ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ ಟು ಮಾದಾವರ ಮೆಟ್ರೋ ಟ್ರಯಲ್ ರನ್ ಆರಂಭ

ನಾಗಸಂದ್ರ - ಮಾದಾವರ ಮೆಟ್ರೋ ಮಾರ್ಗದಲ್ಲಿ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ BMRCL ನಿಂದ‌ ಮೊದಲ ಟ್ರಯಲ್ ರನ್ ಆರಂಭವಾಗಿದೆ. ಐದು ವರ್ಷಗಳಿಂದ ಮೆಟ್ರೋಗಾಗಿ ಕಾಯುತ್ತಿದ್ದ ಈ ಭಾಗದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ.

Follow us
| Updated By: ಆಯೇಷಾ ಬಾನು

Updated on:Aug 18, 2024 | 2:53 PM

ಬೆಂಗಳೂರು, ಆಗಸ್ಟ್​.18: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್‌. ನಾಗಸಂದ್ರ ಟು ಮಾದಾವರ ಮೆಟ್ರೋ ಟ್ರಯಲ್ ರನ್ ಆರಂಭವಾಗಿದೆ. ನಾಗಸಂದ್ರ ಹಾಗೂ ಮಾದಾವರದ (Nagasandra to Madavara) ನಡುವಿನ 3.7 ಕಿಮೀ ಅಂತರದ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ. 600 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ BMRCL ನಿಂದ‌ ಮೊದಲ ಟ್ರಯಲ್ ರನ್ ಆರಂಭವಾಗಿದೆ. ಐದು ವರ್ಷಗಳಿಂದ ಮೆಟ್ರೋಗಾಗಿ ಕಾಯುತ್ತಿದ್ದ ಈ ಭಾಗದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ.

ನಾಗಸಂದ್ರ – ಮಾದಾವರ ಮೆಟ್ರೋ ಮಾರ್ಗದಲ್ಲಿ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಮಾದಾವರ ಮೆಟ್ರೋ ಸ್ಟೇಷನ್​​ನಿಂದ ನೆಲಮಂಗಲಕ್ಕೆ ಕೇವಲ ಆರು ಕಿಮೀ ಮಾತ್ರ ದೂರವಿದೆ. ಸಿಟಿಗೆ ಹೋಗಿ ಬರುವುದಕ್ಕೆ ಸುಲಭ ಆಗುತ್ತದೆ.

ಇದನ್ನೂ ಓದಿ: Viral Video: ಅತ್ಯಾಚಾರ ಎಸಗಲು ಮುಂದಾದ ಕಾಮಾಂಧನನ್ನು ಕೊಂಬಿನಿಂದ ತಿವಿದು ಬಿಸಾಕಿದ ಹಸು; ವಿಡಿಯೋ ವೈರಲ್

ನಾಗಸಂದ್ರದಿಂದ ಮಾದಾವರದ ನಡುವಿನ ಮಾರ್ಗದಲ್ಲಿ ಮೂರು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ. ಹಸಿರು ಮಾರ್ಗ ವಿಸ್ತರಣೆಯಿಂದ ನಗರದ ಪ್ರಮುಖ ಪ್ರದರ್ಶನ ಕೇಂದ್ರವಾದ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಗೆ ಸಂಪರ್ಕವನ್ನು ಹೊಂದಿದೆ.

ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರದ ನಾಗರಿಕರು ಮೆಟ್ರೋದಲ್ಲಿ ಪ್ರಯಾಣಿಸಲು ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಬರಬೇಕಾಗಿತ್ತು, ಈಗ ಈ ಮಾರ್ಗ ಸಂಪೂರ್ಣವಾದ ಬಳಿಕ ಐದು ಕಿಲೋಮೀಟರ್‌ಗಳಷ್ಟು ಪ್ರಯಾಣಿಸುವುದು ತಪ್ಪಲಿದೆ.

ನಾಗಸಂದ್ರ-ಮಾದಾವರದ ನಡುವಿನ ಮೂರು ಕಿ.ಮೀ. ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು. ಭೂಸ್ವಾಧೀನ ಸಮಸ್ಯೆಗಳು, ವಿಶೇಷವಾಗಿ ನೈಸ್‌ ರಸ್ತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬ ಮತ್ತು ಕೋವಿಡ್ ಸಾಂಕ್ರಾಮಿಕ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳಾಗಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:38 pm, Sun, 18 August 24