ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ

ಅತಿಯಾದ ಸೆಕೆ ತಾಪಮಾನದಿಂದ ವ್ಯಾಪಕ ಬೆವರು, ಸುಸ್ತು, ಒತ್ತಡದಿಂದ ಬೆಂಗಳೂರು ಜನರು ಕಂಗಾಲಾಗಿದ್ದಾರೆ. ಹೀಗಾಗಿ ಆತಂಕದಲ್ಲಿ ಆಸ್ಪತ್ರೆಗೆ ಜನರು ಹೋಗುತ್ತಿದ್ದಾರೆ. ಅತಿಯಾದ ಬೆವರಿಕೆ ಹಾಗೂ ಸುಸ್ತು, ಆಯಾಸದಿಂದ ಜನರು ಆಸ್ಪತ್ರೆಗೆ ಬರುತ್ತಿರುವುದರಿಂದ ವೈದ್ಯರೇ ಶಾಕ್ ಆಗಿದ್ದಾರೆ. ಹೀಗಾಗಿ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ
ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 18, 2024 | 3:01 PM

ಬೆಂಗಳೂರು, ಆಗಸ್ಟ್​​ 18: ಬೆಳಗೆಲ್ಲಾ ಸುಡುವ ಬಿಸಿಲು, ತೀವ್ರ ಸೆಕೆ (heat), ಸಂಜೆಯಾದರೆ ಚಳಿ, ರಾತ್ರಿಯಾದರೆ ಮಳೆ ಮತ್ತು ಕೆಲವು ಸರಿ ಮುಂಜಾನೆಯೇ ಮೋಡ ಕವಿದ ವಾತಾವರಣ (weather) ಇರುತ್ತದೆ. ಇದು ಬೆಂಗಳೂರಿನ ಸದ್ಯದ ಹವಾಮಾನ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಬೆಂಗಳೂರಿನ ಹವಾಮಾನಕ್ಕೆ ಸಿಲಿಕಾನ್​ ಸಿಟಿ ಜನರು ಫುಲ್​ ಹೈರಾಣಾಗುವುದರೊಂದಿಗೆ ಹೆದರುವಂತಾಗಿದೆ.

ಬೆಂಗಳೂರಿನಲ್ಲಿ ವಿಪರೀತ ಸೆಕೆ ದಾಖಲು

ಹವಾಮಾನ ಬದಲಾವಣೆಯಿಂದ ಚಳಿಗಾಲದಲ್ಲೂ ಸೆಕೆ, ಸುಸ್ತು ಆಗುತ್ತಿದೆ. ಇದರಿಂದ ಅಯ್ಯೋ ಫುಲ್ ಸುಸ್ತು, ಅಬ್ಬಬ್ಬಾ ತಡೆಯುವುದಕ್ಕೆ ಆಗದಷ್ಟು ಸೆಕೆ ಎನ್ನುತ್ತಿದ್ದಾರೆ ಜನರು. ರಾಜಧಾನಿಯಲ್ಲಿ ವಿಪರೀತ ಸೆಕೆ ದಾಖಲಾಗಿದೆ. ಗರಿಷ್ಠ ತಾಪಮಾನದಿಂದ ವ್ಯಾಪಕ ಸೆಕೆ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಐವರಲ್ಲಿ ಝೀಕಾ ವೈರಸ್ ಪತ್ತೆ​​​, ಗರ್ಭಿಣಿಯರೇ ಎಚ್ಚರ!

ಅತಿಯಾದ ಸೆಕೆ ತಾಪಮಾನದಿಂದ ವ್ಯಾಪಕ ಬೆವರು, ಸುಸ್ತು, ಒತ್ತಡದಿಂದ ರಾಜಧಾನಿ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಆತಂಕದಲ್ಲಿ ಆಸ್ಪತ್ರೆಗೆ ಜನರು ಹೋಗುತ್ತಿದ್ದಾರೆ. ಅತಿಯಾದ ಬೆವರಿಕೆ ಹಾಗೂ ಸುಸ್ತು, ಆಯಾಸದಿಂದ ಜನರು ಆಸ್ಪತ್ರೆಗೆ ಬರುತ್ತಿರುವುದರಿಂದ ವೈದ್ಯರೇ ಶಾಕ್ ಆಗಿದ್ದಾರೆ. ಹೀಗಾಗಿ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದೆರಡು ದಿನದಿಂದ ಹವಮಾನದಲ್ಲಿ ವ್ಯಾಪಕ ಬದಲಾವಣೆ ಆಗಿದೆ. ಹೀಗಾಗಿ ಇದರಿಂದ ಆರೋಗ್ಯದಲ್ಲಿ ವ್ಯಾಪಕ ಬದಲಾವಣೆ ಉಂಟಾಗಿದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಒತ್ತಡ ಮಾಡಿಕೊಳ್ಳದ್ದಂತೆ ಸಲಹೆ ನೀಡಿದ್ದು, ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್, ನೂಕು ನುಗ್ಗಲಲ್ಲೇ ಫ್ಲವರ್ ಶೋ ವೀಕ್ಷಿಸಿದ ಪ್ರವಾಸಿಗರು

ಇನ್ನು ಈ ಸಮಯದಲ್ಲಿ ದೊಡ್ಡವರು ಹಾಗೂ ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ ಮತ್ತು ವಾಂತಿ ಪ್ರಕರಣಗಳು ಹೆಚ್ಚಳ ಆಗಿವೆ. ಬದಲಾದ ವಾತಾವರಣ ಹಿನ್ನಲೆ ಡೆಂಗ್ಯೂ, ಟೈಫಾಯ್ಡ್​ ಮತ್ತು ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.