ಬೆಂಗಳೂರಿನಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನ ಬ್ಯಾನ್ ಮಾಡಿ ಮೂರು ವರ್ಷಗಳೇ ಕಳೆದಿದೆ. ಆದ್ರೆ ಈ ಬ್ಯಾನ್ ಆಗಿರುವುದು ನಗರದ ಗಣೇಶ ಮೂರ್ತಿ ವ್ಯಾಪಾರಸ್ಥರಿಗೆ ಅನ್ವಯವಾಗುತ್ತಿಲ್ಲ. ಹೀಗಾಗಿ ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಪಿಒಪಿ ಗಣೇಶ ಮೂರ್ತಿಗಳನ್ನ ವ್ಯಾಪಾರ ಮಾಡುತ್ತಿದ್ದು, ಕ್ರಮ ತೆಗೆದುಕೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.
ನಗರದಲ್ಲಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಅದ್ರಲ್ಲಿ ಪಿಒಪಿ ಗಣೇಶ ಮೂರ್ತಿಗಳೇ ಹೆಚ್ಚು ಕಂಡುಬರುತ್ತಿದ್ದು, ರಾಜಾರೋಷವಾಗಿ ಗ್ರಾಹಕರು ಕೂಡ ಪಿಒಪಿ ಗಣೇಶ ಮೂರ್ತಿಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಕ್ರಮ ತಗೆದುಕೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಂದು ಗೈಡ್ ಲೈನ್ಸ್ ಹೊರಡಿಸಿ ಸುಮ್ಮನಾಗಿದ್ದಾರೆ.
ಇನ್ನು ಪಿಒಪಿ ಗಣೇಶ ಮೂರ್ತಿಗಳನ್ನ ಬ್ಯಾನ್ ಮಾಡಿದ್ರೆ ಎಲ್ಲಾ ಏರಿಯಾಗಳಲ್ಲೊ ಮಾಡ್ಬೇಕು. ಒಂದು ಏರಿಯಾದಲ್ಲಿ ಮಾಡಿ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯಬೇಡಿ. ನಗರದ ಅತ್ತಿಬೆಲೆ, ನಾಗಸಂದ್ರ, ಟ್ಯಾನಿರೋಡ್, ದೊಡ್ಡ ಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಪಿಒಪಿ ಗಣೇಶ ಮೂರ್ತಿಗಳೇ ಇದೆ. ಆದ್ರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಈ ಬಾರಿ ವ್ಯಾಪಾರ ವಹಿವಾಟು ಕೂಡ ನಡೆಯುತ್ತಿಲ್ಲ. ಮಣ್ಣಿನ ಗಣೇಶ ಮೂರ್ತಿಗಳನ್ನ ತೆಗೆದುಕೊಳ್ತಾ ಇಲ್ಲ ಅಂತ ವ್ಯಾಪಾರಸ್ಥರು ಹೇಳಿದ್ರು.
ಇನ್ನು, ಪ್ರತಿವರ್ಷ ಪಿಒಪಿ ಗಣೇಶ ಮೂರ್ತಿಗಳನ್ನೆ ತೆಗೆದುಕೊಂಡು ಹೋಗುತ್ತಿದ್ವಿ. ಈ ವರ್ಷವು ಪಿಒಪಿ ಗಣೇಶಗಳನ್ನ ತೆಗೆದುಕೊಂಡಿದ್ದೀವಿ. ನಗರದೆಲ್ಲಡೆ ಗಣೇಶ ಮೂರ್ತಿಗಳು ಲಭ್ಯವಾಗುತ್ತಿವೆ ಅಂತ ಗ್ರಾಹಕರು ಹೇಳಿದ್ರು.
ಒಟ್ನಲ್ಲಿ, ಪಿಒಪಿ ಗಣೇಶ ಮೂರ್ತಿಗಳಿಂದ ಮಾಲಿನ್ಯ ಹೆಚ್ಚಳವಾಗುತ್ತೆ. ನೀರು ಕಲುಷಿತವಾಗುತ್ತೆ ಅಂತ ಬ್ಯಾನ್ ಮಾಡಲಾಗಿತ್ತು. ಆದ್ರೆ ಬ್ಯಾನ್ ಎನ್ನುವುದು ಕೇವಲ ಹೆಸರಿಗೆ ಮಾತ್ರ ಸಿಮೀತವಾಗಿದ್ದು, ಅಧಿಕಾರಿಗಳು ಯಾರು ಕ್ರಮ ತೆಗೆದುಕೊಕೊಳ್ಳುತ್ತಿಲ್ಲ.
ಈ ಕುರಿತಾಗಿ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ತನಗೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಯಾರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಸಧ್ಯ ಬೆಂಗಳೂರಿನಲ್ಲಿ ಪ್ರತಿದಿನ ಮಾಲಿನ್ಯ ಹೆಚ್ಚಾಗುತ್ತಿದ್ದು, ಈ ಪಿಒಪಿ ಗಣೇಶ ಮೂರ್ತಿಗಳಿಂದಲೂ ಮತ್ತಷ್ಟು ಮಾಲಿನ್ಯವನ್ನ ಹೆಚ್ಚಳ ಮಾಡುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದ್ದು, ಸಚಿವ ಈಶ್ವರ್ ಖಂಡ್ರೆ ತಮ್ಮ ಇಲಾಖೆಯತ್ತ ಗಮನ ಹರಿಸಬೇಕಾಗಿದೆ.
Published On - 7:24 am, Wed, 21 August 24