ಬೆಂಗಳೂರು: ಎಂಟು ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶ

ನಿನ್ನೆ(ಸೆ.04) ವರ್ಗಾವಣೆಯಾಗಿದ್ದ 35 ಜನ ಐಪಿಎಸ್​ ಅಧಿಕಾರಿಗಳಲ್ಲಿ ಇಂದು ಎಂಟು ಜನ ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಅಕ್ಷಯ್​ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್​, ಶೇಖರ್​ ಟೆಕ್ಕಣನವರ್​, ಸೈದುಲ್ಲಾ ಅಡಾವತ್ ಸೇರಿದಂತೆ ಒಟ್ಟು 8 ಜನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.

ಬೆಂಗಳೂರು: ಎಂಟು ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 05, 2023 | 7:25 PM

ಬೆಂಗಳೂರು, ಸೆ.05: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಉನ್ನತ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದೆ. ಹೌದು, ಅದರಂತೆ ನಿನ್ನೆ(ಸೆ.04) ಮುಂಜಾನೆ ಬರೋಬ್ಬರಿ 35 ಐಪಿಎಸ್​ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಅದರಲ್ಲಿ ಇದೀಗ 10 ಜನ ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಯಾವ್ಯಾವ ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿದೆ?

ನಿನ್ನೆ 35 ಜನ ಐಪಿಎಸ್​ ಅಧಿಕಾರಿಗಳಲ್ಲಿ ಇದೀಗ8 ಅಧಿಕಾರಿಗಳಿಗೆ ತಡೆ ನೀಡಿದೆ. ಅಕ್ಷಯ್​ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್​, ಶೇಖರ್​ ಟೆಕ್ಕಣನವರ್​, ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್​ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಜೊತೆಗೆ ಸಂಜೀವ್ ಪಾಟೀಲ್ ವರ್ಗಾವಣೆಗೂ ರಾಜ್ಯ ಸರ್ಕಾರ ತಡೆ ನೀಡಿದ್ದು, ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನು ನಿನ್ನೆ ಆದೇಶದಲ್ಲಿ ಬೆಳಗಾವಿಯಿಂದ ವೈಟ್ ಫೀಲ್ಡ್ ವಿಭಾಗಕ್ಕೆ ವರ್ಗಾವಣೆ ಆಗಿದ್ದ ಸಂಜೀವ್ ಪಾಟೀಲ್​ಗೆ ಸಹ ಮೂಮೆಂಟ್ ಆರ್ಡರ್ ನೀಡಿಲ್ಲ. ಒಟ್ಟು ಎಂಟು ಅಧಿಕಾರಿಗಳ ವರ್ಗಾವಣೆ ನಡೆಸಿ ಇಂದು ಮತ್ತೆ ತಡೆ ಹಿಡಿಯಲಾಗಿದೆ. ಅರ್ಥವಾಗದ ರೀತಿಯಲ್ಲಿ ಆದೇಶ ಮಾಡಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ಮತ್ತೆ ಆರು ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಸರ್ಕಾರದಿಂದ ಮತ್ತೆ ಆರು ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು,  ಬೆಂಗಳೂರು ದಕ್ಷಿಣ ಸಂಚಾರಕ್ಕೆ ವರ್ಗಾವಣೆ ಆಗಿದ್ದ ಕಾರ್ತಿಕ್ ರೆಡ್ಡಿ ರಾಮನಗರ ಎಸ್ ಪಿ ಯಾಗಿ ಮುಂದುವರಿಕೆ, ಡಾ. ಸಿರಿ ಗೌರಿ ಡೆಪ್ಯುಟಿ ಡೈರೆಕ್ಟರ್, ಫೈರ್ ಅಂಡ್ ಎಮರ್ಜೆನ್ಸಿ, ಕೇಂದ್ರ ವಿಭಾಗಕ್ಕೆ ಡಿಸಿಪಿ ಯಾಗಿ ವರ್ಗಾವಣೆ ಆಗಿದ್ದ ಅಬ್ದುಲ್ ಅಹಾದ್ ಸಿಸಿಬಿ ಡಿಸಿಪಿ ಆಗಿ ವರ್ಗಾವಣೆ. ಸಿಸಿಬಿ ಡಿಸಿಪಿ 1ಗೆ ವರ್ಗಾವಣೆ ಆಗಿದ್ದ ಶೇಖರ್ ಟೆಕ್ಕಣ್ಣನವರ್ ಕೇಂದ್ರ ವಿಭಾಗ ಡಿಸಿಪಿಯಾಗಿ ವರ್ಗಾವಣೆ, ಅನಿತಾ ಭೀಮಪ್ಪ ಹಡ್ಡಣ್ಣನವರ್ ಡಿಸಿಪಿ ಪಶ್ಚಿಮ ಸಂಚಾರ, ಆಶೋಕ್ ಕೆ ವಿ. ಎಸ್ ಪಿ ತುಮಕೂರು ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮೊನ್ನೆ 10, ಇಂದು 35; ರಾತ್ರೋರಾತ್ರಿ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

35 ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ್ದ ಸರ್ಕಾರ

1) ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್ 2) ಡಾ.S.D.ಶರಣಪ್ಪ-ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು 3) ವರ್ತಿಕಾ ಕಟಿಯಾರ್-ಎಸ್​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ 4) ಕಾರ್ತಿಕ್​​​​ ರೆಡ್ಡಿ-ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ 5) ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ 6) ಯತೀಶ್ ಚಂದ್ರ-ಎಸ್​​​​ಪಿ, ಆಂತರಿಕ ಭದ್ರತಾ ವಿಭಾಗ 7) ಡಾ.ಭೀಮಾಶಂಕರ ಗುಳೇದ್-ಎಸ್​​​​ಪಿ, ಬೆಳಗಾವಿ 8) ನಿಕಂ ಪ್ರಕಾಶ್ ಅಮ್ರಿತ್-ಎಸ್​​​​ಪಿ, ವೈರ್ ಲೆಸ್ 9) ರಾಹುಲ್ ಕುಮಾರ್ ಶಹಾಪುರವಾಡ್-ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ 10) ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ 11) ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ 12) ಎಸ್‌.ಗಿರೀಶ್-ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ 13) ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್​​ಫೀಲ್ಡ್ ವಿಭಾಗ 14) ಕೆ.ಪರಶುರಾಮ್-ಎಸ್​​​​ಪಿ, ಇಂಟೆಲಿಜೆನ್ಸ್‌ ವಿಭಾಗ 15) H.D.ಆನಂದ್ ಕುಮಾರ್-ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್ 16) ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1 17) ಕಿಶೋರ್ ಬಾಬು- SP&ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ 18) ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು 19) ಲಕ್ಷ್ಮಣ್ ನಿಂಬರಗಿ-ಎಸ್​​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ 20) ಡಾ.ಕೆ.ಅರುಣ್-ಎಸ್​​​​ಪಿ, ಉಡುಪಿ 21) ಎಂ.ಎಸ್.ಮಹಮ್ಮದ್ ಸುಜೀತಾ-ಎಸ್​​​​ಪಿ, ಹಾಸನ 22) ಜಯಪ್ರಕಾಶ್-ಎಸ್​​​​ಪಿ, ಇಂಟೆಲಿಜೆನ್ಸ್ ವಿಭಾಗ 23) ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು 24) ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ 25) ಸೋನಾವಾನೆ ರಿಷಿಕೇಶ್ ಭಗವಾನ್-ಎಸ್​​ಪಿ, ವಿಜಯಪುರ 26) ಲೋಕೇಶ್ ಭರಮಪ್ಪ-ಎಸ್​​ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು 27) ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು 28) ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ) 29) ವೈ.ಅಮರನಾಥ್ ರೆಡ್ಡಿ-ಎಸ್​ಪಿ, ಬಾಗಲಕೋಟ 30) ಹರಿರಾಮ್ ಶಂಕರ್-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ 31) ಅದ್ದೂರು ಶ್ರೀನಿವಾಸುಲು-ಎಸ್​ಪಿ, ಕಲಬುರಗಿ 32) ಅನ್ಶು ಕುಮಾರ್-ಎಸ್​ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ 33) ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ 34) ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು 35) ರವೀಂದ್ರ ಕಾಶಿನಾಥ್ ಗಡದಿ-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ

ಈ ಮೇಲಿನ 35 ಐಪಿಎಸ್​ ಅಧಿಕಾರಿಗಳನ್ನು ನಿನ್ನೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅದರಲ್ಲಿ 8 ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Tue, 5 September 23

ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​