ತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಪರದಾಟ; ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನರಳಾಟ

| Updated By: sandhya thejappa

Updated on: Mar 03, 2022 | 9:26 AM

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಬಳಿಕ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಪರದಾಟ; ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನರಳಾಟ
ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ನರಳಾಡುತ್ತಿರುವ ವ್ಯಕ್ತಿ
Follow us on

ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ (Primary Health Center). ಆದರೆ ವೈದ್ಯರು (Doctor) ಮತ್ತು ಸಿಬ್ಬಂದಿ ಇಲ್ಲದೆ ಜನ ಪರದಾಡುತ್ತಿದ್ದಾರೆ. ಅಪಘಾತದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದರು. ಚಿಕಿತ್ಸೆ ನೀಡಲು ವೈದ್ಯರಿಲ್ಲದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ ನರಳಾಡಿದ್ದಾರೆ. ನರ್ಸ್ ನನ್ನ ಡ್ಯೂಟಿ ಮುಗಿದಿದೆ. ನನ್ನ ಬಳಿ ಬೀಗ ಇಲ್ಲ ಅಂತಾ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಬಳಿಕ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಗಾಂಜಾ ಸಮೇತ ಸಿಕ್ಕಿ ಬಿದ್ದ ಚಾಲಕ:
ನೆಲಮಂಗಲ: ಅಬಕಾರಿ ದಳದ ಕಾರ್ಯಚರಣೆಯಲ್ಲಿ ಗಾಂಜಾ ಸಮೇತ ಚಾಲಕ ಮತ್ತು ಸಹಾಯಕ ಸಿಕ್ಕಿ ಬಿದ್ದಿದ್ದಾರೆ. ಉತ್ತರ ಪ್ರದೇಶ ಮೂಲದ ಚಾಲಕ ಅಜಿತ್ ಕುಮಾರ್, ಕ್ಲಿನರ್ ಜಿತೆಂದರ್ ಬಂಧನಕ್ಕೊಳಗಾದವರು. ನೆಲಮಂಗಲ ಹೆದ್ದಾರಿ 4 ಶ್ರೀನಿವಾಸಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಎನ್​ಡಿಪಿಎಸ್ ಕಾಯ್ದೆ ಅಡಿ ನೆಲಮಂಗಲ ಅಬಕಾರಿ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿ:
ರಾಮನಗರ: ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ಅಪ್ಪಗೆರೆ ಗ್ರಾಮದ ಬಳಿ ನಡೆದಿದೆ. ಲಕ್ಷಮ್ಮ ಎಂಬ ವೃದ್ಧೆಯ ಚಿನ್ನದ ಸರಗಳನ್ನ ಇಬ್ಬರು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ. 25 ಗ್ರಾಂ ಚಿನ್ನದ ಸರ, 10 ಗ್ರಾಂ ಗುಂಡಿನ ಸರ ಕಸಿದು ಎಸ್ಕೇಪ್ ಆಗಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು

ಮೆಕ್ಸಿಕೊದಲ್ಲಿ ಸೇನಾನೆಲೆ ಸ್ಥಾಪಿಸಿ ಕ್ಷಿಪಣಿ ನಿಲ್ಲಿಸಿದರೆ ಅಮೆರಿಕ ಸುಮ್ಮನಿರುತ್ತಾ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಕೊಡುವ ಸಮರ್ಥನೆ ಇದು

Published On - 9:24 am, Thu, 3 March 22