ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ಪತಿ-ಪತ್ನಿ ಜಗಳಕ್ಕೆ 16 ವರ್ಷದ ಪುತ್ರ ಬಲಿಯಾಗಿದ್ದಾನೆ. ಮಗನನ್ನು ನನ್ನು ತಂದೆಯೇ ಹಾರೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ದಾಂಪತ್ಯ ಕಲಹ ವಿಚಾರವಾಗಿ ಆರೋಪಿ ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದ ಎನ್ನಲಾಗಿದ್ದು, ಸದ್ಯ ಆತನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!
ಮೃತ ಬಾಲಕ
Edited By:

Updated on: Nov 15, 2026 | 12:09 PM

ತುಮಕೂರು, ನವೆಂಬರ್​​ 15: ಹಾರೆಯಿಂದ ಹೊಡೆದು ಸ್ವಂತ ಮಗನನ್ನು ತಂದೆಯೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ನಡೆದಿದೆ. ಪತಿ-ಪತ್ನಿ ನಡುವಿನ ಜಗಳಕ್ಕೆ 16 ವರ್ಷದ ಪುತ್ರ ಸುನೀಲ್ ಬಲಿಯಾಗಿದ್ದು, ಆರೋಪಿಯನ್ನು ನಂಜಪ್ಪ ಎಂದು ಗುರುತಿಸಲಾಗಿದೆ. ಮಗನನ್ನು ಕೊಂದ ಬಳಿಕ ಸ್ಥಳದಲ್ಲೇ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯೂಷನ್​ಗೆ ಹೊರಟಿದ್ದ ಸುನೀಲ್​​

20 ವರ್ಷಗಳ ಹಿಂದೆ ವಿವಾಹವಾಗಿದ್ದ ಆರೋಪಿ ನಂಜಪ್ಪ ಹಾಗೂ ರಂಜಿತಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿತ್ತು. 6 ತಿಂಗಳ ಹಿಂದೆ ಸಹ ಗಲಾಟೆಯಾಗಿ ದೂರು ದಾಖಲಾಗಿತ್ತು. ಪತಿ ವಿರುದ್ಧ ಪತ್ನಿಯೇ ಕೇಸ್​​ ದಾಖಲಿಸಿದ್ದ ಹಿನ್ನೆಲೆ ನಂಜಪ್ಪ ಜೈಲಿಗೆ ಕೂಡ ಹೋಗಿದ್ದ. ಜೈಲಿಂದ ಹೊರ ಬಂದ ಬಳಿಕ ಪತ್ನಿ ಜೊತೆ ರಾಜಿಯಾಗಿ ಮತ್ತೆ ಸಂಸಾರ ಆರಂಭಿಸಿದ್ದ. ಈ ನಡುವೆ ಇಂದು ಮುಂಜಾನೆ ದಂಪತಿ ನಡುವೆ ಮತ್ತೆ ಜಗಳ ಆಗಿದೆ. ಗಲಾಟೆ ವೇಳೆ ಪತ್ನಿ ರಂಜಿತಾಳನ್ನು ನಂಜಪ್ಪ ಮನೆಯಿಂದ ಆಚೆ ಹಾಕಿದ್ದ. ಬೆಳಿಗ್ಗೆ ಟ್ಯೂಷನ್​ಗೆ ಹೊರಟಿದ್ದ ಮಗ ಸುನೀಲ್​​ ಮನೆ ಬಾಗಿಲು ತೆಗೆದ ಕಾರಣ, ಆತನ ಮೇಲೆ ನಂಜಪ್ಪ ಹಾರೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಸುನೀಲ್​​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Loading...

ಇದನ್ನೂ ಓದಿ:  ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು

ಮಗನನ್ನು ತಂದೆಯೇ ಭೀಕರವಾಗಿ ಕೊಂದಿರುವುದನ್ನು ಮನೆಯ ಕಿಟಕಿ ಮೂಲಕ ನೋಡಿರುವ ರಂಜಿತಾ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಗನ ಕೊಲೆ ಮಾಡಿ ಮನೆಯಲ್ಲೇ ಕುಳಿತಿದ್ದ ಆರೋಪಿ ನಂಜಪ್ಪನನ್ನು ಬಂಧಿಸಿದ್ದಾರೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ನಂಜಪ್ಪ-ರಂಜಿತಾ ದಂಪತಿಯ ಮತ್ತೋರ್ವ ಮಗ ಅಜ್ಜಿಯ ಮನೆಯಲ್ಲಿ ವಾಸವಿದ್ದಾನೆ ಎಂಬುದು ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us