ತುಮಕೂರು, ಸೆ.05: ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತಳಹದಿ ಹಾಕುವ ಶಿಕ್ಷಕರಿಗೆ ಶುಭಾಶಯ ಕೋರಿದ್ದಾರೆ. ಇನ್ನು ಇದೇ ದಿನ ತುಮಕೂರು (Tumakur) ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ತಂಗುದಾಣ ನಿರ್ಮಾಣ ವಿಚಾರದಲ್ಲಿ ಗಲಾಟೆಯಾಗಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯ ಗಂಡನಿಗೆ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಇನ್ನು ರಾಜಶೇಖರ್ ಎಂಬ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದವರು.
ತಂಗುದಾಣ ನಿರ್ಮಾಣಕ್ಕೆ ಜಾಗ ಗುರುತಿಸಲು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪತಿ ಮಂಜುನಾಥ್ ಮುಂದಾಗಿದ್ದರು. ನಂತರ ಇಬ್ಬರ ನಡುವೆ ತಂಗುದಾಣ ನಿರ್ಮಾಣದಿಂದ ಮನೆಗೆ ಅಡ್ಡಿಯಾಗುವ ಕಾರಣಕ್ಕೆ ಗಲಾಟೆ ಶುರುವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಂಜುನಾಥ್‌ಗೆ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಜೆಟ್ಟಿ ಅಗ್ರಹಾರ ಗ್ರಾಮದ ನಿವಾಸಿಗಳು ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಸಿಬ್ಬಂದಿ ಮೇಲೆ ಹಲ್ಲೆ
ಆನೇಕಲ್: ಒಂದೇ ದಿನ ಖದೀಮರು ಎರಡು ಮನೆಗಳಿಗೆ ಕನ್ನ ಹಾಕಿದ ಘಟನೆ ಬೆಂಗಳೂರು ಹೊರಲವಯ ಆನೇಕಲ್ ಪಟ್ಟಣದ ಲಕ್ಷ್ಮಿ ಚಿತ್ರಮಂದಿರ ಸಮೀಪ ಹಾಗೂ ನಗರ್ತರ ಪೇಟೆಯಲ್ಲಿ ನಡೆದಿದೆ. ಮನೆಗೆ ಬೀಗ ಹಾಕಿಕೊಂಡು ಕುಟುಂಬದವರು ಚಿಕ್ಕ ತಿರುಪತಿಗೆ ಹೋಗಿದ್ದರು. ಇದನ್ನು ಗಮನಿಸಿ, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಖದೀಮರ ಗ್ಯಾಂಗ್, ಲಕ್ಷ್ಮಿ ಚಿತ್ರಮಂದಿರ ಮುಖ್ಯರಸ್ತೆಯಲ್ಲಿನ ಮನೆ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ನಗರ್ತರ ಪೇಟೆಯ ಪ್ರಶಾಂತ್ ಎಂಬುವರ ಮನೆಯಲ್ಲೂ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಬೆಳ್ಳಿ ಹಾಗೂ ಬೆಲೆಬಾಳುವ ವಸ್ತುಗಳು ಕಳ್ಳರು ಕದ್ದಿದ್ದಾರೆ. ಈ ಸರಣಿ ಕಳ್ಳತನಕ್ಕೆ ನೇಕಲ್ ಜನತೆ ಬೆಚ್ಚಿ ಬಿದ್ದಿದೆ. ದಿನನಿತ್ಯ ನಡೆಯುತ್ತಿರುವ ದ್ವಿಚಕ್ರ ವಾಹನ ಹಾಗೂ ಮನೆ ಕಳ್ಳತನಕ್ಕೆ ಬ್ರೆಕ್ ಹಾಕದ ಪೋಲಿಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆನೇಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ