ಚಲಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ: ಕೆಳಗೆ ಸಿಲುಕಿ ತಂದೆ, ಮಗ ಸ್ಥಳದಲ್ಲೇ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2024 | 5:27 PM

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಲಕ್ಕೆಗೌಡನಪಾಳ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್ ಕೆಳಗೆ ಸಿಲುಕಿ ತಂದೆ ಮತ್ತು ಮಗ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಸದ್ಯ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ: ಕೆಳಗೆ ಸಿಲುಕಿ ತಂದೆ, ಮಗ ಸ್ಥಳದಲ್ಲೇ ಸಾವು
ಚಲಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ: ಕೆಳಗೆ ಸಿಲುಕಿ ತಂದೆ, ಮಗ ಸ್ಥಳದಲ್ಲೇ ಸಾವು
Follow us on

ತುಮಕೂರು, ನವೆಂಬರ್ 17: ಚಲಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಲಕ್ಕೆಗೌಡನಪಾಳ್ಯದಲ್ಲಿ ನಡೆದಿದೆ. ತಂದೆ ಶಿವರಾಮಯ್ಯ(50), ಮಗ ಹರೀಶ್(21) ಮೃತರು. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಅಡಕೆ ತುಂಬಿಕೊಂಡು ಬರುತ್ತಿದ್ದಾಗ ನಡೆದ ಘಟನೆ ಸಂಭವಿಸಿದ್ದು, ಟ್ರ್ಯಾಕ್ಟರ್ ಕೆಳಗೆ ಸಿಲುಕಿ ತಂದೆ ಮತ್ತು ಮಗ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತರು ಜಾಣಗೆರೆ ಗ್ರಾಮದ ನಿವಾಸಿಗಳು.

ಸುಸ್ತು ಎಂದು ಮಲಗಿದ ವಿದ್ಯಾರ್ಥಿ ಮೇಲೆಳಲಿಲ್ಲ

ಜಿಲ್ಲೆಯ ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿ ಬಳಿಯಿರುವ ಏಕಲವ್ಯ ವಸತಿ ಶಾಲೆಯಲ್ಲಿ  8 ತರಗತಿಯ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಅಭಿಲಾಷ್ ಮೃತ ವಿದ್ಯಾರ್ಥಿ. ತನ್ನ ತಾಯಿ ದೀಪಾವಳಿ ಹಬ್ಬ ಮುಗಿಸಿ ಮತ್ತೆ ವಾಪಸ್ ವಸತಿ ಶಾಲೆಗೆ ನಗುತ್ತಲೇ ಆಡುತ್ತಲೇ ಹೋಗಿದ್ದಾನಂತೆ.

ವಸತಿ ಶಾಲೆಗೆ ತೆರಳಿದ ಅಭಿಲಾಷ್ ಮಧ್ಯಾಹ್ನ 12 ಸುಮಾರಿಗೆ ಸುಸ್ತಾಗ್ತಿದೆ ಎಂದು ಕೊಠಡಿಗೆ ಬಂದು ಮಲಗಿದ್ದಾನಂತೆ ಅಷ್ಟೇ, ಮತ್ತೆ ಮಧ್ಯಾಹ್ನ 3 ರ ವೇಳೆಗೆ ತೀವ್ರ ಅಸ್ವಸ್ಥನಾಗಿ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಮಾರು 2 ಗಂಟೆಗಳ ಕಾಲ ಅಸ್ವಸ್ಥತೆಯಿಂದ ಮಲಗಿದ್ದಾನಂತೆ ಅಲ್ಲದೇ ಬಾಯಲ್ಲಿ ಮೂಗಲ್ಲಿ ರಕ್ತಸ್ರಾವ ಆಗಿದೆ ಎನ್ನಲಾಗಿದೆ. ಬಳಿಕ ವಸತಿ ಶಾಲೆಯ ವಿದ್ಯಾರ್ಥಿಗಳೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಅಷ್ಟರಲ್ಲಿ ಅಭಿಲಾಷ್ ಮೃತಪಟ್ಟಿರುವುದು ತಿಳಿದಿದೆ.

ಇದನ್ನೂ ಓದಿ: ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ

ಇನ್ನೂ ಘಟನೆ ಬಗ್ಗೆ ತಿಳಿದ ತಹಶಿಲ್ದಾರ್ ಹಾಗೂ ಡಿಸಿ ಶುಭಕಲ್ಯಾಣ್ ಕೂಡಲೇ ಆಸ್ಪತ್ರೆಗೆ ಹಾಗೂ ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು, ಪಿಎಮ್ ವರದಿಗಾಗಿ ಕಾಯಲಾಗುತ್ತಿದೆ. ಇನ್ನೂ ‌ನಮ್ಮ ಮನೆಯಿಂದ ನಾರ್ಮಲ್ ಆಗಿ ಬಂದ ಅಭಿಲಾಷ್ ವಸತಿ ಶಾಲೆಯಲ್ಲಿ ಯಾಕೆ ಹೀಗಾಯ್ತು ಅಂತಾ ವಸತಿ ಶಾಲೆಯ ಮೇಲೆ ಅನುಮಾನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.