ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ
ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ ಇಲ್ಲದಂತಾಗಿದೆ. ತೋಟದಪಾಳ್ಯ ಮಾರ್ಗದಿಂದ ವರದದೇನಳ್ಳಿ ವರೆಗೆ ಮೂರು ಕಿಲೊಮೀಟರ್ ವರೆಗೆ ಎಂಟು ವರ್ಷದ ಹಿಂದೆಯೇ ಸರ್ಕಾರ ಈ ನಾಲೆಯನ್ನ ನಿರ್ಮಿಸಿದೆ. ಮೊದಲ ವರ್ಷ ಸ್ವಲ್ಪ ನೀರನ್ನು ಹರಿಸಿದ್ದು ಬಿಟ್ಟರೆ, ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಎನ್ನುವುದು ರೈತರ ಆರೋಪ.
ನಾಲೆ ನಿರ್ಮಿಸಿದ್ದೇ ಅವೈಜ್ಞಾನಿಕವಾಗಿ
ಮೊದಲೇ ಈ ಪ್ರದೇಶದಲ್ಲಿ ಕೆರೆ ಮತ್ತು ಕೊಳವೆ ಬಾವಿ ಬತ್ತಿವೆ. ಅಂತರ್ಜಲ ಕುಸಿತದಿಂದಾಗಿ 1,200ರಿಂದ 1,300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಣಾಮ ಅಡಿಕೆ, ತೆಂಗು, ಬಾಳೆ ಒಣಗಿ ನಿಂತಿವೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೋವಿಗೆ ಸ್ಪಂದಿಸಬೇಕು. ಈ ನಾಲೆ ಮೂಲಕ ಹೇಮಾವತಿ ನದಿ ನೀರನ್ನ ಹರಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯ -ಮಹೇಶ್
Published On - 1:02 pm, Wed, 17 June 20