Tumkur News: ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ದಿಢೀರ್​ ದಾಳಿ: 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ

ತುಮಕೂರು ಜಿಲ್ಲೆಯ ತಿಪಟೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರಿವ ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ಕರ್ನಾಟಕ ಮಕ್ಕಳ ರಕ್ಷಣ ಆಯೋಗ ದಿಢೀರ್ ದಾಳಿ‌ ಮಾಡಿ 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ ಮಾಡಿದ್ದಾರೆ.

Tumkur News: ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ದಿಢೀರ್​ ದಾಳಿ: 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ
ತೆಂಗಿನಕಾಯಿ ಕಾರ್ಖಾನೆ ಮೇಲೆ ದಾಳಿ
Updated By: Rakesh Nayak Manchi

Updated on: Jul 10, 2023 | 5:46 PM

ತುಮಕೂರು: ಜಿಲ್ಲೆಯ ತಿಪಟೂರು (Tipatur) ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರಿವ ತೆಂಗಿನಕಾಯಿ ಕಾರ್ಖಾನೆಗಳ (Coconut Factory) ಮೇಲೆ ಕರ್ನಾಟಕ ಮಕ್ಕಳ ರಕ್ಷಣಾ ಆಯೋಗ ದಿಢೀರ್ ದಾಳಿ‌ ಮಾಡಿ 10ಕ್ಕೂ ಹೆಚ್ಚು ಬಾಲಕಾರ್ಮಿಕರ (Child Labour) ರಕ್ಷಣೆ ಮಾಡಿದ್ದಾರೆ. ತಿಪಟೂರು ನಗರದ ಹೊಸಪಾಳ್ಯ, ಮಂಜುನಾಥನಗರ, ಆಲೂರು ಗೇಟ್​​​ಗಳಲ್ಲಿನ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಾರ್ಖಾನೆ ಮಾಲೀಕರು ಮಕ್ಕಳನ್ನು ಕೊಠಡಿ ಒಂದರಲ್ಲಿ ಕೂಡಿ ಹಾಕಿದ್ದರು. ಇದನ್ನು ತಿಳಿದ ಆಯೋಗ ಕೂಡಿಹಾಕಿದ್ದ ಮಕ್ಕಳನ್ನ ರಕ್ಷಣೆ ಮಾಡಿ ಕಾರ್ಖಾನೆ ಮಾಲಿಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ.

ಇದನ್ನೂ ಓದಿ: ತುಮಕೂರು: ಪೊಲೀಸ್, ನಿರಾಶ್ರಿತರ ಕೇಂದ್ರದ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಉಗಾಂಡ ಮಹಿಳೆಯರು

ಕಾರ್ಖಾನೆಯವರು ಮಕ್ಕಳನ್ನ ಅಕ್ರಮವಾಗಿ ಕೂಡಿಹಾಕಿದ್ದರು. ಅಲ್ಲದೇ ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರು ಸಮವಸ್ತ್ರ, ಮಾಸ್ಕ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹೀನಾಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಯೋಗ ಗರಂ ಆಗಿದೆ.

ಇನ್ನು ಆಯೋಗ ತಿಪಟೂರು ತಾಲೂಕಿನಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Sun, 9 July 23