ಸಿದ್ದರಾಮಯ್ಯ ಆಪ್ತರಿಂದ ವಂಚನೆ ಆರೋಪ: ಬೀದಿಗೆ ಬಂದ ಬೆಂಗಳೂರಿನ ಕೋಟ್ಯಾಧಿಪತಿ ಕುಟುಂಬ

| Updated By: ರಮೇಶ್ ಬಿ. ಜವಳಗೇರಾ

Updated on: Oct 23, 2022 | 3:01 PM

ಸಿದ್ದರಾಮಯ್ಯ ಆಪ್ತರಿಂದ ವಂಚನೆ ಆರೋಪ ಕೇಳಿಬಂದಿದ್ದು, ಬೆಂಗಳೂರು ಮೂಲದ ಕುಟುಂಬ ಎಲ್ಲವನ್ನು ಮಾರಿಕೊಂಡು ಇದೀಗ ಬೀದಿಗೆ ಬಂದಿದೆ.

ಸಿದ್ದರಾಮಯ್ಯ ಆಪ್ತರಿಂದ ವಂಚನೆ ಆರೋಪ: ಬೀದಿಗೆ ಬಂದ ಬೆಂಗಳೂರಿನ ಕೋಟ್ಯಾಧಿಪತಿ ಕುಟುಂಬ
Antaraju Family Protes
Follow us on

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ವೈ.ಸಿ.ಸಿದ್ದರಾಮಯ್ಯ ಹಾಗೂ ಬಸವರಾಜ್ ಎನ್ನುವರ ವಿರುದ್ಧ 1.5 ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. ಇದಕ್ಕಾಗಿ ನ್ಯಾಯಬೇಕೆಂದು ಬೆಂಗಳೂರಿನ ಅಂತರಾಜ್ ಕುಟುಂಬ ತುಮಕೂರಿನ ಶಿರಾ ಗೇಟ್​ನ ಹೋಟೆಲ್ ಮುಂದೆ ಧರಣಿ ಕುಳಿತಿದೆ.

ವೈ.ಸಿ.ಸಿದ್ದರಾಮಯ್ಯರ ಸಂಬಂಧಿಯೂ ಆಗಿರುವ ಬಸವರಾಜ್​ ಸೇರಿದ ಬೀ ಹೈವ್ ಗ್ರಾಂಡ್ ತ್ರಿ ಸ್ಟಾರ್ ಹೋಟೆಲ್ ಬಾಡಿಗೆ ಪಡೆದಿದ್ದ ಅಂತರಾಜ್, ಮುಂಗಡವಾಗಿ 50 ಲಕ್ಷ ರೂ. ನೀಡಿ ಹೋಟೆಲ್ ಬಾಡಿಗೆಗೆ ಪಡೆದಿದ್ದರು. ಇಂಟೀರಿಯರ್ ಡಿಸೈನ್​​, ಪೀಠೋಪಕರಣಕ್ಕೆ 1 ಕೋಟಿ ರೂ. ಖರ್ಚು ಮಾಡಿದ್ದರು. ಆದ್ರೆ, ಹೋಟೆಲ್​ ಆರಂಭವಾಗುತ್ತಿದ್ದಂತೆ ಅಂತರಾಜ್ ನನ್ನು ಅಲ್ಲಿಂದ ಹೊರಹಾಕಿದ್ದಾರಂತೆ. ​​ ಅಲ್ಲದೇ ಹಣವೂ ನೀಡದೆ, ಹೋಟೆಲ್​​ ಓಪನ್​ಗೂ ಅವಕಾಶ ನೀಡದೆ ವಂಚನೆ ಮಾಡಿದ್ದಾರೆ ಎಂದು ಅಂತರಾಜ್​ ಅವರು ವೈ.ಸಿ.ಸಿದ್ದರಾಮಯ್ಯ, ಬಸವರಾಜ್ ವಿರುದ್ಧ ಆರೋಪಿಸಿದ್ದಾರೆ.

ಸಿಲಿಕಾನ್ ಸಿಟಿ ಮಂದಿಗೆ ದರ ದುಪ್ಪಟ್ಟು ಧಮಾಕ: ಗಗನಕ್ಕೆ ಏರಿದ ಹೂವು, ಹಣ್ಣು, ಪಟಾಕಿ ಬೆಲೆ

ಮಾಜಿ ಸಿಎಂ ಸಿದ್ದರಾಮಯ್ಯರಿಂದ ಬಿ ಹೈವ್ ಹೋಟೆಲ್ ಉದ್ಗಾಟನೆಗೊಂಡಿತ್ತು. ಈಗ ​ ಅತ್ತ ದುಡ್ಡು ಕೊಡದೇ ಇತ್ತ ಹೊಟೇಲ್ ನಡೆಸಲು ಅನುಮತಿ ಕೊಡದೇ ವಂಚನೆ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು ದುರುಪಯೋಗ ಮಾಡಿಕೊಂಡು ಆವಾಜ್ ಹಾಕುತ್ತಿದ್ದಾರೆ ಎಂದು ಅಂತರಾಜ್ ಆರೋಪಿಸಿದ್ದಾರೆ.

ಒಂದು ಡುಪ್ಲೆಕ್ಸ್ ಮನೆ, ಇನ್ನೊಂದು ಮೂರು ಅಂತಸ್ತಿನ ಮನೆ. ಎಕ್ಸ್ ಯು ವಿ ಕಾರು, ಇನ್ನೋವಾ ಕಾರು, ರಾಯಲ್ ಎನ್ ಫಿಲ್ಡ್ ಬೈಕ್ ಎಲ್ಲವೂ ಮಾರಿ ಈಗ ಬೀದಿಯಲ್ಲಿ ಕುಳಿತು ಪ್ರತಿಭಟಿಸುತ್ತಿದೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ ಹೋಟೆಲ್ ಎದುರಿನ ರಸ್ತೆಯಲ್ಲಿ ಅಂತರಾಜ್ ತಮ್ಮ ಕುಟುಂಬ ಸಮೇತ ಧರಣಿ ಕುಳಿತ್ತಿದ್ದಾರೆ.

Published On - 3:01 pm, Sun, 23 October 22