ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್ ಎಫೆಕ್ಟ್: ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು!
ಬೆಂಗಳೂರಿನಲ್ಲಿ ಕ್ಷಣಕ್ಕೊಂದು ಹವಾಮಾನ ಇರುವ ಕಾರಣ ಹುಷಾರ್ ಇಲ್ಲ ಅಂತ ಆಸ್ಪತ್ರೆಗೆ ವಿಸಿಟ್ ಕೊಡೋರಾ ಸಂಖ್ಯೆ ದುಪ್ಪಟ್ಟಾಗಿದ್ದು, ಟೆಸ್ಟಿಂಗ್ ಪ್ರಮಾಣ ಹೆಚ್ಚಳಗೊಂಡಿದೆ. ಜಿಗಣಿಯಲ್ಲಿ ಜೀಕಾ ವೈರಸ್ ಪತ್ತೆ ಬೆನ್ನಲ್ಲೇ ಅಲರ್ಟ್ ಆದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ನಗರದ ಆಸ್ಪತ್ರೆಗಳಿಗೆ ಸೂಚಿಸಿದೆ.
ಬೆಂಗಳೂರು, ಆಗಸ್ಟ್ 22: ರಾಜಧಾನಿ ಬೆಂಗಳೂರಿನಲ್ಲಿ (bangaluru) ಯಾರಿಗೆ ನೋಡಿದರೂ ಶೀತ, ಕೆಮ್ಮು, ಜ್ವರ. ಹುಷಾರಿಲ್ಲ ಅಂತ ಆಸ್ಪತ್ರೆಗೆ ಹೋಗೊರಿಗೆ ಸದ್ಯ ವೈದ್ಯರು ಟೆಸ್ಟ್ ಮಾಡಿಸಿಕೊಳ್ಳಕ್ಕೆ ಹೇಳ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲೆ ಪ್ರಮಾಣದ ಪರೀಕ್ಷೆಗಳು ನಡೆಯುತ್ತಿದ್ದು, ಲ್ಯಾಬ್ಗಳ ಮೇಲೆ ಒತ್ತಡ ಹೆಚ್ಚಿದೆ. ಬೆಳಗ್ಗೆ ಉರಿ ಬಿಸಿಲು, ಸಂಜೆ ಆಗುತ್ತಿದ್ದಂತೆ ಮಳೆ. ಹೀಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವೆದರ್, ಸದ್ಯ ಸಿಟಿ ಜನರ ಆರೋಗ್ಯ ಹದಗೆಡಿಸಿದೆ.
ಹುಷಾರ್ ಇಲ್ಲ ಅಂತ ಆಸ್ಪತ್ರೆಗೆ ವಿಸಿಟ್ ಕೊಡುವವರ ಸಂಖ್ಯೆ ದುಪ್ಪಟ್ಟಾಗಿದ್ದು, ಟೆಸ್ಟಿಂಗ್ ಪ್ರಮಾಣ ಹೆಚ್ಚಳಗೊಂಡಿದೆ. ಜಿಗಣಿಯಲ್ಲಿ ಜೀಕಾ ವೈರಸ್ ಪತ್ತೆ ಬೆನ್ನಲ್ಲೇ ಅಲರ್ಟ್ ಆದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ನಗರದ ಆಸ್ಪತ್ರೆಗಳಿಗೆ ಸೂಚಿಸಿದೆ. ಜೀಕಾ, ಡೆಂಘಿ ಗುಣಲಕ್ಷಣಗಳನ್ನು ನೆಗ್ಲೆಟ್ ಮಾಡದಂತೆ ತಿಳಿಸಿದೆಮ ಹೀಗಾಗಿ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಪ್ರಮಾಣ ದಾಖಲೆ ರೀತಿಯಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ: ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ
ಒಂದು ವಾರಗಳ ಕಾಲ ಶೀತ, ಕೆಮ್ಮು, ಜ್ವರ, ಮೈಕೈ ನೋವು, ತಲೆನೋವು, ಮೈ ಮೇಲೆ ರಾಶ್ ಇದ್ದರೆ ಟೆಸ್ಟಿಂಗ್ ಮಾಡಿಸಲು ತಿಳಿಸಿದೆ. ಹೀಗಾಗಿ ಈ ಗುಣಲಕ್ಷಣಗಳನ್ನು ಹೊತ್ತು ಬರುವವರಿಗೆ ಟೆಸ್ಟಿಂಗ್ ಮಾಡಿಸಲಾಗ್ತಿದೆ. ವೈರಲ್ ಇನ್ಫೆಕ್ಷನ್ ಮುಖ್ಯವಾಗಿ ಡೆಂಘಿ, ಜೀಕಾ ಗುಣಲಕ್ಷಣಗಳು ಇದ್ದರೆ ವಿವಿಧ ಮಾದರಿಯ ಬ್ಲಡ್ ಟೆಸ್ಟ್ ನಡೆಸಲಾಗ್ತಿದೆ. ಕೇವಲ ಜಯನಗರ ಸಾರ್ವಜನಿಕ ಆಸ್ಪತ್ರೆ ಒಂದರೆಲ್ಲೇ ಪ್ರತಿ ದಿನ 1200 ರಿಂದ 1400 ರೋಗಿಗಳು ಓಪಿಡಿಗೆ ಬರ್ತಿದ್ದಾರೆ. ಈ ಪೈಕಿ ರೋಗ ಲಕ್ಷಣ ಕಂಡು ಬರುವ 400 ರಿಂದ 450 ರೋಗಿಗಳಿಗೆ ಬ್ಲಡ್ ಟೆಸ್ಟ್ ಅವಶ್ಯಕತೆ ಕಂಡು ಬರ್ತಿದೆ.
ಇನ್ನು ನಗರದಲ್ಲಿ ಡೆಂಘೀ ಜೊತೆ ಬೇರೆ ಬೇರೆ ಖಾಯಿಲೆಗಳ ಏರಿಕೆಯಿಂದ. ಬೆಂಗಳೂರಿನಲ್ಲಿ ಪ್ಲೇಟ್ ಲೆಟ್ ಗಳಿಗೂ ಅಧಿಕ ಬೇಡಿಕೆ ಉಂಟಾಗಿದೆ. ಹೆಚ್ಚುತ್ತಿರುವ ಪ್ಲೇಟ್ ಲೆಟ್ ಗಳ ಬಗ್ಗೆ ಮಾಹಿತಿ ನೀಡಿದ ಲಯನ್ಸ್ ಬ್ಲಡ್ ಗ್ರೂಪ್ ನ ದೀಪಕ್ ಸುಮನ್ ಕಳೆದೊಂದು ತಿಂಗಳಲ್ಲಿ ಬ್ಲೆಡ್ ಬೇಡಿಕೆ ಹೆಚ್ಚಾಗಿದೆ ಡೆಂಘೀ ನಿಂದ ವೈಟ್ ಬ್ಲಡ್ ಪ್ಲೇಟ್ ಗೂ ಬೇಡಿಕೆ ಹೆಚ್ಚಾಗಿದೆ ಕಳೆದ ಎರಡು ತಿಂಗಳ ಹಿಂದೆ ದಿನಕ್ಕೆ ಕಡಿಮೆ ಯೂನಿಟ್ ಗಳಷ್ಟು ಬ್ಲಡ್ ಪ್ಲೇಟ್ ಗಳನ್ನು ಕೊಡುತ್ತಿದ್ದೆವು. ಆದರೀಗ, ದಿನಕ್ಕೆ 70 ಯೂನಿಟ್ ಗಳನ್ನು ಕೊಡುತ್ತಿದ್ದೇವೆ ಅಂತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಐವರಲ್ಲಿ ಝೀಕಾ ವೈರಸ್ ಪತ್ತೆ, ಗರ್ಭಿಣಿಯರೇ ಎಚ್ಚರ!
ವಿವಿಧ ಮಾದರಿಯ ಪರೀಕ್ಷೆಗಳನ್ನು ನಿತ್ಯ ಮಾಡಿಸಲಾಗ್ತಿದೆ. ಇದರಿಂದ ಲ್ಯಾಬ್ ಸಿಬ್ಬಂದಿಗಳು ಹಾಗೂ ವೈದ್ಯರ ಮೇಲೆ ಒತ್ತಡ ಹೆಚ್ಚಳಗೊಂಡಿದೆ. ಬ್ಲೆಡ್ ಬೇಡಿಕೆಯೂ ಹೆಚ್ಚಾಗಿದೆ ಹೀಗಾಗಿ ಜನರಿಗೆ ಮಳೆಗಾಲ ಮುಗಿಯುವವರೆಗೆ ಕೊಂಚ ಸ್ವಚ್ಛತೆ ಕಡೆ ಆದ್ಯತೆ ನೀಡಿ, ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಗೆ ನೆರವಾಗುವಂತೆ ವೈದ್ಯರು ಮನವಿ ಮಾಡ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.