Tumakuru: ಮಸೀದಿ ಪಕ್ಕದಲ್ಲಿರುವ ಕರಗಲಮ್ಮ ದೇವಿ ಪೂಜೆಗೆ ಮುಸ್ಲಿಮರ ವಿರೋಧ: ಗ್ರಾಮದಲ್ಲಿ ಬಿಗುವಿನ ವಾತಾವರಣ

ಮಸೀದಿ ಪಕ್ಕದಲ್ಲಿರುವ ಹಿಂದೂ ದೇವರ ಪೂಜೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು, ಇದಕ್ಕೆ ಹಿಂದೂ ಸಮುದಾಯ ಆಕ್ರೋಶಗೊಂಡಿದೆ.

Tumakuru: ಮಸೀದಿ ಪಕ್ಕದಲ್ಲಿರುವ ಕರಗಲಮ್ಮ ದೇವಿ ಪೂಜೆಗೆ ಮುಸ್ಲಿಮರ ವಿರೋಧ: ಗ್ರಾಮದಲ್ಲಿ ಬಿಗುವಿನ ವಾತಾವರಣ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jul 04, 2023 | 2:30 PM

ತುಮಕೂರು: ಮಸೀದಿ(mosque) ಬಳಿ ಇರುವ ಕರಗಲಮ್ಮ ದೇಗುಲದ(Temple) ಮೂರ್ತಿಗೆ ಪೂಜೆ ಮಾಡಲು ಮುಸ್ಲಿಮರು (muslim) ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರು(Tumakuru) ಬಳಿಯ ಕೆಸರುಮಡು ಗ್ರಾಮದಲ್ಲಿ ನಡೆದಿದೆ. ಮಸೀದಿ ಪಕ್ಕದಲ್ಲಿರುವ ಕರಗಲಮ್ಮಗೆ ಯಾವುದೆ ಕಾರಣಕ್ಕೂ ಪೂಜೆ ಮಾಡದಂತೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ. ಇದರಿಂದ ಆಕ್ರೊಶಗೊಂಡ ಗ್ರಾಮಸ್ಥರು ಪದ್ದತಿಯಂತೆ ಮುಂದುವರಿಕೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಂದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಹಾಸನದ ಬಳಿಕ ರಾಯಚೂರಿನ ಶಾಲೆಯೊಂದರಲ್ಲಿ ನಮಾಜ್ ಮಾಡಿಸಿದ ಆರೋಪ; ಹಿಂದೂ ಸಂಘಟನೆಗಳ ಆಕ್ರೋಶ

ಗ್ರಾಮದೇವತೆ ಮಾರಮ್ಮ ಜಾತ್ರೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ಉಪ್ಪಾರ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ. ಪೂಜೆ ಮಾಡಿ ಮೊಸರನ್ನ ಹೆಡೆ ಇಡಬೇಕಿತ್ತು. ಆದರೆ ಇದಕ್ಕೆ ಮಸೀದಿ ಪಕ್ಕ ಇರುವ ಕಾರಣ ಮುಸ್ಲಿಂ ಸಮುದಾಯ ವಿರೋದ ವ್ಯಕ್ತಪಡಿಸಿದೆ. ಇದರಿಂದ ಗ್ರಾಮಸ್ಥರು ತೀವ್ರ ಆಕ್ರೊಶಗೊಂಡಿದ್ದು, ಪದ್ದತಿಯಂತೆ ಪೂಜೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗ್​ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ಕಟ್ಟಿದ್ದ ಮನೆಯನ್ನು ಕೆಡವಿದ ಗ್ರಾಮಸ್ಥರು

ಚಿಕ್ಕಮಗಳೂರು: ಮನೆ ಜಾಗ ದೇವಾಲಯದ್ದು ಎಂದು ಕಟ್ಟಿದ್ದ ಮನೆಯನ್ನು ಗ್ರಾಮಸ್ಥರು ಕೆಡವಿದ ಘಟನೆ ತರೀಕೆರೆ ತಾಲೂಕಿನ ಎರೆಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ಎರೆಹಳ್ಳಿ ತಾಂಡ್ಯದ ರಾಮಭೋವಿ ಎಂಬುವರು ಕಟ್ಟಿದ್ದ ಮನೆಯನ್ನು ತೆರವುಗೊಳಿಸಿದ್ದಾರೆ. ಸರ್ಕಾರಿ ದಾಖಲೆಯಲ್ಲಿ ದೇವಸ್ಥಾನದ ಜಾಗ ಎಂದು ಇದೆ. ಈ ಜಾಗ ದೇವಸ್ಥಾನದ್ದು, ಇಲ್ಲಿ ಯಾಕೆ ಮನೆ ಕಟ್ಟಿದ್ದೀಯಾ ಎಂದು ಪ್ರಶ್ನಿಸಿದ್ದು, ಅಧಿಕೃತವಾಗಿ ಜಾಗ ಮಂಜೂರಾಗಿಲ್ಲ ಎಂದು ಊರಿನ ಜನರೆಲ್ಲ ಸೇರಿ ಮನೆಯ ಹೆಂಚು ತೆಗೆದಿದ್ದಾರೆ. ಇನ್ನು ಅದೇ ಗ್ರಾಮದ ಮತ್ತೊಂದು ಸಮುದಾಯದವರಿಂದ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಬಡ ಕುಟುಂಬದ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:25 pm, Tue, 4 July 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್