ತಿಪಟೂರು ಕೊಬ್ಬರಿ ಬೆಂಬಲ ಬೆಲೆ ನಿಗದಿ ವಿಷಯದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ: ಕರ್ನಾಟಕ ಬೆಳೆಗಾರರು ಕಂಗಾಲು
ಕೊಬ್ಬರಿ ಬೆಂಬಲ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಯೋಜನೆಯಾಗಿದ್ದು ಕೇರಳ ರೈತರ ಹಿತ ಗಮನದಲ್ಲಿಟ್ಟುಕೊಂಡು ಬೆಲೆ ನಿಗದಿ ಮಾಡ್ತಾರೆ. ಅದು ಬಿಟ್ಟು ಕರ್ನಾಟಕ ರಾಜ್ಯಕ್ಕೇ ಬೇರೆ ಬೆಲೆ ನಿಗದಿ ಮಾಡಬೇಕೆಂದೂ, ಕನಿಷ್ಠ 2 ಸಾವಿರ ರೂ ಬೆಂಬಲ ಬೆಲೆ ನೀಡಬೇಕೆಂದು ಕೋರುವುದಾಗಿ ತಿಪಟೂರು ಶಾಸಕ ಷಡಕ್ಷರಿ ಆಗ್ರಹಿಸಿದ್ದಾರೆ.
ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ (Tiptur, Tumkur) ಅತಿಹೆಚ್ಚು ರೈತರು ತೆಂಗು, ಕೊಬ್ಬರಿ, ಅಡಿಕೆಯನ್ನ ನಂಬಿ ಜೀವನ ಮಾಡ್ತಿದ್ದಾರೆ. ಮೊನ್ನೆ ಮೊನ್ನೆವರೆಗೂ 20-30 ಸಾವಿರ ರೂಪಾಯಿ ಇದ್ದ ಕೊಬ್ಬರಿ ಬೆಲೆ ಕಳೆದ ಮೂರು ತಿಂಗಳಿನಿಂದ 11 ಸಾವಿರಕ್ಕೆ ಕುಸಿದಿತ್ತು, 11 ರಿಂದ 9 ಕ್ಕೂ ಇಳಿದಿತ್ತು, ಈ ವೇಳೆ ಹಲವು ಪ್ರತಿಭಟನೆಗಳು ರೈತರು ಮಾಡಿದ್ದರು. ಆದರೆ ಈಗ ಕೊಬ್ಬರಿ ಬೆಲೆ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಅದ್ಯಾವ ಮಟ್ಟಿಗೆ ಅಂದರೆ ಅದು ಅತಿ ಕನಿಷ್ಠ ಬೆಲೆಗೆ ಬಂದಿಳಿದಿದ್ದು, ರೈತರು ಮತ್ತಷ್ಟು ಕಂಗಲಾಗಿದ್ದಾರೆ. ಹೌದು.ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬಹುತೇಕ ರೈತರು ಕೊಬ್ಬರಿಯನ್ನೇ ನಂಬಿ ಜೀವನ ಮಾಡ್ತಿದ್ದಾರೆ. ಕ್ವಿಂಟಾಲ್ ಗಟ್ಟಲೇ ಬೆಳೆದು ಮಾರುಕಟ್ಟೆ ಹಾಕಿ ಅದರಲ್ಲಿ ಬಂದ ಹಣದಿಂದ ಜೀವನ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೊಬ್ಬರಿ ಬೆಲೆ (Dry copra, Copra price) ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಈ ಮೊದಲು 20-30 ಸಾವಿರ ಇದ್ದ ಕೊಬ್ಬರಿ ಬೆಲೆ ಫೆಬ್ರವರಿ ಮಾರ್ಚ್ ವೇಳೆಗೆ 11-12 ಸಾವಿರ ರೂಪಾಯಿಗೆ ಬಂದು ನಿಂತಿತ್ತು. ಅದು ಏಕಾಏಕಿ 9 ಸಾವಿರಕ್ಕೂ ಬಂದಿಳಿಯಿತು.
ಈ ವೇಳೆ ಹಲವೆಡೆ ರೈತರು ಬೆಂಬಲ ಬೆಲೆ ಆಗ್ರಹಿಸಿ ಪ್ರತಿಭಟನೆಗಳು ಕೂಡ ಮಾಡಿದ್ದರು. ಆಗ ಸರ್ಕಾರ ಒಂದೂವರೆ ಸಾವಿರ ಬೆಂಬಲ ಬೆಲೆ ನೀಡಿ ನಫೇಡ್ ಮೂಲಕ ಕೊಬ್ಬರಿ ಖರೀದಿ ಆರಂಭಿಸಿತ್ತು. ಆದರೆ ಈಗ ಮತ್ತೆ ರೈತರು ಶಾಕ್ ಆಗಿದ್ದಾರೆ. ಕಾರಣ 9 ಇದ್ದ ಕೊಬ್ಬರಿ ಬೆಲೆ ಆರೂವರೆ ಸಾವಿರದಿಂದ ಏಳೂವರೆ ಸಾವಿರಕ್ಕೆ ಬಂದಿಳಿದಿದ್ದು ರೈತರು ಮತ್ತಷ್ಟು ಕಂಗಲಾಗುವಂತೆ ಮಾಡಿದೆ.
ಇನ್ನು ಇದರ ಜೊತೆಗೆ ನಫೇಡ್ ಕೇಂದ್ರಗಳಲ್ಲಿ ಬಂದಿರುವ ರೈತರ ಕೊಬ್ಬರಿಗಳನ್ನ ಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾರಣ ನಿರ್ದಿಷ್ಟ ಗಾತ್ರ ಹಾಗೂ ಒಣಗಿರುವಿಕೆ ಆಧಾರದ ಮೇಲೆ ಕೊಬ್ಬರಿ ಖರೀದಿ ಮಾಡಲಾಗುತ್ತಿದೆ. ಅಲ್ಲದೆ 75 ಮಿ ಮೀಟರ್ ಗಾತ್ರದ ಕೊಬ್ಬರಿಗಳನ್ನ ಖರೀದಿ ಮಾಡುತ್ತಿದ್ದಾರಂತೆ. ಕಡಿಮೆ ಗಾತ್ರದ ಕೊಬ್ಬರಿಯನ್ನ ನಿರಾಕರಿಸುತ್ತಿರುವದು ಕೂಡ ರೈತರಿಗೆ ಮತ್ತಷ್ಟು ನಷ್ಟವುಂಟುಮಾಡ್ತಿದೆ. ಕೊಬ್ಬರಿಯನ್ನ ಗ್ರೇಡ್ ಆಧಾರದ ಮೇಲೆ ಕೊಳ್ಳುತ್ತಿದ್ದು ರೈತರು ಬೀದಿಗೆ ಬರುವಂತಾಗಿದೆ. ಈ ಬಗ್ಗೆ ತುರುವೇಕೆರೆ ಜೆಡಿಎಸ್ ಶಾಸಕ ಎಮ್ ಟಿ ಕೃಷ್ಣಪ್ಪ ಕೂಡ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಮುಂದೆ ಕೊಬ್ಬರಿಯ ಪ್ರಾತ್ಯಕ್ಷಿತೆ ತೋರಿ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ವಿವರಿಸಿದ್ದಾರೆ.
ಇನ್ನು ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಅರಸಿಕೆರೆ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಲ್ಲಿ ಕೊಬ್ಬರಿ ಬೆಳೆಯುವ ರೈತರಿದ್ದು, ಜಿಲ್ಲೆಯ ತಿಪಟೂರು ನಗರದಲ್ಲಿ ಏಷ್ಯಾದಲ್ಲೇ ದೊಡ್ಡ ಕೊಬರಿ ಮಾರುಕಟ್ಟೆ ಇದೆ. ಈ ಮಾರುಕಟ್ಟೆಯಿಂದ ಬೇರೆ ರಾಜ್ಯ, ದೇಶಗಳಿಗೆ ಕೊಬ್ಬರಿ ರಫ್ತಾಗುತ್ತೆ. ಅಷ್ಟರ ಮಟ್ಟಿಗೆ ಇಲ್ಲಿ ವ್ಯಾಪಾರ ಆಗುತ್ತದೆ. ಆದರೂ ಸದ್ಯ ಬೆಲೆ ನಿರಂತರವಾಗಿ ಕಡಿಮೆಯಾಗಿದ್ದು ಲಕ್ಷಾಂತರ ರೈತರಿಗೆ ಏನ್ ಮಾಡೋದು ಅನ್ನುವಂತಾಗಿದೆ.
ಈ ಹಿಂದೆ 19 ಸಾವಿರ ಇತ್ತು, ಈಗ 7 ಸಾವಿರಕ್ಕೆ ಬಂದಿದ್ದು ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕೆಲ ಫೋರಂಗಳಲ್ಲಿ ಚರ್ಚೆ ಮಾಡಿದ್ದು ಸರ್ಕಾರಕ್ಕೂ ಕೂಡ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸುವುದಾಗಿ ತಿಪಟೂರು ಶಾಸಕ ಷಡಕ್ಷರಿ ಒತ್ತಾಯ ಮಾಡಿದ್ದಾರೆ. ಕೊಬ್ಬರಿ ಬೆಂಬಲ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಯೋಜನೆಯಾಗಿದ್ದು ಕೇರಳ ರೈತರ ಹಿತ ಗಮನದಲ್ಲಿಟ್ಟುಕೊಂಡು ಬೆಲೆ ನಿಗದಿ ಮಾಡ್ತಾರೆ. ಅದು ಬಿಟ್ಟು ಕರ್ನಾಟಕ ರಾಜ್ಯಕ್ಕೇ ಬೇರೆ ಬೆಲೆ ನಿಗದಿ ಮಾಡಬೇಕೆಂದೂ, ಕನಿಷ್ಠ 2 ಸಾವಿರ ರೂ ಬೆಂಬಲ ಬೆಲೆ ನೀಡಬೇಕೆಂದು ಕೋರುವುದಾಗಿ ತಿಪಟೂರು ಶಾಸಕ ಷಡಕ್ಷರಿ ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ