ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು

| Updated By: ಸಾಧು ಶ್ರೀನಾಥ್​

Updated on: Nov 10, 2022 | 3:53 PM

ಆರ್ ಟಿಓ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಉತ್ತರ ಕರ್ನಾಟಕ, ರಾಯಚೂರು, ಸಿಂಧನೂರು ಭಾಗದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಒಂದು ಕ್ರೂಸರ್ ನಲ್ಲಿ 11 ಜನ ಪ್ರಯಾಣಿಸುವ ಜಾಗದಲ್ಲಿ 20 ರಿಂದ 25 ಜನ ಪ್ರಯಾಣ ಮಾಡುತ್ತಿದ್ದರು.

ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು
ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು
Follow us on

ತುಮಕೂರು: ರಾಷ್ಟ್ರೀಯ ಹೆದ್ದಾರಿ 48 ರಲ್ಲಿ (NH 48) ಕ್ರೂಸರ್ ವಾಹನಗಳ ಕಾರುಬಾರು ಇನ್ನೂ ನಿಂತಿಲ್ಲ. ಆದರೆ ಆರ್ ಟಿಓ ಅಧಿಕಾರಿಗಳು (RTO Raid) ತಡರಾತ್ರಿ ಕ್ರೂಸರ್ ವಾಹನದ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಧಿಕೃತವಾಗಿ ಹೆಚ್ಚು ಪ್ರಯಾಣಿಕರನ್ನ ಸಾಗಿಸುತ್ತಿದ್ದ ಕ್ರೂಸರ್ ವಾಹನಗಳ ವಿರುದ್ಧ ತಡರಾತ್ರಿ RTO ಅಧಿಕಾರಿಗಳಿಂದ ತುಮಕೂರು (Tumkur) ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭರ್ಜರಿ ಕಾರ್ಯಚರಣೆ ನಡೆದಿದೆ. ಕಾರ್ಯಾಚರಣೆ ನಡೆಸಿ ಮೂರು ಕ್ರೂಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್ ಟಿಓ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಉತ್ತರ ಕರ್ನಾಟಕ, ರಾಯಚೂರು, ಸಿಂಧನೂರು ಭಾಗದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಒಂದು ಕ್ರೂಸರ್ ನಲ್ಲಿ 11 ಜನ ಪ್ರಯಾಣಿಸುವ ಜಾಗದಲ್ಲಿ 20 ರಿಂದ 25 ಜನ ಪ್ರಯಾಣ ಮಾಡುತ್ತಿದ್ದರು.

ಜೀವನ ಮಾಡೋನಾ ಅಂತ… ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು:

ಪ್ರಯಾಣಿಕರಲ್ಲದೇ ಅನಧಿಕೃತವಾಗಿ ಲಗೇಜ್ ಗಳ ಸಾಗಾಟವೂ ನಡೆದಿತ್ತು. ವಾಹನಗಳ ಮೇಲೆ ದಾಳಿ ನಡೆಸಿ ಮೂರು ಕ್ರೂಸರ್ ವಾಹನಗಳನ್ನ ಆರ್ ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರ್ ಟಿಓ ಅಧಿಕಾರಿಗಳ ಕಾರ್ಯಾಚರಣೆ ವೇಳೆ ತೊಂದರೆಗೊಳಗಾದ ಕ್ರೂಸರ್ ನಲ್ಲಿದ್ದ ಪ್ರಯಾಣಿಕರು ತಮ್ಮ ಅಳಲು ತೊಡಿಕೊಂಡರು.

 Also Read: 3 ವರ್ಷ ಕಳೆಯುತ್ತ ಬಂದರೂ ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ; ರೋಗಿಗಳ ಪರದಾಟ

ನಾವು ಕೂಲಿ ಮಾಡಿ ಬದುಕುವ ಜನ. ನಮ್ಮ ಕೈಯಲ್ಲಿ ದುಪ್ಪಟ್ಟು ಹಣ ಕೊಡೋಕೆ ಆಗಲ್ಲ‌. ಬಸ್ ನವರು ಲಗೇಜ್ ಗೂ ಜಾರ್ಜ್ ಕೇಳ್ತಾರೆ. ನಾವು ಎಲ್ಲಿಂದ ತರೋದು? ನಮಗೆ ಇರೋಕೆ ಮನೆಯಿಲ್ಲ, ಕೂಲಿ ಮಾಡ್ಕೊಂಡು ಜೀವನ ಮಾಡೋನಾ ಅಂತ ಬೆಂಗಳೂರು ಕಡೆಗೆ ಹೋಗ್ತಿದೀವಿ. ಸರ್ಕಾರ ನಮಗೆ ಸರಿಯಾಗಿ ಸವಲತ್ತು ಕೊಟ್ಟಿದ್ದರೆ… ನಮ್ಮ ಊರು ಬಿಟ್ಟು ಬೆಂಗಳೂರು ಕಡೆಗೆ ಯಾಕೆ ಹೋಗ್ತಿದ್ದಿವಿ, ನೀವೇ ಹೇಳಿ ಸರ್‌ ಎಂದು ನೂರಾರು ಪ್ರಯಾಣಿಕರು ಅಳಲು ತೋಡಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ