AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ, ಪೊಲೀಸರ ಬೇಜವಾಬ್ದಾರಿತನದಿಂದ ಸಿಸಿಟಿವಿಯಲ್ಲಿ ಸೆರೆಯಾಗದ ಕಿಡಿಗೇಡಿಗಳ ಕೃತ್ಯ

ಬಾರ್​ನಿಂದ ಯುವಕರನ್ನು ಹೊರಹಾಕಿದ್ದಕ್ಕೆ ಸಿಟ್ಟಿಗೆದ್ದ ಯುವಕರು ದಾಂದಲೆ ಮಾಡಿದ್ದಾರೆ. ಬಿಯರ್ ಬಾಟಲ್ ಗಳನ್ನ ಬಾರ್ ಕಡೆ ಎಸೆದಿದ್ದಾರೆ. ಗ್ರಾಹಕರು ಇದ್ದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು.

ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ, ಪೊಲೀಸರ ಬೇಜವಾಬ್ದಾರಿತನದಿಂದ ಸಿಸಿಟಿವಿಯಲ್ಲಿ ಸೆರೆಯಾಗದ ಕಿಡಿಗೇಡಿಗಳ ಕೃತ್ಯ
ಘಟನೆ ನಡೆದ ಸ್ಥಳ
TV9 Web
| Edited By: ಆಯೇಷಾ ಬಾನು|

Updated on:Nov 03, 2022 | 11:41 AM

Share

ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಸಿಬ್ಬಂದಿ ಜೊತೆ ವಾಗ್ವಾದ, ದಾಂದಲೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾರ್​ನಿಂದ ಯುವಕರನ್ನು ಹೊರಹಾಕಿದ್ದಕ್ಕೆ ಸಿಟ್ಟಿಗೆದ್ದ ಯುವಕರು ದಾಂದಲೆ ಮಾಡಿದ್ದಾರೆ. ಬಿಯರ್ ಬಾಟಲಿ, ಕಲ್ಲು ತೂರಿ ಪರಾರಿಯಾಗಿದ್ದಾರೆ. ಪುಂಡರ ಅಟ್ಟಹಾಸಕ್ಕೆ ಬಾರ್​ನಲ್ಲಿದ್ದ ರೆಫ್ರಿಜರೇಟರ್​ಗೆ ಹಾನಿಯಾಗಿದೆ. ನಂದಿನಿ ಲೇಔಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನ.1ರಂದು ಬೆಂಗಳೂರಿನ ಲಗ್ಗೆರೆಯ ಕದಂಬ ಬಾರ್​ನಲ್ಲಿ ಈ ಗಲಾಟೆ ನಡೆದಿದೆ. ಮೊದಲಿಗೆ ಬಿಲ್ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ನಂತರ ಯುವಕರನ್ನು ಬಾರ್ ಸಿಬ್ಬಂದಿ ಹೊರಗೆ ಕಳಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಯುವಕರು ರಾತ್ರಿ ಹೊತ್ತು ಬೈಕ್ ನಲ್ಲಿ ವಾಪಸ್ ಬಾರ್ ಬಳಿ ಬಂದಿದ್ದಾರೆ. ಬಂದವರೇ ಬಿಯರ್ ಬಾಟಲ್ ಗಳನ್ನ ಬಾರ್ ಕಡೆ ಎಸೆದಿದ್ದಾರೆ. ಗ್ರಾಹಕರು ಇದ್ದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು. ಅಲ್ಲದೆ ಈ ಹಿಂದೆ ಅಕ್ಟೋಬರ್ 29ರಂದು ಇದೇ ಬಾರ್​ನಲ್ಲಿ ಗಲಾಟೆ ನಡೆದಿತ್ತು. ಯುವಕರಾದ ಪ್ರಜ್ವಲ್, ಹರೀಶ್​ ಕುಡಿದು ಗಲಾಟೆ ಮಾಡಿದ್ದರು. ಪ್ರಕರಣದ ತನಿಖೆಗಾಗಿ ಮಹಾಲಕ್ಷ್ಮೀ ಲೇಔಟ್​ ಠಾಣೆ ಪೊಲೀಸರು ಸಿಸಿಟಿವಿ DVR​ ಪಡೆದಿದ್ದು ಹಿಂದಿರುಗಿಸಲಿಲ್ಲ. ಪೊಲೀಸರು ಡಿವಿಆರ್ ಹಿಂದಿರುಗಿಸದಿದ್ದರಿಂದ ನವೆಂಬರ್​ 1ರಂದು ನಡೆದ ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

ಇದನ್ನೂ ಓದಿ: ಭ್ರಷ್ಟಾಚಾರದ ಅಡ್ಡೆಯಾಗಿದೆಯಾ ವಿಜಯಪುರ ಜಿಲ್ಲಾ ಅಬಕಾರಿ‌ ಇಲಾಖೆ? ಬಾರ್​ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್

ಮೊಬೈಲ್​ ಕಳ್ಳತನ ಮಾಡುತ್ತಿದ್ದ ಐವರು ಅರೆಸ್ಟ್

ಬೆಂಗಳೂರು: ಮೊಬೈಲ್​ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಿಷ್ಣು, ಮಹೇಶ್​​, ಇಮ್ತಿಯಾಜ್, ರಿಯಾಜ್​ವುರ್​ ರೆಹಮಾನ್​, ಸಂಜಿತ್ ಕುಮಾರ್ ಬಂಧಿತರು. ಸಂಪಿಗೆಹಳ್ಳಿ, ಯಲಹಂಕ ಉಪನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳಿಂದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದ್ವಿಚಕ್ರ ವಾಹನ, ಆಟೋದಲ್ಲಿ ಬಂದು ಮೊಬೈಲ್, ಹಣ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಈಗ ಅವರನ್ನು ಬಂಧಿಸಿದ್ದು ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾದ ರೌಡಿಶೀಟರ್ ಬಂಧನ

ಕಳೆದ ವಾರ ಹೊಯ್ಸಳ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿಶೀಟರ್ ಗೊಣ್ಣೆ ವಿಜಿಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಠಾಣಾ ಕಾನ್ಸ್ಟೇಬಲ್ ನಾಗೇಂದ್ರ, ಕಿರಣ್ ಹಾಗೂ ನೇತ್ರಾ ಎಂಬುವರ ಮೇಲೆ ರೌಡಿಶೀಟರ್ ಸ್ಪ್ರೇ ಎರಚಿದ್ದ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಕೃತ್ಯದ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿ ವಿರುದ್ಧ ಈ ಹಿಂದೆ ಕೊಲೆಯತ್ನ, ದರೋಡೆ, ಸುಲಿಗೆಯಂತಹ ಪ್ರಕರಣಗಳು ದಾಖಲಾಗಿವೆ.

ಇತ್ತೀಚಿಗೆ ರಾಮನಗರ ಭಾಗದಲ್ಲಿ ದರೋಡೆ ಪ್ರಕರಣವೊಂದರಲ್ಲೂ ಬೇಕಾಗಿದ್ದ ವಿಜಿಯನ್ನು ಪೊಲೀಸರು ಹುಡುಕುತ್ತಿದ್ದರು. ರಾಮನಗರ ದರೋಡೆ ಪ್ರಕರಣದಲ್ಲಿ ವಿಜಿಯ ಸಹಚರರಾದ ರೇಣುಕುಮಾರ್, ಹಾಗೂ ಕಿರಣ್ ಬಂಧನವಾಗಿತ್ತು. ಸದ್ಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ರೌಡಿಶೀಟರ್ ವಿಜಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Published On - 11:34 am, Thu, 3 November 22

Follow Us
TV9 Web
TV9 Web

TV9 Kannada

Read More
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು