ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

| Updated By: ವಿವೇಕ ಬಿರಾದಾರ

Updated on: Sep 04, 2022 | 8:40 PM

ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಮುದಿಗೆರೆಯಲ್ಲಿ ನಡೆದಿದೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಸಾಂಧರ್ಬಿಕ ಚಿತ್ರ
Follow us on

ತುಮಕೂರು: ಗಣೇಶ ಮೂರ್ತಿ ವಿಸರ್ಜನೆ (Ganesh Visarjane) ವೇಳೆ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ತಾಲೂಕಿನ ಮುದಿಗೆರೆಯಲ್ಲಿ ನಡೆದಿದೆ. ಚೇತನ್(15) ಮೃತ ದುರ್ದೈವಿ. ಮೃತ ಚೇತನ್ ತುಮಕೂರಿನ ಭೀಮಸಂದ್ರ ನಿವಾಸಿಯಾಗಿದ್ದಾನೆ. ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಂಗಿ ಗೌರಿ ತರಲು ಹೋದಾಗ ಆತ್ಮಹತ್ಯೆ ಮಾಡಿಕೊಂಡ ಅಕ್ಕ

ಬೆಳಗಾವಿ: ಮನೆಯಲ್ಲಿ ಗೌರಿ ಕೂಡಿಸುವ ವಿಚಾರವಾಗಿ ಸಹೋದರಿಯರ ನಡುವೆ ಗಲಾಟೆ ಸಂಭವಿಸಿ ಅಕ್ಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ. ಅಕ್ಕ ರುಕ್ಮಿಣಿ ಮೃತ ದುರ್ದೈವಿ. ಪ್ರತಿ ವರ್ಷ ಅಕ್ಕನೇ ಗೌರಿ ತರ್ತಾಳೆ ಈ ವರ್ಷ ನಾನು ಗೌರಿ ತರುತ್ತೇನೆ ಅಂತಾ ತಂಗಿ ಪಟ್ಟು ಹಿಡದಿದ್ದಳು.

ಈ ವೇಳೆ ಗಲಾಟೆಯಾಗಿದೆ, ಕೊನೆಗೆ ತಂಗಿ ಗೌರಿ ತರಲು ಹೋದಾಗ ಅಕ್ಕ ರುಕ್ಮಿಣಿ ತೊಗರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ: ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತೋಯ್ದ ಚಿರತೆ; ಭಯದಲ್ಲೇ ಓಡಾಡುತ್ತಿರುವ ಜನರು

ದಕ್ಷಿಣ ಕನ್ನಡ: ತಡರಾತ್ರಿ ಚಿರತೆ ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತೋಯ್ದಿರುವ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ. ಕಲ್ಮಲೆ ನಿವಾಸಿ ನಾರಾಯಣ ರೈ ಎಂಬುವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮೊತ್ತೊಂದು ನಾತಿ ರಕ್ಷಣೆಗೆ ನುಗ್ಗಿದ್ದ, ಈ ಚಿರತೆ ನಾಯಿಯನ್ನು ಗಾಯಗೊಳಿಸಿದೆ.

ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ. ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತೋಯ್ದಿದೆ. ಗ್ರಾಮದ ಸುತ್ತ ಗುಡ್ಡಗಾಡಿನಲ್ಲಿ ಚಿರತೆ ಆಗಾಗ್ಗೆ ಪ್ರತ್ಯಕ್ಷವಾಗಿ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ. ಇದೀಗ ಆಹಾರ ಬೇಟೆಗೆ ರಾತ್ರೋ ರಾತ್ರಿ ಗ್ರಾಮದ ಮನೆಗೆ ನುಗ್ಗಿ ಕಟ್ಟಿ ಹಾಕಿದ್ದ ನಾಯಿಯನ್ನು ಬಲಿ ಪಡೆದಿದೆ.

ಘಟನೆ ನಂತರ ಗ್ರಾಮಸ್ಥರು ಮುಸ್ಸಂಜೆ ವೇಳೆ ಮನೆ ತೊರೆಯಲು ಭಯಪಡುವಂತಾಗಿದೆ. ಚಿರತೆ ದಾಳಿ ಅನಾಹುತದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿದ್ದು ಬೊನ್ ಇಟ್ಟು ಚಿರತೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಿಡಿಲು ಬಡಿದು ಕುರಿಗಾಹಿ ಸಾವು

ವಿಜಯಪುರ: ಸಿಡಿಲು ಬಡಿದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನಡೆದಿದೆ. ಪ್ರತಾಪ್ ಮಾದರ(12) ಮೃತ ಕುರಿಗಾಹಿ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:48 pm, Sun, 4 September 22