ತುಮಕೂರು: ಹಣದ ವಿಚಾರಕ್ಕೆ ಸ್ನೇಹಿತನನ್ನು ಕೊಂದು ಹೂತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಂ.ಗೊಲ್ಲಹಳ್ಳಿಯಲ್ಲಿ ಲಿಂಗಣ್ಣ(40) ಎಂಬುವವನು ತನ್ನ ಸ್ನೇಹಿತನನ್ನು ಕೊಂದು ಹೂತಿದ್ದ. ಲಿಂಗಣ್ಣ ಸ್ನೇಹಿತ ಬಸವರಾಜ್ ಬಳಿ 3.5 ಲಕ್ಷ ರೂ. ಪಡೆದಿದ್ದ. ಇದೇ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಆರೋಪಿ ಲಿಂಗಣ್ಣ ಡಿಸೆಂಬರ್ 12 ರಂದು ಕೊಲೆ ಮಾಡಿದ್ದ. 13 ರಂದು ಪತ್ನಿ ಭಾಗ್ಯಮ್ಮ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ನಾಪತ್ತೆ ಪ್ರಕರಣ ಪತ್ತೆ ಹಚ್ಚಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಿಲಿಂಡರ್ ಸ್ಫೋಟ, ಎರಡು ಮನೆಗಳು ಬೆಂಕಿಗಾಹುತಿ
ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಎರಡು ಮನೆಗಳು ಬೆಂಕಿಗಾಹುತಿಯಾಗಿವೆ. ಸತ್ತೆಗಾಲದ ಚಿಕ್ಕ ರಾವಳಯ್ಯ, ಮಂಜುಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಎಂಬಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ಕಳೆದ ರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕರಡಿ ಮಾಂಸ ಸಂಗ್ರಹಿಸಿಟ್ಟದ್ದ ಆರೋಪಿಗಳ ಸೆರೆ
ಕರಡಿಯನ್ನು ಕೊಂದು ಮಾಂಸವನ್ನು ಸಂಗ್ರಹಿಸಿಟ್ಟದ್ದ ಆರೋಪಿಗಳನ್ನ ಸೆರೆ ಹಿಡಿಯಲಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌಜಗಲ್ ಗ್ರಾಮದಲ್ಲಿ 6 ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳು ಚಿಕ್ಕಬಸವಯ್ಯ ಎಂಬುವರ ಮನೆಯಲ್ಲಿ ಕರಡಿ ಮಾಂಸವನ್ನು ಸಂಗ್ರಹಿಸಿಟ್ಟಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಮನೆಯಲ್ಲಿದ್ದ 1.5 ಕೆಜಿ ಮಾಂಸ, ಕರಡಿ ಕೂದಲು, ನಾಲಿಗೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ
Virat Kohli: ನಾವಿನ್ನು ಎರಡು ವರ್ಷಗಳ ಹಿಂದಿನ ವಿರಾಟ್ ಕೊಹ್ಲಿಯನ್ನು ನೋಡಬಹುದು ಎಂದ ಸುನೀಲ್ ಗವಾಸ್ಕರ್