ಪ್ರಿಯತಮನ ಜೊತೆ ದುಬೈಗೆ ಹಾರಿದ ಪತ್ನಿ! ಮನನೊಂದು 3 ಮಕ್ಕಳ ಜೊತೆ ವಿಷ ಸೇವಿಸಿ ಪ್ರಾಣಬಿಟ್ಟ ಪತಿ

| Updated By: ಆಯೇಷಾ ಬಾನು

Updated on: Aug 18, 2022 | 6:27 PM

ಸಮೀವುಲ್ಲಾ ಪತ್ನಿ ಸಾಹೇರಾ ಬಾನು ಪ್ರಿಯಕರನ ಜೊತೆ ಸೌದಿಗೆ ಹೋಗಿದ್ದಾರೆ. ಇದಕ್ಕೆ ನೊಂದ ಪತಿ ಆಗಸ್ಟ್ 13ರಂದು ಇಬ್ಬರು ಹೆಣ್ಣು ಮಕ್ಕಳು, ಗಂಡು ಮಗು ಸೇರಿ ಮೂವರು ಮಕ್ಕಳ ಜೊತೆ ಸಮೀವುಲ್ಲಾ ವಿಷಸೇವಿಸಿದ್ದು ಸಮೀವುಲ್ಲಾ ಮೃತಪಟ್ಟಿದ್ದಾರೆ.

ಪ್ರಿಯತಮನ ಜೊತೆ ದುಬೈಗೆ ಹಾರಿದ ಪತ್ನಿ! ಮನನೊಂದು 3 ಮಕ್ಕಳ ಜೊತೆ ವಿಷ ಸೇವಿಸಿ ಪ್ರಾಣಬಿಟ್ಟ ಪತಿ
ಘಟನೆ ನಡೆದ ಜಾಗ
Follow us on

ತುಮಕೂರು: 3 ಮಕ್ಕಳ ತಾಯಿ ಪ್ರಿಯಕರನ ಜೊತೆ ವಿದೇಶಕ್ಕೆ ಹಾರಿ ಹೋಗಿದ್ದು ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ನಗರದ ಪಿ.ಹೆಚ್‌.ಕಾಲೋನಿಯಲ್ಲಿ ನಡೆದಿದೆ. ಮೂವರು ಮಕ್ಕಳ ಜೊತೆ ವಿಷ ಸೇವಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ತಂದೆ ಮೃತಪಟ್ಟಿದ್ದು ಮಕ್ಕಳು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಸಮೀವುಲ್ಲಾ ಪತ್ನಿ ಸಾಹೇರಾ ಬಾನು ಪ್ರಿಯಕರನ ಜೊತೆ ಸೌದಿಗೆ ಹೋಗಿದ್ದಾರೆ. ಇದಕ್ಕೆ ನೊಂದ ಪತಿ ಆಗಸ್ಟ್ 13ರಂದು ಇಬ್ಬರು ಹೆಣ್ಣು ಮಕ್ಕಳು, ಗಂಡು ಮಗು ಸೇರಿ ಮೂವರು ಮಕ್ಕಳ ಜೊತೆ ಸಮೀವುಲ್ಲಾ ವಿಷಸೇವಿಸಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಮೀವುಲ್ಲಾ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಸಾವು ಬದುಕಿನ ಮಧ್ಯೆ ನರಳಾಟಡುತ್ತಿದ್ದಾರೆ. ತಾಯಿ ಮಾಡಿದ ತಪ್ಪಿಗೆ ಮಕ್ಕಳು ನರಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾರಿಗೂ ಹೇಳದೆ ಕೇಳದೆ ಸಾಹೇರಾ ಬಾನು ಸೌದಿಗೆ ಹಾರಿದ್ದಾರೆ. ಬಳಿಕ ಅಲ್ಲಿ ಮನೆ ಕೆಲಸ ಮಾಡಿಕೊಂಡು ಸೆಟಲ್ ಆಗಿದ್ದಾಳೆ. ತನ್ನ ಪ್ರಿಯತಮನ ಜೊತೆ ಮೋಜು ಮಸ್ತಿ ಮಾಡುತ್ತಾ ವಿಡಿಯೋ ಕಾಲ್ ಮಾಡಿ ಗಂಡನನ್ನು ರೇಗಿಸುತ್ತಿದ್ದಳಂತೆ. ಸೌದಿಯಿಂದ ಬಂದು ಬಿಡುವಂತೆ ಗಂಡ ಎಷ್ಟೇ ಕಣ್ಣೀರು ಹಾಕಿದರು ಪತ್ನಿ ಕರಗಿಲ್ಲ. ಹೀಗಾಗಿ ಪತ್ನಿ ವಾಪಸ್ ಬರಲ್ಲ ಎಂದು ಬೇಸತ್ತು ಮಕ್ಕಳೊಂದಿಗೆ ಸಮೀವುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬರಲ್ಲ ಅಂತ ಗೊತ್ತಾಗಿ ತಂದೆಯೊಂದಿಗೆ ಮೂವರು ಮಕ್ಕಳು ವಿಷ ಸೇವಿಸಿವೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಮಕ್ಕಳು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:49 pm, Thu, 18 August 22