AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

18 ವರ್ಷದ ಮಕ್ಕಳು ನಿಮ್ಮ ಮಾತು ಕೇಳ್ತಾ ಇಲ್ವಾ? ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟರವರ ಸಲಹೆ ಇಲ್ಲಿದೆ

18 ವರ್ಷದ ಮಕ್ಕಳು ನಿಮ್ಮ ಮಾತು ಕೇಳ್ತಾ ಇಲ್ವಾ? ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟರವರ ಸಲಹೆ ಇಲ್ಲಿದೆ

TV9 Web
| Updated By: sandhya thejappa

Updated on:Jul 31, 2022 | 8:11 AM

ಸಾಮಾನ್ಯವಾಗಿ 18ರಿಂದ 20 ವರ್ಷದ ಮಕ್ಕಳು ಪೋಷಕರ ಜೊತೆ ಕಿರಿಕಿರಿ ಮಾಡುತ್ತಿರುತ್ತಾರೆ. ಇದು ಹೆತ್ತವರಿಗೆ ನೋವಿನ ಜೊತೆ ಆತಂಕ.

ತಂದೆ-ತಾಯಿಗೆ (Mother And Father) ತಮ್ಮ ಮಕ್ಕಳು (Children) ಮಾತು ಕೇಳದೆ ಇದ್ದಾಗ ನೋವಾಗುವುದು ಸಹಜ. ಮಕ್ಕಳು ನಮಗೆ ವಿರುದ್ಧವಾಗಿ ಇರುತ್ತಾರೆ ಅಂತ ಪೋಷಕರು ಚಿಂತೆ ಮಾಡುತ್ತಾರೆ. ಸಾಮಾನ್ಯವಾಗಿ 18ರಿಂದ 20 ವರ್ಷದ ಮಕ್ಕಳು ಪೋಷಕರ ಜೊತೆ ಕಿರಿಕಿರಿ ಮಾಡುತ್ತಿರುತ್ತಾರೆ. ಇದು ಹೆತ್ತವರಿಗೆ ನೋವಿನ ಜೊತೆ ಆತಂಕ. ಆದರೆ ಆ ಮಕ್ಕಳ ಮನಸ್ಥಿತಿ ಬದಲಾಗಲು ಕಾರಣವೇನು? ಎಂಬ ವಿಚಾರವನ್ನು ಮೊದಲು ಅರಿಯಬೇಕು. ಹಾಗೇ ಮಕ್ಕಳ ಮೇಲೆ ಭರವಸೆ ಇಟ್ಟುಕೊಳ್ಳುವುದು ಮೂರ್ಖತನ. ಏಕೆಂದರೆ ಹಂತ ಹಂತವಾಗಿ ಬೆಳೆಯುತ್ತಿದ್ದಂತೆ ಮಕ್ಕಳ ಮನಸ್ಥಿತಿ ಬದಲಾಗುತ್ತದೆ. ಮಕ್ಕಳನ್ನು ಬದಲಾಯಿಸುವ ಬದಲು ಅವರ ಮನಸ್ಥಿತಿಗೆ ಪೋಷಕರು ಹೊಂದಿಕೊಳ್ಳಬೇಕು. ಹೀಗಾದಾಗ ಮಾತ್ರ ತಂದೆ- ತಾಯಿ, ಮಕ್ಕಳ ನಡುವೆ ಅಪಸ್ವರ ಮೂಡಲ್ಲ.

ಇದನ್ನೂ ಓದಿ: Bindyarani Devi: ಭಾರತಕ್ಕೆ ಮತ್ತೊಂದು ಪದಕ: ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ

Published on: Jul 31, 2022 08:11 AM