ತುಮಕೂರು: ಒಂದು ಕಡೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಪೆಟ್ರೋಲ್ ಹಾಕಿಸಿಕೊಳ್ಳಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಹೀಗಿರುವಾಗ ಜಿಲ್ಲೆಯ ಪೆಟ್ರೋಲ್ ಬಂಕ್ (Petrol Bunk) ಒಂದರಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕದೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಾಹನಕ್ಕೆ ಪೆಟ್ರೋಲ್ ಬೀಳದೆ ದರ ತೋರಿಸುವ ಮೋಸ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಈ ಘಟನೆ ತಡರಾತ್ರಿ ನಡೆದಿದ್ದು, ಪೆಟ್ರೋಲ್ ಹಾಕದೆ ಏಕಾಏಕಿ ಮೀಟರ್ ರನ್ನಿಂಗ್ ಆಗಿದೆ. ಪೆಟ್ರೋಲ್ ಗನ್ ಕೈಯಲ್ಲಿ ಇದ್ದರೂ ಕೂಡ 6.30 ಪೈಸೆವರೆಗೂ ಮೀಟರ್ ರನ್ ಆಗಿದೆ. ಗ್ರಾಹಕರೊಬ್ಬರು ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಈ ಮೋಸದಾಟ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ಧ ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದು, ಪೆಟ್ರೋಲ್ ಹಾಕದೇ ಮೀಟರ್ ರನ್ ಆಗಿದೆ ಅಂತಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಬಂಕ್ನ ಮೋಸದಾಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತೆ ಜಿರೋ ಮಾಡಿ ಪೆಟ್ರೋಲ್ ಹಾಕುತ್ತೀವಿ ಎಂದು ಹೇಳಿದ್ದಾರೆ. ಅಂದಿದ್ದಾರೆ. ಇಷ್ಟವಿದ್ದರೇ ಹಾಕಿಸಿಕೊಳ್ಳಿ, ಇಲ್ಲಾ ಬೇರೆ ಕಡೆ ಹೋಗಿ. ಇದೆಲ್ಲಾ ಹಾಗೇ ಆಗಿರುತ್ತೆ ಅಂತಾ ಉಡಾಫೆ ಉತ್ತರ ನೀಡಿದ್ದಾರೆ. ತೈಲ ಬೆಲೆ ಏರಿಕೆ ನಡುವೆ ಈ ರೀತಿ ಮೋಸ ಮಾಡುವುದು ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಹಾಕಿದಂತಾಗುತ್ತದೆ.
ಇದನ್ನೂ ಓದಿ
ಅಂತ್ಯಸಂಸ್ಕಾರಕ್ಕೆ ಹೋಗುವಾಗಲೇ ಬಯಲಾಯ್ತು ಮರ್ಡರ್ ಮಿಸ್ಟ್ರಿ, ತಂದೆ ಅಂತ್ಯಕ್ರಿಯೆಗೆ ಸಿದ್ದನಾಗಿದ್ದ ಪುತ್ರ ಅರೆಸ್ಟ್
(Money earned without putting petrol in Tumkur bunk)
Published On - 9:36 am, Tue, 14 September 21