ಗಡಿ ಘರ್ಷಣೆ: ದೇಶಾದ್ಯಂತ ಪ್ರತಿಭಟನೆ, ಚೀನಾ ಐಟಂ ಪೀಸ್ ಪೀಸ್..
ದೆಹಲಿ: ಲಡಾಖ್ ಗಡಿಯಲ್ಲಿ ಚೀನಾ, ಭಾರತದ ಸೈನಿಕರ ನಡುವೆ ಘರ್ಷಣೆಯಾಗಿ ನಮ್ಮ ದೇಶದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದನ್ನ ವಿರೋಧಿಸಿ ದೇಶ, ರಾಜ್ಯದಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಚೀನಾ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಾರಾಣಸಿ, ಅಹಮದಾಬಾದ್, ಲಖನೌ, ದೆಹಲಿ, ಕಾನ್ಪುರದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ವಾರಾಣಾಸಿಯಲ್ಲಿ ಚೀನಾ ಅಧ್ಯಕ್ಷರ ಪ್ರತಿಕೃತಿಗೆ ಬೆಂಕಿ ಹಚ್ಚಿ ಜನ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲೂ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜಧಾನಿ ದೆಹಲಿಯಲ್ಲೂ ಚೀನಾದ ಪುಂಡಾಟ ವಿರೋಧಿಸಿ ಚೀನಾ […]
ದೆಹಲಿ: ಲಡಾಖ್ ಗಡಿಯಲ್ಲಿ ಚೀನಾ, ಭಾರತದ ಸೈನಿಕರ ನಡುವೆ ಘರ್ಷಣೆಯಾಗಿ ನಮ್ಮ ದೇಶದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದನ್ನ ವಿರೋಧಿಸಿ ದೇಶ, ರಾಜ್ಯದಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಚೀನಾ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ವಾರಾಣಸಿ, ಅಹಮದಾಬಾದ್, ಲಖನೌ, ದೆಹಲಿ, ಕಾನ್ಪುರದಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿದೆ. ವಾರಾಣಾಸಿಯಲ್ಲಿ ಚೀನಾ ಅಧ್ಯಕ್ಷರ ಪ್ರತಿಕೃತಿಗೆ ಬೆಂಕಿ ಹಚ್ಚಿ ಜನ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲೂ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜಧಾನಿ ದೆಹಲಿಯಲ್ಲೂ ಚೀನಾದ ಪುಂಡಾಟ ವಿರೋಧಿಸಿ ಚೀನಾ ರಾಯಭಾರ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ: ಚೀನಾದ ಹೀನಾಯ ಹೆಜ್ಜೆಯನ್ನ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ನಡು ರಸ್ತೆಯಲ್ಲೇ ಚೀನಾ ವಸ್ತುಗಳನ್ನು ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುತಂತ್ರಿ ಚೀನಾ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ ಹಿಂದು ಸಂಘಟನೆಗಳು ಗಡಿಯಲ್ಲಿ ಪುಂಡಾಟ ಮೆರೆದ ಕುತಂತ್ರಿ ಚೀನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ಯೋಧರ ಹತ್ಯೆಯನ್ನ ಖಂಡಿಸಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವಿಎಚ್‌ಪಿ, ಬಜರಂಗದಳ, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಕೋಲಾರದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಇಲ್ಲೂ ಕೂಡ ಚೀನಾ ವಿರುದ್ಧ ಭಜರಂಗದಳ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ವಿರುದ್ದ ಘೋಷಣೆಗಳನ್ನು ಕೂಗಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ಚಿತ್ರದುರ್ಗ ನಗರದಲ್ಲಿ ಹಿಂದೂಪರ ಸಂಘಟನೆಗಳು ಭಾರತೀಯರು ಚೀನಾ ಮೂಲದ ವಸ್ತುಗಳ ಬಳಕೆ ನಿಲ್ಲಿಸಬೇಕ, ಮೊಬೈಲ್ಗಳಲ್ಲಿ ಚೀನಾ ಆ್ಯಪ್ ಬಳಕೆ ನಿಲ್ಲಿಸಬೇಕೆಂದು ಆಗ್ರಹಿಸಿ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Published On - 1:19 pm, Wed, 17 June 20