ತುಮಕೂರು: ದಲಿತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ವಿಳಂಬ ವಿಚಾರವಾಗಿ ಕುಣಿಗಲ್ ಪೊಲೀಸ್ ಠಾಣೆ ಸರ್ಕಲ್ ಇನ್ಸೆಪೆಕ್ಟರ್ ಗುರುಪ್ರಸಾದ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ಎದುರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ, ಪೊಲೀಸರ ವರ್ತನೆ ವಿರುದ್ಧ ಶಾಸಕ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಇನ್ಸೆಪೆಕ್ಟರ್ ಗುರುಪ್ರಸಾದ್ ಅಮಾನತಿಗೆ ಆಗ್ರಹಿಸಿದರು.
ಏನದು ಘಟನೆ: ನಿನ್ನೆ ಸಂಜೆ ಹುಲಿಯೂರು ದುರ್ಗದ ಬಳಿ ಬೈಕ್- ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಮೇಶ್ ಎಂಬಾತ ಸಾವನಪ್ಪಿದ್ದರು. ರಮೇಶ್ ಶವವನ್ನು ಬೇಗ ಅಂತ್ಯಸಂಸ್ಕಾರ ಮಾಡಿ, ನೀಡುವಂತೆ ಗ್ರಾಮ ಪಂಚಾಯತ್ ಸದಸ್ಯ ಬಾ.ನಾ. ರವಿ ಇನ್ಸೆಪೆಕ್ಟರ್ ಗುರುಪ್ರಸಾದ್ ಅವರಿಗೆ ಮನವಿ ಮಾಡಿದ್ದಾರೆ. ಅದರೆ ಮೊಬೈಲ್ ನಲ್ಲಿ ರವಿಯೊಂದಿಗೆ ಇನ್ಸೆಪೆಕ್ಟರ್ ಗುರುಪ್ರಸಾದ್ ಉದ್ಧಟನತನದಿಂದ ಮಾತನಾಡಿದ್ದರು ಎನ್ನಲಾಗಿದೆ
ಕುಣಿಗಲ್ ಶಾಸಕ ಡಾ ರಂಗನಾಥ್‌ಗೆ ಕೊರೊನಾ, ಕ್ವಾರಂಟೈನ್ ಆಗ್ತಾರಾ ಕಾಂಗ್ರೆಸ್ ನಾಯಕ?
(Kunigal MLA Dr Ranganath protest against police inspector)