ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ […]

ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ
Follow us
Guru
| Updated By: ಆಯೇಷಾ ಬಾನು

Updated on:Jun 17, 2020 | 2:50 PM

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ ಇಲ್ಲದಂತಾಗಿದೆ. ತೋಟದಪಾಳ್ಯ ಮಾರ್ಗದಿಂದ ವರದದೇನಳ್ಳಿ ವರೆಗೆ ಮೂರು ಕಿಲೊಮೀಟರ್ ವರೆಗೆ ಎಂಟು ವರ್ಷದ ಹಿಂದೆಯೇ ಸರ್ಕಾರ ಈ ನಾಲೆಯನ್ನ ನಿರ್ಮಿಸಿದೆ. ಮೊದಲ ವರ್ಷ ಸ್ವಲ್ಪ ನೀರನ್ನು ಹರಿಸಿದ್ದು ಬಿಟ್ಟರೆ, ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಎನ್ನುವುದು ರೈತರ ಆರೋಪ.

ನಾಲೆ ನಿರ್ಮಿಸಿದ್ದೇ ಅವೈಜ್ಞಾನಿಕವಾಗಿ ಇನ್ನು ಈ ನಾಲೆಯನ್ನ ಕೂಡಾ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಕೆಲ ಬಾರಿ ನೀರು ಹರಿಸಿದರೂ ನಾಲೆಯಲ್ಲಿನ ಗುಂಡಿಗಳಿಂದಾಗಿ ನೀರು ತುಂಬಿ ಮೇಲೆರುವುದಿಲ್ಲ. ಜತೆಗೆ ನಾಲೆಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಮಣ್ಣಿನದ್ದಾಗಿದೆ. ಮಳೆ ಬಂದಾಗ ಸೇತುವೆ ಮತ್ತು ನಾಲೆಯ ದಡ ಎರಡೂ ಒಂದೇ ಬಾರಿಗೆ ಕುಸಿದು ನೀರು ಹರಿಯಲು ಮಾಡಿರುವ ಗೇಟ್‌ವಾಲ್‌ ಸಂಪೂರ್ಣ ಮುಚ್ಚಿಹೋಗಿವೆ ಎನ್ನುವುದು ಸ್ಥಳೀಯರ ಮತ್ತೊಂದು ಆರೋಪ.

ಮೊದಲೇ ಈ ಪ್ರದೇಶದಲ್ಲಿ ಕೆರೆ ಮತ್ತು ಕೊಳವೆ ಬಾವಿ ಬತ್ತಿವೆ. ಅಂತರ್ಜಲ ಕುಸಿತದಿಂದಾಗಿ 1,200ರಿಂದ 1,300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಣಾಮ ಅಡಿಕೆ, ತೆಂಗು, ಬಾಳೆ ಒಣಗಿ ನಿಂತಿವೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೋವಿಗೆ ಸ್ಪಂದಿಸಬೇಕು. ಈ ನಾಲೆ ಮೂಲಕ ಹೇಮಾವತಿ ನದಿ ನೀರನ್ನ ಹರಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯ -ಮಹೇಶ್‌

Published On - 1:02 pm, Wed, 17 June 20

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ