ಶಿವಮೊಗ್ಗದಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ

ಶಿವಮೊಗ್ಗ ನಗರದ ಬಿ.ಹೆಚ್.ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ನಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವಮೊಗ್ಗದಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ
ಗಲಾಟೆ ದೃಶ್ಯ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2023 | 5:34 PM

ಶಿವಮೊಗ್ಗ, ಸೆ.05: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ (Shivamogga) ನಗರದ ಬಿ.ಹೆಚ್.ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ನಲ್ಲಿ ನಡೆದಿದೆ. ಬಾರ್ (Bar) ಮುಚ್ಚುವ ಸಂದರ್ಭದಲ್ಲಿ ಬಂದಿದ್ದ ದುಷ್ಕರ್ಮಿಗಳು ಮದ್ಯ ನೀಡಲು ಕೇಳಿದ್ದಾರೆ. ಈ ವೇಳೆ ಬಾರ್​ ಸಿಬ್ಬಂದಿಗಳು ಎಲ್ಲಾ ಕ್ಲೋಸ್​ ಆಗಿದ್ದು, ನೀಡಲು ನಿರಾಕರಿಸಿದ್ದಾರೆ. ಈ ಹಿನ್ನಲೆ ರೊಚ್ಚಿಗೆದ್ದ ದುಷ್ಕರ್ಮಿಗಳು ಇಬ್ಬರು ಸಿಬ್ಬಂದಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಇನ್ನು ಪ್ರತಿನಿತ್ಯ ಬಾರ್​​ 11.30 ಕ್ಕೆ ಕ್ಲೋಸ್ ಆಗುತ್ತದೆ. ಬಳಿಕ ಮುಂದಿನ ಡೋರ್ ಕ್ಲೋಸ್ ಮಾಡಿ, ಒಳಗಿದ್ದವರನ್ನ ಹೊರಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗುತ್ತಾರೆ. ನಿನ್ನೆ ಕೂಡ ಬ್ಲೂ ಮೂನ್​ ಬಾರ್​ ಸಿಬ್ಬಂದಿ ಹೊರಗಡೆ ಡೋರ್ ಹಾಕಿದ್ದರು. ಬಳಿಕ ಒಳಗಿದ್ದ ಗ್ರಾಹಕರೊಬ್ಬರು ಹೊರಗಡೆ ಹೋಗುವಾಗ ಡೋರ್ ಓಪನ್​ ಆಗಿದೆ. ಆಗ ಕೆಲವು ಯುವಕರು ಒಳಗಡೆ ಬಂದು ಎಣ್ಣೆ ಕೇಳಿದ್ದಾರೆ. ಎಣ್ಣೆ ಇಲ್ಲ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ, ಪೊಲೀಸರ ಬೇಜವಾಬ್ದಾರಿತನದಿಂದ ಸಿಸಿಟಿವಿಯಲ್ಲಿ ಸೆರೆಯಾಗದ ಕಿಡಿಗೇಡಿಗಳ ಕೃತ್ಯ

ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಮಧ್ಯವ್ಯಸನಿ ಯುವಕನ ಕ್ರೌರ್ಯ

ಯಾದಗಿರಿ: ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಮದ್ಯವ್ಯಸನಿ ಯುವಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ಎರಡೆರಡು ಬಾರಿ ಹಲ್ಲೆ ಮಾಡಿದ್ದಾನೆ. ಇತನನ್ನು ಚಾಮನಾಳ ಗ್ರಾಮದ ರಾಜಕುಮಾರ ಚವ್ಹಾಣ್ ಎಂದು ಗುರುತಿಸಲಾಗಿದ್ದು, ಹಲ್ಲೆಗೈದ ಬಳಿಕ ವಿಡಿಯೋ ಸ್ಟೇಟಸ್ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಈ ಕುರಿತು ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ