ತುಮಕೂರು: ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಪೇದೆ ನಾಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುಧಾ (39) ನಾಪತ್ತೆಯಾಗಿರುವ ಪೇದೆ. ಕಳೆದ 13ರಂದು ಚಿಕ್ಕನಾಯಕನಹಳ್ಳಿ ಸಿಪಿಐ ಕಛೇರಿಗೆ ಕರ್ತವ್ಯಕ್ಕೆ ಸುಧಾ ತೆರಳಿದ್ದರು. ಕರ್ತವ್ಯಕ್ಕೆ ಹೋದವರು ನಾಪತ್ತೆಯಾಗದ್ದಾರೆನ್ನಲಾಗುತ್ತಿದ್ದು, ಸುಧಾ ಅವರ ಮೊಬೈಲ್ ಸ್ವಿಚಾಫ್ ಆಗಿದೆ. ಪೇದೆ ಸುಧಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇಬ್ಬರು ಮಕ್ಕಳ ಜತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆಗೆ ಶರಣು:
ತುಮಕೂರು: ಇಬ್ಬರು ಮಕ್ಕಳ ಜತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ತುಮಕೂರು ತಾಲೂಕಿನ ಅರಕೆರೆ ಗ್ರಾಮ ಕೆರೆಯಲ್ಲಿ ನಡೆದಿದೆ. ಮಕ್ಕಳಾದ ಹೇಮಾ(9), ಶೇಖರ್(7) ಜತೆ ಪುಷ್ಪಲತಾ(30) ಮೃತರು. ಮೃತರನ್ನು ಮಧುಗಿರಿ ತಾಲೂಕಿನ ಕವಣದಾಲ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮಕ್ಕಳ ಜೊತೆ ಸಹೋದರನ ಮನೆಗೆ ಬಂದಿದ್ದ ತಾಯಿ ಪುಷ್ಪಲತಾ, ಅಂಗಡಿಗೆ ಹೋಗಿಬರುತ್ತೇವೆಂದು ಹೇಳಿ ಮನೆಯಿಂದ ತೆರಳಿದ್ದರು. ತಾಯಿ, ಇಬ್ಬರು ಮಕ್ಕಳ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿದ್ದ ಪುಷ್ಪಲತಾ, ತುಮಕೂರು ತಾಲೂಕಿನ ಹೊಲತಾಳು ಗ್ರಾಮದಿಂದ ಮಧುಗಿರಿ ತಾಲೂಕಿನ ಕವಣದಾಲ ಬಳಿಯಿರುವ ಚಿಕ್ಕತಿಮ್ಮನಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಶಾಂತ್ ಕುಮಾರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ಆರು ವರ್ಷಗಳ ಹಿಂದೆ ವಾಪಸ್ ಊರಿಗೆ ಬಂದಿದ್ದ ಪುಷ್ಪಲತಾ, ಆರು ವರ್ಷಗಳಿಂದ ತವರು ಮನೆಯಲ್ಲಿ ವಾಸವಿದ್ದರು. ತನ್ನ ಮಗ ಶೇಖರ್ ಜೊತೆ ವಾಸವಿದ್ದು, ಕಳೆದ ಒಂದು ತಿಂಗಳ ಹಿಂದೆ ಶಾಂತಕುಮಾರ್ ತಂದೆ ರಂಗಣ್ಣ ಎನ್ನುವರು ಸಾವನ್ನಪ್ಪಿದ್ದಾಗ ಅಂತ್ಯಕ್ರಿಯೆಗೆ ಪುಷ್ಟಲತಾ ಹೋಗಿದ್ದರು. ಪತಿ ಪತ್ನಿ ಸದಾ ಜಗಳ ಆಡುತ್ತಿದ್ದರು ಎನ್ನಲಾಗಿದೆ. ಜಗಳದಿಂದ ಬೇಸತ್ತು ಪುಷ್ಪಲತಾ ತವರು ಮನೆ ಸೇರಿದ್ದಳು.
ಬಳಿಕ ತನ್ನ ಮಾವನ ಅಂತ್ಯಕ್ರಿಯೆಗೆ ಹೋಗಿ ಒಂದು ತಿಂಗಳು ಪತಿಯ ಮನೆಯಲ್ಲಿ ಇದ್ದಳು ನಿನ್ನೆಯೂ ಕೂಡ ಮನೆಯಲ್ಲಿ ಜಗಳದಿಂದ ಊರಿನತ್ತ ಬಂದಿದ್ದು, ತವರು ಮನೆಗೆ ಹೋಗದೇ ಅರಕೆರೆ ಬಳಿ ಇಳಿದು ಕೆರೆಯ ಪಕ್ಕ ಬಾವಿಗೆ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೇಸ್ ಬುಕ್ನಲ್ಲಿ ಮೃತದೇಹದ ಪೋಟೊ ನೋಡಿ ಸಂಬಂದಿಕರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳದಿಂದ ಮೃತ ದೇಹಗಳು ಹೊರಕ್ಕೆ ತೆಗೆಯಲಾಗಿದೆ.
ಕುತ್ತಿಗೆ ಕುಯ್ದು ವಿವಾಹಿತ ಮಹಿಳೆ ಬರ್ಬರ ಹತ್ಯೆ:
ಕೊಡಗು: ಕುತ್ತಿಗೆ ಕುಯ್ದು ವಿವಾಹಿತ ಮಹಿಳೆ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಸಾಹಿರ (38) ಕೊಲೆಯಾದ ಮಹಿಳೆ. ತಂಬುಕುತ್ತೀರ ಪೂವಯ್ಯ (45) ಎಂಬಾತನಿಂದ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಾದಾಪುರ ಉಪಠಾಣಾ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಪಾದಚಾರಿ ಸಾವು:
ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಪಾದಚಾರಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸರ್ಜಾಪುರದ ಹಂದೇನಹಳ್ಳಿ ನಿವಾಸಿ ನಾಗರಾಜು(64) ಸಾವು. ಅಪಘಾತದ ಬಳಿಕ ಬಸ್ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಕೆಎ 57 ಎಫ್ 4614 ನಂಬರಿನ ಬಿಎಂಟಿಸಿ ಬಸ್ನಿಂದ ಅಪಘಾತ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.