ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿದ ಹೋಂ ಮಿನಿಸ್ಟರ್; ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪರಮೇಶ್ವರ್ ಪಣ
ಇತ್ತೀಚೆಗೆ ಡ್ರಗ್ಸ್ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಂತೆ ಇದೀಗ ನೂತನ ಗೃಹ ಸಚಿವ ಜಿ.ಪರಮೇಶ್ವರ್(G. Parameshwara) ಅವರು ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆ ಮಾಡಲು ಪರಮೇಶ್ವರ್ ಪಣ ತೊಟ್ಟಿದ್ದಾರೆ.
ತುಮಕೂರು: ಇತ್ತೀಚೆಗೆ ಡ್ರಗ್ಸ್ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನ ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಇದಕ್ಕೆ ಬ್ರೇಕ್ ಬಿಳುತ್ತಿಲ್ಲ. ಇದೀಗ ಈ ಕುರಿತು ನೂತನ ಗೃಹ ಸಚಿವ ಜಿ.ಪರಮೇಶ್ವರ್(G. Parameshwara) ಅವರು ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿದ್ದಾರೆ. ಹೌದು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪರಮೇಶ್ವರ್ ಪಣ ತೊಟ್ಟಿದ್ದು. ಅದರಂತೆ ಪೈಲಟ್ ಪ್ರಾಜೆಕ್ಟ್(Pilot Project) ಆಗಿ ಮೊದಲಿಗೆ ತುಮಕೂರು ಜಿಲ್ಲೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂದಿನ ಮೂರು ತಿಂಗಳೊಳಗೆ ಡ್ರಗ್ಸ್ ಫ್ರೀ ಜಿಲ್ಲೆಯಾಗಲಿದ್ಯಾ ತುಮಕೂರು?
ತುಮಕೂರಿನ ಖಾಕಿ ಪಡೆಗೆ ಹೋಂ ಮಿನಿಸ್ಟರ್ ಪರಮೇಶ್ವರ್ ಹೊಸ ಟಾಸ್ಕ್ ನೀಡಿದ್ದಾರೆ. ಹೌದು ಈ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಟ್ಟಿಗೆ ಪರಮೇಶ್ವರ್ ರಾತ್ರಿವರೆಗೂ ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಕ್ರೈಂಗಳು ಆಗಿದೆ, ಜೊತೆಗೆ ಜಿಲ್ಲೆಯ ಅಪರಾಧ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಸಚಿವರು ಕಲೆ ಹಾಕಿದ್ದಾರೆ. ಇನ್ನು ಸಭೆಯಲ್ಲಿ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್ ಕುಮಾರ್ ಸೇರಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ:ಜಾರ್ಖಂಡ್‌ನಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ: 3 ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‌ಗಳ ಬಂಧನ
ಇನ್ನು ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ‘ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲೆಯಲ್ಲಿ ಯಾವ ರೀತಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇರುವಂತಹ ಸಮಸ್ಯೆಗಳು ಏನು?, ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರೀಶಿಲನೆ ಮಾಡಿದ್ದೇನೆ. ರಾಜ್ಯದಲ್ಲಿ ಅನೇಕ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆ ಶಾಂತಿಯಿಂದ ಕೂಡಿದೆ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದಾಗ ತುಮಕೂರು ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆಯಿದೆ ಎಂದರು.
ಪೋಲಿಸ್ ಇಲಾಖೆಗೆ ಖಡಕ್ ಸೂಚನೆ ಕೊಟ್ಟ ಪರಮೇಶ್ವರ್
ಜನ ಸ್ನೇಹಿ ಪೋಲೀಸ್ ಆಗಬೇಕು, ಪೊಲೀಸ್ ಠಾಣೆಗೆ ಬಂದ ಜನರಿಗೆ ಸ್ಪಂಧಿಸಬೇಕು. ಜನರ ಸಮಸ್ಯೆ ಆಲಿಸಬೇಕು, ಕೂಡಲೇ ಅವರ ಸಮಸ್ಯೆಗಳಿಗೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಜನರರೊಂದಿಗೆ ವಿಶ್ವಾಸದಿಂದ ಮಾತಾನಾಡಲು ಪೊಲೀಸ್ ಅಧಿಕಾರಿಗಳಿಗೆ ಪರಮೇಶ್ವರ್ ತಿಳಿಸಿದರು. ಇನ್ನು ಇದರ ಜೊತೆಗೆ ಅಪರಾಧಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಖಡಕ್ ಆಗಿ ಇರಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯಾರೇ ಆದರೂ ಅಪರಾಧಿಗಳ ವಿರುದ್ದ ತಡಮಾಡದೇ ಕಾನೂನು ಕ್ರಮಕೈಗೊಳ್ಳಬೇಕು. ಗೃಹ ಸಚಿವರ ಜಿಲ್ಲೆ ತುಮಕೂರು, ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.
ಮುಂದಿನ ಮೂರು ತಿಂಗಳಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆ ಮಾಡಲು ಪಣ ತೊಟ್ಟ ಪರಮೇಶ್ವರ್
ಇನ್ನು ಡ್ರಗ್ಸ್ ಬಳಸುವ ವಿದ್ಯಾರ್ಥಿಗಳು, ಯುವಕರು ಇದ್ದು, ಹೆಚ್ಚು ಡ್ರಗ್ಸ್ ಪೆಡ್ಲರ್ಸ್ ಇಲ್ಲಿ ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲೂ ಕೂಡ ಈ ದಂಧೆ ನಡೆಯುತ್ತಿಲ್ಲ. ಇದನ್ನು ಪೈಲಟ್ ಪ್ರಾಜೆಕ್ಟ್ ಆಗಿ ರಾಜ್ಯದಲ್ಲಿ ಡ್ರಗ್ ಫ್ರೀ ಜಿಲ್ಲೆ ಮಾಡಬೇಕು. ರಾಜ್ಯದಲ್ಲಿ ಡ್ರಗ್ಸ್ ವಿಚಾರವಾಗಿ ದೊಡ್ಡ ಆಂದೋಲನವನ್ನು ಆರಂಭ ಮಾಡ್ತಾ ಇದ್ದೇನೆ. ರಾಜ್ಯಾದ್ಯಂತ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಪರಮೇಶ್ವರ್ ಮಾಸ್ಟರ್ ಪ್ಲಾನ್ ಮಾಡಿದ್ದು, ತುಮಕೂರುನಿಂದಲೇ ಆರಂಭ ಮಾಡಬೇಕು ಅಂತಾ ನಮ್ಮ ಜಿಲ್ಲೆ ಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. ಇನ್ನು ಇನ್ಸ್ಪೆಕ್ಟರ್ನಿಂದ ಮೇಲಿನ ಹಂತದ ಅಧಿಕಾರಿಗಳು ತಿಂಗಳಿಗೊಮ್ಮೆ ಶಾಲಾ ಕಾಲೇಜುಗಳಿಗೆ ಭೇಟಿ ಕೊಡಬೇಕು. ವಿದ್ಯಾರ್ಥಿಗಳಿಗೆ ಕಾನೂನು ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಮಾಡಬೇಕು ಎಂದು ಅಧಿಕಾರಿಗೆ ಸೂಚಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ