AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ(85) ನಿಧನ

ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ(85) ಇಂದು(ಮಾ.23) ಬೆಂಗಳೂರಿನ  ಕೊಲಂಬಿಯಾ ಏಷ್ಯಾ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ತುಮಕೂರು: ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ(85) ನಿಧನ
ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ(85) ನಿಧನ
TV9 Web
| Edited By: |

Updated on:Mar 23, 2024 | 1:59 PM

Share

ತುಮಕೂರು, ಮಾ.23: ಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ(85) ಇಂದು(ಮಾ.23) ಬೆಂಗಳೂರಿನ  ಕೊಲಂಬಿಯಾ ಏಷ್ಯಾ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ನಿವಾಸಿ‌ಯಾಗಿದ್ದ ಮೃತರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದವರು. ಜೊತೆಗೆ ಶಿರಾ ಕ್ಷೇತ್ರದ ಮಾಜಿ ಶಾಸಕರು ಕೂಡ ಆಗಿದ್ದವರು. ನಾಳೆ(ಮಾ.24) ಬೆಳಿಗ್ಗೆ 10 ಗಂಟೆಗೆ ಸ್ವಗೃಹ ಚಿರತಹಳ್ಳಿ ಗ್ರಾಮದ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

1985 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಮೂಲಕ ರಾಜಕೀಯ ಪ್ರವೇಶಿಸಿದ್ದ ಇವರು, ಮೊದಲ ಪ್ರಯತ್ನದಲ್ಲೇ ಶಿರಾ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಎಂಟ್ರಿಕೊಟ್ಟಿದ್ದರು. ನಂತರ ರಾಷ್ಟ್ರ ರಾಜಕಾರಣದ ಕಡೆ ಮುಖಮಾಡಿದ ಮೂಡಲಗಿರಿಯಪ್ಪ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬರೊಬ್ಬರಿ ಮೂರು ಬಾರಿ, ಅಂದರೆ 1989, 1991 ಮತ್ತು 1998 ರಲ್ಲಿ ವಿಜಯಶಾಲಿ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Sat, 23 March 24

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು