ರೇಪ್ ಯತ್ನ ಆರೋಪಿಯಿಂದ ದೂರುದಾರರ ಮೇಲೆ ಹಲ್ಲೆ, ಪ್ರಕರಣದ ಹಿಂದೆ ರಾಜಕೀಯ ಜಿದ್ದು?

| Updated By: ಆಯೇಷಾ ಬಾನು

Updated on: Jun 13, 2020 | 3:58 PM

ತುಮಕೂರು: ವಿಧಾನಸಭಾ ಚುನಾವಣೆ ಮುಗಿದು ವರ್ಷಗಳೇ ಉರುಳಿದ್ರೂ ರಾಜಕೀಯ ಜಿದ್ದಾ ಜಿದ್ದು ಮಾತ್ರ ಇನ್ನೂ ನಿಂತಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮತ್ತು ಹಾಲಿ ಶಾಸಕರ ನಡುವಿನ ರಾಜಕೀಯ ಮೇಲಾಟದಲ್ಲಿ ಕಾರ್ಯಕರ್ತರು ನಲುಗುತ್ತಿದ್ದಾರೆ. ತುಮಕೂರು ತಾಲೂಕಿನ ಹೊನ್ನೆನಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಶುಕ್ರವಾರ ಮಾರಾಮಾರಿ‌ ನಡೆದಿದೆ. ಉದ್ರಿಕ್ತ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಗ್ರಾಮದ ರಾಧಾಕೃಷ್ಣ, ರಂಗಸ್ವಾಮಯ್ಯ, ಶ್ರೀನಿವಾಸ್ ಹಾಗೂ ಸಂಜಿವಮ್ಮರ ಮೇಲೆ […]

ರೇಪ್ ಯತ್ನ ಆರೋಪಿಯಿಂದ ದೂರುದಾರರ ಮೇಲೆ ಹಲ್ಲೆ,  ಪ್ರಕರಣದ ಹಿಂದೆ ರಾಜಕೀಯ ಜಿದ್ದು?
Follow us on

ತುಮಕೂರು: ವಿಧಾನಸಭಾ ಚುನಾವಣೆ ಮುಗಿದು ವರ್ಷಗಳೇ ಉರುಳಿದ್ರೂ ರಾಜಕೀಯ ಜಿದ್ದಾ ಜಿದ್ದು ಮಾತ್ರ ಇನ್ನೂ ನಿಂತಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮತ್ತು ಹಾಲಿ ಶಾಸಕರ ನಡುವಿನ ರಾಜಕೀಯ ಮೇಲಾಟದಲ್ಲಿ ಕಾರ್ಯಕರ್ತರು ನಲುಗುತ್ತಿದ್ದಾರೆ.

ತುಮಕೂರು ತಾಲೂಕಿನ ಹೊನ್ನೆನಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಶುಕ್ರವಾರ ಮಾರಾಮಾರಿ‌ ನಡೆದಿದೆ. ಉದ್ರಿಕ್ತ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಗ್ರಾಮದ ರಾಧಾಕೃಷ್ಣ, ರಂಗಸ್ವಾಮಯ್ಯ, ಶ್ರೀನಿವಾಸ್ ಹಾಗೂ ಸಂಜಿವಮ್ಮರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಮಾರಾಮಾರಿಯ ಮೂಲ ಏಪ್ರಿಲ್ 22 ರಂದು ಹೊನ್ನೆನಹಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಘಟನೆ. ಅಂದು ಗ್ರಾಮದ ಮಹಿಳೆಯೋರ್ವಳ ಮೇಲೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗ ವೆಂಕಟೇಶ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈ ಸಂಬಂಧ ಆರೋಪಿ ವೆಂಕಟೇಶ್‌ ವಿರುದ್ಧ ರಾಮಕೃಷ್ಣ ಮನೆಯವರು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಯತ್ನದ ದೂರು ದಾಖಲಿಸಿದ್ದಾರೆ.

ಇದು ಆರೋಪಿ ವೇಂಕಟೇಶ್‌ ಸಿಟ್ಟಿಗೆ ಕಾರಣವಾಗಿದ್ದು, ಅಂದಿನಿಂದ ವೆಂಕಟೇಶ್ ಹಾಗೂ ಆತನ ಸಹಚರರು ರಾಧಾಕೃಷ್ಣ ಮತ್ತವರ ಮನೆಯವರ ಮೇಲೆ ಜಿದ್ದು ಸಾಧಿಸುತ್ತಿದ್ದರು ಎನ್ನಲಾಗ್ತಿದೆ. ಜೊತೆಗೆ ನೀಡಿರುವ ದೂರನ್ನು ಹಿಂಪಡೆಯುವಂತೆ ಹಾಗೂ ಸಾಕ್ಷಿ ಹೇಳದಂತೆ ಮಾಜಿ ಶಾಸಕ ಸುರೇಶ್ ಗೌಡ ಮೂಲಕ ಒತ್ತಡ ಕೂಡಾ ಹಾಕಿಸಿದ್ದರು ಎನ್ನಲಾಗಿದೆ. ಆದರೂ ರಾಧಾಕೃಷ್ಣ ಸೊಪ್ಪು ಹಾಕಿರಲಿಲ್ಲ.

ಇದರಿಂದ ಕೆರಳಿ ಕೆಂಡವಾಗಿದ್ದ ವೆಂಕಟೇಶ್‌ ಮತ್ತು ಆತನ ಸಹವರ್ತಿಗಳು ರಾಧಾಕೃಷ್ಣ ಮನೆಗೆ ನುಗ್ಗಿ ದಾಂದಲೇ ಮಾಡಿದ್ದಾರೆನ್ನಲಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವೆಂಕಟೇಶ ಹಾಗೂ ಸಹಚರರಾದ ಶಂಕರ, ಮಂಡಲ್ ರವಿ, ಯೋಗಿಶ್,  ಸ್ವಾಮಿ, ಮಂಜ ಹಾಗೂ ರಂಗಸ್ವಾಮಿ ವಿರುದ್ಧ ದೂರು ದಾಖಲಿಸಲಾಗಿದೆ.

Published On - 1:49 pm, Sat, 13 June 20