ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ 4 ತಿಂಗಳ ಮಗು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 30, 2023 | 1:53 PM

ಕುಣಿಗಲ್​ನ ದಿವಾಕರ್, ಅರುಣಾ ದಂಪತಿಯ ಮಗು ಉಸಿರಾಟ ತೊಂದರೆಯಿದ್ದ ಹಿನ್ನಲೆ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ, ಮಗುವಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ 4 ತಿಂಗಳ ಮಗು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ
ಮೃತ ಮಗುವನ್ನ ನೋಡಿ ಅಳುತ್ತಿರುವ ತಾಯಿ
Follow us on

ತುಮಕೂರು: ಕುಣಿಗಲ್(Kunigal)​ನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ 4 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ದಿವಾಕರ್, ಅರುಣಾ ದಂಪತಿಯ ಮಗು ಉಸಿರಾಟ ತೊಂದರೆಯಿದ್ದ ಹಿನ್ನಲೆ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಕ್ಕಳ ತಜ್ಞರು ಲಭ್ಯವಿಲ್ಲದೇ ಇರುವುದರಿಂದ ಸಿಬ್ಬಂದಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಬಳಿಕ ಕೂಡಲೇ ಚುಂಚನಗಿರಿ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸಿಬ್ಬಂದಿ ತಿಳಿಸಿದ್ದಾರೆ. ಅಷ್ಟರಲ್ಲೇ ಮಗು ಸಾವೀಗಿಡಾಗಿದೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ.

ಬಾರ್ ಬೀಗ ಮುರಿದು ಕಳ್ಳರ ಕೈಚಳಕ; 28 ಸಾವಿರ ಹಣ, ಒಂದು ಮೊಬೈಲ್ ಸೇರಿ ಮದ್ಯದ ಬಾಟಲಿಗಳನ್ನ ಹೊತ್ತೋಯ್ದ ಖದೀಮರು

ಬೆಂಗಳೂರು ನಗರ: ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಪಾರ್ಕ್ ರಸ್ತೆಯಲ್ಲಿರುವ ನಿಸರ್ಗ ವೈನ್ ಪ್ಯಾರಡೈಸ್ ನ ಬೀಗ ಮುರಿದು ಕಳ್ಳರು ಕೈಚಳಕ ತೋರಿಸಿದ್ದಾರೆ. ನಾಲ್ಕು ಮಂದಿ ಬಂದಿದ್ದು, ಬಾರ್ ಬೀಗ ಒಡೆದು ಹಾಕಿ ಒಳನುಗ್ಗಿ 28 ಸಾವಿರ ಹಣ, ಒಂದು ಮೊಬೈಲ್ ಹಾಗೂ ಮದ್ಯದ ಬಾಟಲಿಗಳನ್ನ ಹೊತ್ತೋಯ್ದಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಖದೀಮರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ(ಜೂ.29) ಮಧ್ಯಾಹ್ನ ಆರೋಪಿಗಳು ಬಾರ್​ನಲ್ಲಿ ಮದ್ಯ ತೆಗೆದುಕೊಂಡು ಕುಡಿದಿದ್ದಾರೆ. ಬಳಿಕ ಪ್ಲಾನ್ ಮಾಡಿದ್ದ ಕಳ್ಳರು, ಸಿಬ್ಬಂದಿ ರಾತ್ರಿ ಬಾರ್ ಕ್ಲೋಸ್ ಮಾಡಿ ಹೋದ ಕೆಲ ಸಮಯದಲ್ಲಿಯೇ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಬನ್ನೇರುಘಟ್ಟ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಒಂದು ವರ್ಷದ ಕಂದಮ್ಮನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು 10 ದಿನಗಳ ಕಾಲ ಟ್ರಿಪ್​ಗೆ ಹೋದ ತಾಯಿ, ಹಸಿವಿನಿಂದ ಅತ್ತೂ ಅತ್ತೂ ಮಗು ಸಾವು

ಕೃಷಿ ಸಾಮಾಗ್ರಿಗಳನ್ನ ಕದಿಯಿತ್ತಿದ್ದ ಕಳ್ಳನನ್ನ ಹಿಡಿದ ರೈತರು

ರಾಯಚೂರು: ತಾಲೂಕಿನ ಕಡಗಂದೊಡ್ಡಿಯಲ್ಲಿ ಕೃಷಿ ಸಾಮಾಗ್ರಿಗಳನ್ನ ಕದಿಯಿತ್ತಿದ್ದ ಕಳ್ಳನನ್ನ ರೈತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಲಗಳಲ್ಲಿ ಅಳವಡಿಸಿದ್ದ ಪಂಪ್ ಸೆಟ್, ಪೈಪ್ ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನ ವಡವಟ್ಟಿ ಗ್ರಾಮದ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಇತ ಕದ್ದ ಮಾಲನ್ನು ತೆಲಂಗಾಣ, ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದನಂತೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 30 June 23