ಕೋಳಿ ಫಾರ್ಮ್ ನಿರ್ಮಾಣಕ್ಕೆ ಅನುಮತಿ ನೀಡಲು ಲಂಚ ಬೇಡಿಕೆ: ಪಿಡಿಒ, ಬಿಲ್​ ಕಲೆಕ್ಟರ್​​ಗೆ 4 ವರ್ಷ ಜೈಲು

| Updated By: ವಿವೇಕ ಬಿರಾದಾರ

Updated on: Sep 21, 2022 | 9:20 AM

ಕೋಳಿ ಫಾರ್ಮ್ ನಿರ್ಮಾಣಕ್ಕೆ ಎನ್​ಒಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಪಿಡಿಒ ಮತ್ತು ಬಿಲ್​ ಕಲೆಕ್ಟರ್​​ಗೆ ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೋಳಿ ಫಾರ್ಮ್ ನಿರ್ಮಾಣಕ್ಕೆ ಅನುಮತಿ ನೀಡಲು ಲಂಚ ಬೇಡಿಕೆ: ಪಿಡಿಒ, ಬಿಲ್​ ಕಲೆಕ್ಟರ್​​ಗೆ 4 ವರ್ಷ ಜೈಲು
ನ್ಯಾಯಾಲಯಗಳ ಸಂಕೀರ್ಣ ತುಮಕೂರು
Follow us on

ತುಮಕೂರು: ಕೋಳಿ ಫಾರ್ಮ್ ನಿರ್ಮಾಣಕ್ಕೆ ಎನ್​ಒಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಪಿಡಿಒ ಮತ್ತು ಬಿಲ್​ ಕಲೆಕ್ಟರ್​​ಗೆ ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿರಾ ತಾಲೂಕಿನ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಡಿ.ಎಂ.ನಾಗರಾಜು ಮತ್ತು ಬಿಲ್‌ ಕಲೆಕ್ಟರ್ ಶಿವಣ್ಣ 2018 ರಲ್ಲಿ ಕೋಳಿ ಫಾರಂ ನಿರ್ಮಾಣಕ್ಕೆ ಎನ್​ಒಸಿ ಕೊಡಲು 10 ಸಾವಿರ ಲಂಚ ಕೇಳಿದ್ದರು.

ಲಂಚಪಡೆಯಲೆಂದು ಬಿಲ್‌ ಕಲೆಕ್ಟರ್ ಶಿವಣ್ಣ ತೆರಳಿದ್ದ, ಈ ವೇಳೆ ಶಿವಣ್ಣ ರೇಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದನು. ತನಿಕೆ ಬಳಿಕ ಪ್ರಕರಣ ಸಾಭೀತಾಗಿದ್ದು, ಬಿಲ್‌ ಕಲೆಕ್ಟರ್ ಶಿವಣ್ಣ ಮತ್ತು ಪಿಡಿಒ ಡಿ.ಎಂ.ನಾಗರಾಜುಗೆ 4 ವರ್ಷ ಜೈಲು ಶಿಕ್ಷೆ, 30 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಟಿ.ಪಿ ರಾಮೇಲಿಂಗೇಗೌಡ ರಿಂದ ಶಿಕ್ಷೆ ಪ್ರಕಟ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ