Tumakuru News: ಆ್ಯಕ್ಸೆಲ್​ ಬ್ಲೇಡ್ ಕಟ್ ಆಗಿ ಆಟೋಗೆ ಗುದ್ದಿದ ಕ್ಯಾಂಟರ್: ತಾಯಿ-ಮಗಳು ದಾರುಣ ಸಾವು

|

Updated on: Jun 16, 2023 | 12:57 PM

ನಿನ್ನೆ(ಜೂ.15)ರಾತ್ರಿ ಌಕ್ಸೆಲ್​ ಬ್ಲೇಡ್​ ಕಟ್ ಆಗಿ ಕ್ಯಾಂಟರ್​ರೊಂದು ಆಟೋಗೆ ಅಪ್ಪಳಿಸಿದ್ದು, ಆಟೋದಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ಶಾಂತಲಕ್ಷ್ಮೀ(30), ಪುತ್ರಿ ಚಿನ್ಮಯಿ(5) ಮೃತ ರ್ದುದೈವಿಗಳು.

Tumakuru News: ಆ್ಯಕ್ಸೆಲ್​ ಬ್ಲೇಡ್ ಕಟ್ ಆಗಿ ಆಟೋಗೆ ಗುದ್ದಿದ ಕ್ಯಾಂಟರ್: ತಾಯಿ-ಮಗಳು ದಾರುಣ ಸಾವು
ಮೃತ ತಾಯಿ ಮಗಳು
Follow us on

ತುಮಕೂರು: ನಿನ್ನೆ(ಜೂ.15)ರಾತ್ರಿ ಆ್ಯಕ್ಸೆಲ್​ ಬ್ಲೇಡ್​ ಕಟ್ ಆಗಿ ಕ್ಯಾಂಟರ್​ರೊಂದು ಆಟೋಗೆ ಅಪ್ಪಳಿಸಿದ್ದು, ಆಟೋದಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು(Tumakuru) ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ಶಾಂತಲಕ್ಷ್ಮೀ(30), ಪುತ್ರಿ ಚಿನ್ಮಯಿ(5) ಮೃತ ರ್ದುದೈವಿಗಳು. ಮೃತಪಟ್ಟವರು ತುಮಕೂರಿನ ಕುಂಟಮ್ಮದ ತೋಟದವರು ಎಂದು ಗುರುತಿಸಲಾಗಿದೆ. ಇವರು ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು. ಈ ವೇಳೆ ಸಡನ್ ಬ್ರೇಕ್ ಹಾಕಿದ ಕಾರಣ ಕ್ಯಾಂಟರ್​ನ ಆ್ಯಕ್ಸಲ್ ಕಟ್ಟಾಗಿ ಹೌಸಿಂಗ್ ಆಟೋಗೆ ಅಪ್ಪಳಿಸಿದೆ. ಇದೀಗ ಆಟೋ ಚಾಲಕ ಗಿರೀಶ್​ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆ ಆವರಣದಲ್ಲಿ ಆಟವಾಡುವಾಗ ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಶೃತ್ ಬೆಳಗಲಿ(9)ಮೃತ ವಿದ್ಯಾರ್ಥಿ. ನಿರ್ಮಾಣ ಹಂತದ ಕಟ್ಟಡದ ಕೆಳಭಾಗದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಗಳ ಮೇಲೆ ಗೋಡೆ ಬಿದ್ದಿದೆ. ಓರ್ವ ವಿದ್ಯಾರ್ಥಿ ಮೃತ ಪಟ್ಟರೆ, ಮತ್ತೋರ್ವ ವಿದ್ಯಾರ್ಥಿ ಪ್ರಜ್ವಲ್ ನಾಗಾವಿ ಎಂಬುವವರಿಗೆ ಗಾಯವಾಗಿದ್ದು, ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Chikkamagaluru News: ಒಡಿಶಾ ರೈಲು ಅಪಘಾತದಿಂದ ಪಾರಾಗಿದ್ದ ಯಾತ್ರಿಕ ಹೃದಯಾಘಾತದಿಂದ ಸಾವು

ಮಚ್ಚಿನಿಂದ ಹಲ್ಲೆ ನಡೆಸಿ ಓರ್ವನ ಹತ್ಯೆ, ಮತ್ತೊಬ್ಬನ ಮೇಲೆ ಹಲ್ಲೆ

ಬೆಂಗಳೂರು: ಮಚ್ಚಿನಿಂದ ಹಲ್ಲೆ ನಡೆಸಿ ಓರ್ವನನ್ನ ಹತ್ಯೆ ಮಾಡಿ, ಮತ್ತೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ರಾಮಮೂರ್ತಿನಗರದ ವಿಜಿನಾಪುರದಲ್ಲಿ ನಡೆದಿದೆ. ಇರದ್ ರಾಜ್​ ಮೃತ ವ್ಯಕ್ತಿ. ಇನ್ನು ಕೆಲಸ ಮುಗಿಸಿ ರಾತ್ರಿ ಬೈಕ್​ನಲ್ಲಿ ಇರದ್ ರಾಜ್, ವಿಜಯ್​ ಎಂಬಿಬ್ಬರು ತೆರಳುತ್ತಿದ್ದರು. ತಡರಾತ್ರಿ ಬೈಕ್​ನಲ್ಲಿ ಬರುತ್ತಿದ್ದ ಇರದ್ ರಾಜ್, ವಿಜಯ್​ಗೆ ಆರೋಪಿ ರಾಜೇಶ್ ಎಂಬಾತ ‘ಇಷ್ಟೊತ್ತಲ್ಲಿ ನಮ್ಮ ಏರಿಯಾಗೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದನ್ನೆಲ್ಲ ಕೇಳಲು ನೀವ್ಯಾರು ಎಂದಿದ್ದ ಇರದ್ ರಾಜ್​ಗೆ ಮಚ್ಚಿನಿಂದ ತಲೆಗೆ ಹೊಡೆದಿದ್ದ.

ಇನ್ನು ಪರಿಚಯ ಹೇಳಿಕೊಂಡಿದ್ದ ವಿಜಯ್​ಗೂ ಹೊಡೆದು ಕಳಿಸಿದ್ದಾರೆ.​ ನಂತರ ಬೈಕ್​ನಲ್ಲಿ ಮನೆಗೆ ತೆರಳಿದ್ದ ಇರದ್ ರಾಜ್, ವಿಜಯ್ ಇಬ್ಬರು ರಕ್ತ ಸೋರದಂತೆ ಪೌಡರ್​ ಹಚ್ಚಿ ಮಲಗಿದ್ದಾರೆ. ಆದರೆ, ಇರದ್ ರಾಜ್ ಬೆಳಗಾಗುವಷ್ಟರಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಕೊಡಲೇ ವಿಜಯ್​ ರಾಮಮೂರ್ತಿನಗರ ಠಾಣೆಗೆ ಮಾಹಿತಿ ನೀಡಿದ್ದಾನೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜೇಶ್, ಮತ್ತಿತರ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ