್ರದಲ್ಲಿ ಬಲ ತಿರುವು ಪಡೆದು ಓಟಿಸಿ ರಸ್ತೆ ಮುಖಾಂತರ ಬಳಪೇಟಿ ಮುಖ್ಯರಸ್ತೆಯನ್ನು ಸಂಪರ್ಕಿಸಬಹುದು.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 20, 2024
ಸಿಟಿ ಸ್ಟ್ರೀಟ್ ರಸ್ತೆಯಲ್ಲಿ ದೇವರ ದಾಸಿಮಯ್ಯ ರಸ್ತೆ ಯಿಂದ ಓಟಿಸಿ ರಸ್ತೆವರೆಗೆ) ಕಾಮಗಾರಿ ನಡೆಯುವ ವೇಳೆ ದೇವರ ದಾಸಿಮಯ್ಯ ರಸ್ತೆಯಿಂದ ನಗರ್ತ ಪೇಟೆಗೆ ಸಂಪರ್ಕಿಸಬೇಕಾದ ವಾಹನಗಳು ದೇವರ ದಾಸಿಮಯ್ಯ ರಸ್ತೆಯಲ್ಲಿ ಮುಂದುವರೆದು ಸಿದ್ದಣ್ಣ ಗಲ್ಲಿ ರಸ್ತೆಗೆ ಬಲ ತಿರುವು ಪಡೆದು ನಗರ್ತ ಪೇಟೆ ರಸ್ತೆಯನ್ನು ಸಂಪರ್ಕಿಸಬಹುದು.
ನಗರ್ತ ಪೇಟೆ ರಸ್ತೆಯಿಂದ ದೇವರ ದಾಸೀಮಯ್ಯ ರಸ್ತೆ ಕಡೆಗೆ ಸಿಟಿ ಸ್ಟ್ರೀಟ್ ಮುಖಾಂತರ ಸಂಚರಿಸುವ ವಾಹನಗಳು ನಗರ್ತ ಪೇಟಿ ರಸ್ತೆಯಲ್ಲಿ ಎಡತಿರುವು ಪಡೆದು ಅವನ್ನೂ ರಸ್ತೆ ಮುಖಾಂತರ ಸಾಗಿ ದೇವರ ದಾಸೀಮಯ್ಯ ರಸ್ತೆಯನ್ನು ಸಂಪರ್ಕಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 am, Wed, 21 August 24