ತುಮಕೂರು: ಫ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್ (Congress) , ಜೆಡಿಎಸ್ (JDS) ನಡುವೆ ಗಲಾಟೆ ನಡೆದಿರುವ ಘಟನೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ನಾಳೆ (ಆಗಸ್ಟ್ 18) ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ (Sudhakar Lal) ಜನ್ಮದಿನ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಸರ್ಕಲ್ನಲ್ಲಿ ಫ್ಲೆಕ್ಸ್ ಹಾಕಲು ಬಂದಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಗ್ವಾದ ನಡೆದಿದೆ.
ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ (G Parameshwara) ಜನ್ಮದಿನದ ಅಂಗವಾಗಿ ಆಗಸ್ಟ್ 8ರಂದು ಜನ್ಮದಿನಕ್ಕೆ ಫ್ಲೆಕ್ಸ್ ಹಾಕಲಾಗಿತ್ತು. ಜಿ.ಪರಮೇಶ್ವರ್ ಫ್ಲೆಕ್ಸ್ ತೆರವುಗೊಳಿಸಿ ಮಾಜಿ ಶಾಸಕ ಸುಧಾಕರ್ ಲಾಲ್ ಫ್ಲೆಕ್ಸ್ ಹಾಕುತ್ತಿರುವಾಗ ಗಲಾಟೆ ನಡೆದಿದೆ.
ಕಾರ್ಯಕರ್ತರ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Published On - 11:16 am, Wed, 17 August 22