ತುಮಕೂರು: ನಗರದಲ್ಲಿ ತಡರಾತ್ರಿ ಸುರಿದ ಮಳೆಗೆ (Rain) ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಶಿವಮೂಕಾಂಬಿಕಾದಲ್ಲಿ ನಡೆದಿದೆ. ಮಳೆಯಿಂದ ಮನೆಗೆ ನೀರು ನುಗ್ಗಿ ವಿದ್ಯುತ್ (Power) ಪ್ರವಹಿಸಿ 75 ವರ್ಷದ ವೀರಣ್ಣ ದುರ್ಮರಣ ಹೊಂದಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣದಿಂದಲೇ ದುರಂತ ಸಂಭವಿಸಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಮಳೆ ನೀರು ಸದಾಶಿವನಗರ, ವೀರಸಾಗರ ಬಳಿ ಮನೆಗಳಿಗೆ ನುಗ್ಗಿದ್ದು, ನೀರು ಹೊರಹಾಕಲು ರಾತ್ರಿಯಿಡಿ ನಗರ ವಾಸಿಗಳು ಪರದಾಡಿದ್ದಾರೆ.
ಮನೆಗಳ ಒಳಗೆ ಎರಡರಿಂದ ಮೂರು ಅಡಿ ನೀರು ನಿಂತಿತ್ತು. ಜೊತೆಗೆ ಮನೆಯ ಒಂದು ಪಕ್ಕದ ಗೊಡೆ ಕುಸಿದಿತ್ತು.
ಗೋಡೆಯ ಕುಸಿತದಿಂದ ಮನೆಯವರು ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಶಿರಾ ಗೇಟ್ ಬಳಿಯಿರುವ ಅಮಾನಿಕೆರೆ ಕೋಡಿ ಬಿದ್ದು ಶಂಕರ್ ಮಾಲ್ಗೆ ನೀರು ನುಗ್ಗಿತ್ತು. ಮಾಲ್ಗೆ ನೀರು ನುಗ್ಗಿದ ಹಿನ್ನೆಲೆ ಇಂದಿನ ಶೋಗಳು ರದ್ದು ಮಾಡಲಾಗಿದೆ.
ಇದನ್ನೂ ಓದಿ: DNA Test: ಅತ್ಯಾಚಾರ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಬಾಂಬೆ ಹೈಕೋರ್ಟ್
ಗುಬ್ಬಿ ಪಟ್ಟಣದ ಬೆಲ್ಲದಪೇಟೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆ ಗೋಡೆ ಕುಸಿದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪತ್ರಕರ್ತರೊಬ್ಬರಿಗೆ ಸೇರಿದ ಮನೆ ಎಂದು ತಿಳಿದುಬಂದಿದೆ. ಮಳೆಯ ಅಬ್ಬರದಿಂದ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿದೆ. ಮಂಡಿಪೇಟೆಯಲ್ಲಿ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ ಅವಾಂತರ ಸೃಷ್ಟಿಯಾಗಿದೆ. ಈ ವೇಳೆ ಎಲೆಕ್ಟ್ರಾನಿಕ್ ವಸ್ತುಗಳು, ಹಾರ್ಡ್ ವೇರ್ ವಸ್ತುಗಳು ನೀರು ಪಾಲಾಗಿವೆ. ಮಳೆಯಿಂದ ಲಕ್ಷಾಂತರ ಹಣ ನಷ್ಟವಾಗಿದೆ. ಗುಂಡಿ ಬಗ್ಗೆ ನೀರು ಹರಿಯುವ ಬಗ್ಗೆ ಹೇಳಿದರೂ ಕೂಡ ತಲೆಕೆಡಿಸಿಕೊಂಡಿಲ್ಲ ಎಂದು ಹಾರ್ಡ್ ವೇರ್ ಮಾಲೀಕ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ITR filing: ಐಟಿ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನ; ಕಾರ್ಯನಿರ್ವಹಿಸಲಿವೆ ಆಯಕಾರ್ ಸೇವಾ ಕೇಂದ್ರಗಳು
ತುಮಕೂರಿನ ಸದಾಶಿವನಗರ ಸಂಪೂರ್ಣ ಜಲಾವೃತವಾಗಿದೆ. ಸದಾಶಿವನಗರದ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ರಸ್ತೆಯಲ್ಲಿ ಓಡಾಡಲು ಜನರು ಹರಸಾಹಸ ಪಡುತ್ತಿದ್ದಾರೆ.
Published On - 11:01 am, Sun, 31 July 22