ತುಮಕೂರು, (ಅಕ್ಟೋಬರ್ 06): ವಾಸವಿದ್ದ ಬಾಡಿಗೆ ಮನೆಯಲ್ಲೇ ದಂಪತಿ(couple) ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. ಮನು(26) ಹಾಗೂ ಪತ್ನಿ ಪವಿತ್ರಾ(24) ರೊಪ್ಪ ಗ್ರಾಮದ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮನು ಹಾಗೂ ಪವಿತ್ರ ನವ ದಂಪತಿಗಳಂತೆ ಕಾಣಿಸುತ್ತಿದ್ದು, ಇಬ್ಬರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇನ್ನೂ ಬಾಳಿ ಸಂಸಾರದ ಬಂಡಿ ಸಾಗಿಸಬೇಕಾದ ದಂಪತಿ ಅರ್ಧದಲ್ಲೇ ನಿಲ್ಲಿಸಿದೆ. ಆದ್ರೆ, ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ: ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ: ಕಾರಣವೇನು?
ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ ಬಡ್ಡಿ ಹಣ ನೀಡುವ ವಿಚಾರದಲ್ಲಿ ನಡೆದಿದ್ದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಮೃತ ದುರ್ದೈವಿ. ಖಲೀಲ್ ತನ್ನ ಮಗಳ ಮದುವೆಗಾಗಿ ಅದೇ ಗ್ರಾಮದ ತೌಸೀಪ್ ಪಾಷ ಅವರಿಂದ 50,000 ರೂ. ಸಾಲ ಪಡೆದಿದ್ದ. ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದ. ಆದ್ರೆ, ಕಳೆದ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ತೌಸೀಪ್ ಪಾಷ ಗಲಾಟೆ ಮಾಡಿದ್ದು, ಕೋಳಿ ಕಟ್ ಮಾಡುವ ಕತ್ತಿಯಿಂದ ಹಲ್ಲೆ ಮಾಡಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಖಲೀಲ್ನನ್ನು ಬೆಂಗಳೂರಿನ ನಿಮಾನ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಖಲೀಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಘಟನೆ ಸಂಬಂಧ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ