AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಪಾಲರ ಆದೇಶದ ವಿರುದ್ಧ ನಾಳೆಯಿಂದ ಸಿದ್ದರಾಮಯ್ಯ ಕಾನೂನು ಯುದ್ಧ, ಮಂತ್ರಾಲಯ ಪ್ರವಾಸ ರದ್ದು

ಮುಡಾದ 14 ಸೈಟ್‌ ವಿಚಾರವೇ ಇದೀಗ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಆದರೂ ಜಗ್ಗದ ಕೈ ಪಡೆ ಕಾನೂನು ಸಮರ ಸಾರಿದೆ. ನಾಳೆಯಿಂದ(ಆಗಸ್ಟ್ 18) ಅಸಲಿ ಕಾನೂನು ಯುದ್ಧ ಶುರುವಾಗಲಿದೆ.

ರಾಜ್ಯಪಾಲರ ಆದೇಶದ ವಿರುದ್ಧ ನಾಳೆಯಿಂದ ಸಿದ್ದರಾಮಯ್ಯ ಕಾನೂನು ಯುದ್ಧ, ಮಂತ್ರಾಲಯ ಪ್ರವಾಸ ರದ್ದು
ಸಿದ್ದರಾಮಯ್ಯ
TV9 Web
| Edited By: |

Updated on: Aug 18, 2024 | 2:52 PM

Share

ಬೆಂಗಳೂರು, (ಆಗಸ್ಟ್​ 18): ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಲರು ಅನುಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಾನೂನು ಸಮರಕ್ಕೆ ತೊಡೆ ತಟ್ಟಿ ನಿಂತಿರುವ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬಲ ಸಿಕ್ಕಿದೆ. ಹೈಕಮಾಂಡ್ ಕೂಡಾ ನೀವು ಕಾನೂನು ಹೋರಾಟ ನಡೆಸಿ, ಹೈಕಮಾಂಡ್ ನಿಮ್ಮ ಜೊತೆಗಿರುತ್ತೆ ಅಂತಾ ಸೂಚನೆ ಕೊಟ್ಟಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಇಂದು (ಆಗಸ್ಟ್ 18) ಕಾವೇರಿ ನಿವಾಸದಲ್ಲಿ ಕೆಲ ಆಪ್ತ ಸಚಿವರು, ವಕೀಲರು ಜತೆ ಸಮಾಲೋಚನೆ ನಡೆಸಿದ್ದು, ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿಯೇ ನಾಳೆಯೇ(ಆಗಸ್ಟ್ 19) ಸಿಎಂ ಪರವಾಗಿ ಅಭಿಷೇಕ್ ‌ಮನು ಸಿಂಘ್ವಿ, ಸಿಬಲ್ ಅವರು ಹೈಕೋರ್ಟ್​​ ಅರ್ಜಿ ಸಲ್ಲಿಸಲಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ನಾಳಿನ ಮಂತ್ರಾಲಯ ಪ್ರವಾಸ ರದ್ದು ಮಾಡಿದ್ದಾರೆ.

ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲೂ ಸಚಿವರೂ ಒಮ್ಮತದ ಬೆಂಬಲ ನೀಡಿದ್ದಾರೆ. ಕ್ಯಾಬಿನೆಟ್ ಬಳಿಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ್ದ ಸಿಎಂ-ಡಿಸಿಎಂ ಪ್ರಕರಣದ ಮಾಹಿತಿ ನೀಡಿದ್ದಾರೆ. ಹೀಗೆ ಎಲ್ಲಾ ಕಡೆಯಿಂದಲೂ ಬೆಂಬಲ ಪಡೆದಿರೋ ಸಿಎಂ, ಬುಧವಾರ ಶಾಸಕಾಂಗ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಲು ಮುಂದಾಗಿದ್ದಾರೆ. ಇನ್ನೊಂದೆಡೆ ರಾಜ್ಯಪಾಲರ ನಡೆ ಪ್ರಶ್ನಿಸಿದ ಕಾನೂನು ಹೋರಾಟ ಮಾಡಲು ದೆಹಲಿಯಿಂದ  ಬೆಂಗಳೂರಿಗೆ ಆಗಮಿಸಲಿರುವ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಬಳಿಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಪ್ರಾಸಿಕ್ಯೂಷನ್​ಗೆ ಅನುಮತಿ ಬೆನ್ನಲ್ಲೇ ಶಾಸಕಾಂಗ ಸಭೆ ಕರೆದ ಸಿಎಂ

ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿವಾಸ ಫುಲ್ ಬ್ಯುಸಿಯಾಗಿದೆ. ಇವತ್ತೂ ಕೂಡಾ ಸಚಿವರ ದಂಡು ಸಿಎಂ ನಿವಾಸಕ್ಕೆ ಆಗಮಿಸಿ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದೆ. ಸಚಿವರಾದ ಕೃಷ್ಣಬೈರೇಗೌಡ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಸಿಎಂ ಜೊತೆ ಚರ್ಚಿಸಿದ್ದಾರೆ.

ಯಾವ ಕೋರ್ಟ್​ಗೆ ಹೋಗಬೇಕೆಂಬ ಗೊಂದಲ

ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾಗಿದೆ. ಹೀಗಾಗಿ ಕಾನೂನು ಸಮರದ ಕುರಿತು ಸಿಎಂ ಸಿದ್ದರಾಮಯ್ಯ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸ್ಬೇಕಾ? ಸುಪ್ರೀಂಗೆ ಅರ್ಜಿ ಸಲ್ಲಿಸ್ಬೇಕಾ ಎಂದು ಭಿನ್ನ ಅಭಿಪ್ರಾಯ ವ್ಯಕ್ತವಾಗಿದ್ದವು. ಯಾಕಂದ್ರೆ ಸುಪ್ರೀಂ ಮೊರೆ ಹೋದರೆ ರಾಜಕೀಯವಾಗಿಯೂ ಅನುಕೂಲತ್ತೆಂಬ ದಾಳ ಉರುಳಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ರಾಜ್ಯಪಾಲರ ನಿರ್ಧಾರದ ಬಗ್ಗೆ ಚರ್ಚೆ ಆಗುತ್ತೆ, ಈ ಮೂಲಕ ಪ್ರಕರಣವನ್ನ ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸುವಂತೆ ಮಾಡಬಹುದು ಎನ್ನುವುದು ಸಿಎಂ ಲೆಕ್ಕಾಚಾರವಾಗಿತ್ತು. ಆದ್ರೆ, ಇದೀಗ ಆಪ್ತ ನಾಯಕರ ಜೊತೆ ಸಭೆಯಲ್ಲಿ ಹೈಕೋರ್ಟ್​​ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ