ತುಮಕೂರು, ಆಗಸ್ಟ್ 24: ಗಂಡನೇ (husband) ಹೆಂಡತಿಯನ್ನು (wife) ಕೊಲೆ (murder) ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಹೂತಿದ್ದ ಶವವನ್ನ 20 ದಿನಗಳ ನಂತರ ಅಧಿಕಾರಿಗಳು ಹೊರತೆಗೆದು ಶವಪರೀಕ್ಷೆ ನಡೆಸಿದ್ದಾರೆ. ತುಮಕೂರು ಎಸಿ ನೇತೃತ್ವದಲ್ಲಿ ಶವವನ್ನ ಸಿಬ್ಬಂದಿ ಹೊರತೆಗೆದಿದ್ದಾರೆ. ಶವವನ್ನ ಹೊರತೆಗೆದು ಪೋಸ್ಟ್ ಮಾರ್ಟಂ (postmortem) ನಡೆಸಲಿದ್ದಾರೆ. ತುಮಕೂರು (Tumkur) ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಶೆಟ್ಟಿಹಳ್ಳಿ ನಿವಾಸಿ ವರ್ಷಿಣಿ ಎಂಬ ಗೃಹಿಣಿ ಇದೇ ತಿಂಗಳು 2ನೇ ತಾರೀಖು ಸಾವನ್ನಪ್ಪಿದ್ದರು.
ಈ ವೇಳೆ ಪತಿ ಚೇತನ್, ಪತ್ನಿ ವರ್ಷಿಣಿಯ ಹೆತ್ತವರಿಗೂ ತಿಳಿಸದೇ ಆಕೆಯನ್ನ ಮಣ್ಣು ಮಾಡಿ ಬಂದಿದ್ದ. ಇದರಿಂದ ಅನುಮಾನಗೊಂಡ ಪೋಷಕರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಚೇತನ್, 2014 ರಲ್ಲಿ ವರ್ಷಿಣಿಯನ್ನ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳು ಇದ್ದಾರೆ.
ಇದನ್ನೂ ಓದಿ: ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟನನ್ನು ಪೀಣ್ಯ ಪೊಲೀಸರು ಲಾಕ್ ಮಾಡಿದರು!
ಅನುಮಾನದ ಪಿಶಾಚಿಯಾಗಿದ್ದ ಗಂಡ ಚೇತನ್ ಮದುವೆಯಾಗಿದ್ದಾಗಿನಿಂದಲೂ ಹೆಂಡತಿಯನ್ನ ಮನೆಯಲ್ಲೇ ಬಂಧಿಸಿಟ್ಟಿದ್ದ. ಆಗಾಗ ವರದಕ್ಷಿಣೆ ಕಿರುಕುಳವನ್ನ ಕೂಡ ನೀಡ್ತಿದ್ದ ಅಂತಾ ಪೋಷಕರು ಆರೋಪ ಮಾಡಿದ್ದಾರೆ. ಹೀಗಾಗಿ ಅವನೇ ಹೆಂಡತಿಯನ್ನ ಕೊಲೆ ಮಾಡಿ, ಮಣ್ಣು ಮಾಡಿದ್ದಾನೆ ಅಂತಾ ವರ್ಷಿಣಿ ಹೆತ್ತವರು ಆರೋಪಿಸುತ್ತಿದ್ದಾರೆ. ಹೆತ್ತವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ. ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ