ಅಧಿಕೃತ ಗಣಿಗಾರಿಕೆಯಿಂದಲೇ ತೊಂದರೆ: ಕ್ರಷರ್ ನಿಲ್ಲಿಸುವಂತೆ ಒತ್ತಾಯ, ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ -ಪರಿಸ್ಥಿತಿ ಉದ್ವಿಗ್ನ

| Updated By: ಸಾಧು ಶ್ರೀನಾಥ್​

Updated on: Jan 05, 2022 | 12:15 PM

ತುಮಕೂರು: ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಗಣಿಗಾರಿಕೆಯಿಂದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿರುವುದು ವರದಿಯಾಗಿದೆ. ಗ್ರಾಮದ 400 ಮೀಟರ್ ದೂರದಲ್ಲಿರುವ ವಿಶ್ವ ಎಂಟರ್ ಪ್ರೈಸಸ್ ಜಲ್ಲಿ ಕ್ರಷರ್ ಇತ್ತಿಚೆಗೆ ಸ್ಥಾಪನೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 206 ರ ಕಾಮಗಾರಿ ಉದ್ದೇಶಕ್ಕಾಗಿ ಜಿಲ್ಲಾಡಳಿತವೇ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿದೆ‌‌. ಆದರೆ ಸಾರ್ವಜನಿಕರಿಗೆ ತೊಂದರೆ ಯಾದರೆ ಕೂಡಲೇ ನಿಲ್ಲಿಸಬಹುದು ಅ‌ನ್ನೋ ನಿಯಮ ಕೂಡ ಇದೆ. ಸದ್ಯ ಇದರಿಂದ ಪಕ್ಕದಲ್ಲಿ ಇರುವ ಗ್ರಾಮಕ್ಕೆ ತೊಂದರೆಯಾಗಿದ್ದು ಜಲ್ಲಿ […]

ಅಧಿಕೃತ ಗಣಿಗಾರಿಕೆಯಿಂದಲೇ ತೊಂದರೆ: ಕ್ರಷರ್ ನಿಲ್ಲಿಸುವಂತೆ ಒತ್ತಾಯ, ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ -ಪರಿಸ್ಥಿತಿ ಉದ್ವಿಗ್ನ
ಅಧಿಕೃತ ಗಣಿಗಾರಿಕೆಯಿಂದಲೇ ತೊಂದರೆ: ಜಾನಾವಾರು, ಮನುಷ್ಯರಿಗೂ ಆರೋಗ್ಯದಲ್ಲಿ ಏರುಪೇರು
Follow us on

ತುಮಕೂರು: ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಗಣಿಗಾರಿಕೆಯಿಂದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿರುವುದು ವರದಿಯಾಗಿದೆ. ಗ್ರಾಮದ 400 ಮೀಟರ್ ದೂರದಲ್ಲಿರುವ ವಿಶ್ವ ಎಂಟರ್ ಪ್ರೈಸಸ್ ಜಲ್ಲಿ ಕ್ರಷರ್ ಇತ್ತಿಚೆಗೆ ಸ್ಥಾಪನೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 206 ರ ಕಾಮಗಾರಿ ಉದ್ದೇಶಕ್ಕಾಗಿ ಜಿಲ್ಲಾಡಳಿತವೇ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿದೆ‌‌. ಆದರೆ ಸಾರ್ವಜನಿಕರಿಗೆ ತೊಂದರೆ ಯಾದರೆ ಕೂಡಲೇ ನಿಲ್ಲಿಸಬಹುದು ಅ‌ನ್ನೋ ನಿಯಮ ಕೂಡ ಇದೆ.

ಸದ್ಯ ಇದರಿಂದ ಪಕ್ಕದಲ್ಲಿ ಇರುವ ಗ್ರಾಮಕ್ಕೆ ತೊಂದರೆಯಾಗಿದ್ದು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಗ್ರಾಮಸ್ಥರು ಪ್ರತಿಭಟನೆ ಸಹ ಮಾಡಿದ್ದಾರೆ. ಅಲ್ಲದೇ ಸಣ್ಣ ಪ್ರಮಾಣದ ಬ್ಲಾಸ್ಟ್ ಗೆ ಅನುಮತಿ ಇದ್ದು, ಸಣ್ಣ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡದೇ ದೊಡ್ಡದಾಗಿ ಬ್ಲಾಸ್ಟ್ ಮಾಡಿ ತೀವ್ರ ಸಮಸ್ಯೆಯಾಗಿದೆಯಂತೆ‌. ಕೋಳಘಟ್ಟ ಗ್ರಾಮದಲ್ಲಿ ಹಲವು ಮನೆಗಳು ಹಾನಿಗೊಳಗಾಗಿದ್ದು, ಸಾಕಷ್ಟು ಮಂದಿ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಜಾನಾವಾರುಗಳು ಸೇರಿದಂತೆ ಮನುಷ್ಯರಿಗೂ ಕೂಡ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ಕ್ರಷರ್ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ಅಧಿಕಾರಿಗಳು ಬಂದಾಗ ಒಂದು ರೀತಿ, ಅವರು ಇಲ್ಲದಿರುವಾಗ ಮತ್ತೊಂದು ರೀತಿಯಲ್ಲಿ ಕ್ರಷರ್ ನವರು ವರ್ತಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ‌ ಸದ್ಯ ಕ್ರಷರ್ ನಿಲ್ಲಿಸಿ ಇಲ್ಲಾಂದ್ರೆ ಗ್ರಾಮಸ್ಥರಿಗೆ ಪರ್ಯಾಯ ವಸತಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಕೇಳಲು ಹೋದರೆ ಪೊಲೀಸರ ಮೂಲಕ ಧಮ್ಕಿ ಹಾಕಿಸುತ್ತಾರೆ ಎನ್ನಲಾಗಿದೆ. ಸದ್ಯ ಕ್ರಷರ್ ನಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು ಅದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ: ಪರಿಸ್ಥಿತಿ ಉದ್ವಿಗ್ನ

ಕೋಳಘಟ್ಟ ಗ್ರಾಮದಲ್ಲಿ ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಸಮಸ್ಯೆ ಉದ್ಭವವಾಗಿರುವ ಪ್ರಕರಣ ಸಂಬಂಧ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಕ್ರಷರ್ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಬಾರದೆಂದು ಪೊಲೀಸರು ಇಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೋಳಘಟ್ಟ ಗ್ರಾಮದಲ್ಲಿ ಇದೀಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Published On - 10:54 am, Wed, 5 January 22