AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು

ಜಗದೀಶ ಬಿ.
| Edited By: |

Updated on: Nov 11, 2026 | 10:34 AM

Share

ತುಮಕೂರಿನಲ್ಲಿ ಅಂಗವೈಕಲ್ಯದಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸನ್ನಿ ಎಂಬಾತ ವಾಕಿಂಗ್ ಸ್ಟಿಕ್ ಬಳಸಿ ವಿಕಲಚೇತನನಂತೆ ನಟಿಸುತ್ತಿದ್ದ. ಪೊಲೀಸರ ವಿಚಾರಣೆ ವೇಳೆ ಆತನ ಒಂದು ಕಾಲಿನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಭಿಕ್ಷಾಟನೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ತುಮಕೂರು, ನವೆಂಬರ್ 11: ಅಂಗವಿಕಲನಂತೆ ನಟಿಸಿ ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ತುಮಕೂರು ನಗರದ ಶಿವಕುಮಾರ ಸ್ವಾಮಿಜಿ ವೃತ್ತದಲ್ಲಿ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸನ್ನಿ ಎಂಬಾತ ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ವಿಶೇಷಚೇತನನಂತೆ ನಟಿಸುತ್ತಿದ್ದ. ಸಾರ್ವಜನಿಕರಿಗೆ ಆತನ ನಡವಳಿಕೆ ಅನುಮಾನಾಸ್ಪದವಾಗಿ ಕಂಡುಬಂದಾಗ, ಅವರು ಆತನನ್ನು ತಡೆದು ವಿಚಾರಿಸಿದ್ದಾರೆ. ವಾಕಿಂಗ್ ಸ್ಟಿಕ್ ತೆಗೆದು ನೋಡಿದಾಗ ಆತನಿಗೆ ಯಾವುದೇ ಅಂಗವೈಕಲ್ಯ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಕೆರಳಿದ ಸಾರ್ವಜನಿಕರು ಯುವಕನಿಗೆ ಥಳಿಸಿ ನಂತರ ನೆಹರು ನಗರ (ಎನ್ಇಪಿಎಸ್) ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಯುವಕನ ಒಂದು ಕಾಲಿನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಆದಾಗ್ಯೂ, ಭಿಕ್ಷಾಟನೆ ನಡೆಸದಂತೆ ಆತನಿಗೆ ಎಚ್ಚರಿಕೆ ನೀಡಿದ ಪೊಲೀಸರು, ಬಳಿಕ ಆತನನ್ನು ಕಳುಹಿಸಿದ್ದಾರೆ. ಇಂತಹ ಭಿಕ್ಷಾಟನೆ ಜಾಲಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಎತ್ತಿ ತೋರಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More