ನೀರು ಪೋಲಾಗುವ ಬಗ್ಗೆ ದೂರು ಹೇಳಿದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ, ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಮೇಲೆ ದೂರು ದಾಖಲು

| Updated By: ಆಯೇಷಾ ಬಾನು

Updated on: Nov 04, 2021 | 9:51 AM

ವಿದ್ಯಾರ್ಥಿಗೆ ಫೋನ್ ಕರೆ ಮಾಡಿ ನಿನ್ನ ಕೆಲಸವನ್ನು ನೀನು ನೋಡಿಕೋ, ಯಾರೋ ನೀನು? ಎಲ್ಲಿ ನೀರು ಹರೀತಿದೆ ತೋರಿಸು. ನೀನು ಬರಲಿಲ್ಲ ಅಂದ್ರೆ ಪೊಲೀಸರನ್ನ ಕಳಿಸುತ್ತೇನೆಂದು ವಿದ್ಯಾರ್ಥಿ ಜತೆ ಯೋಗೀಶ್‌ ಮಾತಾಡಿದ ಆಡಿಯೋ ವೈರಲ್ ಆಗಿದೆ.

ನೀರು ಪೋಲಾಗುವ ಬಗ್ಗೆ ದೂರು ಹೇಳಿದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ, ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಮೇಲೆ ದೂರು ದಾಖಲು
ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಯೋಗೀಶ್‌
Follow us on

ತುಮಕೂರು: ನೀರು ಪೋಲಾಗುವ ಬಗ್ಗೆ ದೂರು ಹೇಳಿದ ವಿದ್ಯಾರ್ಥಿಗಳಿಗೆ ಗುಬ್ಬಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನ ಕೆಲಸವನ್ನು ನೀನು ನೋಡಿಕೋ, ಯಾರೋ ನೀನು? ಎಲ್ಲಿ ನೀರು ಹರೀತಿದೆ ತೋರಿಸು ಎಂದು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು ನೀನು ಬರಲಿಲ್ಲ ಅಂದ್ರೆ ಪೊಲೀಸರನ್ನ ಕಳಿಸುತ್ತೇನೆಂದು ವಿದ್ಯಾರ್ಥಿಗಳಿಗೆ ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಸಮೀಪ ರಸ್ತೆಯಲ್ಲಿ ನೀರು ಪೋಲಾಗಿ ಹರಿಯುವುದನ್ನ ಕಂಡು ವಿದ್ಯಾರ್ಥಿಗಳೂ ವಿಡಿಯೋ ಮಾಡಿ ಪ.ಪಂ. ಮುಖ್ಯಾಧಿಕಾರಿ ಯೋಗೀಶ್‌ಗೆ ಕಳಿಸಿದ್ದರು. ಮೆಡಿಕಲ್ ವಿದ್ಯಾರ್ಥಿನಿ ಮೇಘನಾ ಹಾಗೂ ಇತರೆ ಸ್ನೇಹಿತರು ಮುಖ್ಯಾಧಿಕಾರಿ ಯೋಗೀಶ್ ಗೆ ವಿಡಿಯೋ ಕಳಿಸಿ ಕ್ರಮದ ಬಗ್ಗೆ ಮನವಿ ಮಾಡಿದ್ದರು. ಆದ್ರೆ ವಿಡಿಯೋ ನೋಡಿ ಕ್ರಮಕೈಗೊಳ್ಳುಬೇಕಿದ್ದ ಅಧಿಕಾರಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ.

ವಿದ್ಯಾರ್ಥಿಗೆ ಫೋನ್ ಕರೆ ಮಾಡಿ ನಿನ್ನ ಕೆಲಸವನ್ನು ನೀನು ನೋಡಿಕೋ, ಯಾರೋ ನೀನು? ಎಲ್ಲಿ ನೀರು ಹರೀತಿದೆ ತೋರಿಸು. ನೀನು ಬರಲಿಲ್ಲ ಅಂದ್ರೆ ಪೊಲೀಸರನ್ನ ಕಳಿಸುತ್ತೇನೆಂದು ವಿದ್ಯಾರ್ಥಿ ಜತೆ ಯೋಗೀಶ್‌ ಮಾತಾಡಿದ ಆಡಿಯೋ ವೈರಲ್ ಆಗಿದೆ. ಸದ್ಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಯೋಗೀಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: 2020ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10ಕ್ಕೆ 6 ಜನರ ಆದಾಯ 1 ಲಕ್ಷ ರೂ.ಗಿಂತ ಕಮ್ಮಿ

Published On - 9:11 am, Thu, 4 November 21