AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ಕಂಟ್ರೋಲ್​ಗೆ ಬೆಂಗಳೂರು ಪೊಲೀಸರ ಪ್ಲಾನ್​: ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್, ಹೆಡ್​ಮಾಸ್ಟರ್​ ನೋಡಲ್ ಆಫೀಸರ್​​ ಆಗಿ ನೇಮಕ

ಶಾಲೆ-ಕಾಲೇಜುಗಳಿಂದಲೇ ಡ್ರಗ್ಸ್ ಕಂಟ್ರೋಲ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್​ಮಾಸ್ಟರ್​ ಅವರನ್ನ ನೋಡಲ್ ಆಫೀಸರ್​​ ಆಗಿ ನೇಮಿಸಲು ಮುಂದಾಗಿದ್ದಾರೆ.

ಡ್ರಗ್ಸ್​ ಕಂಟ್ರೋಲ್​ಗೆ ಬೆಂಗಳೂರು ಪೊಲೀಸರ ಪ್ಲಾನ್​: ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್, ಹೆಡ್​ಮಾಸ್ಟರ್​ ನೋಡಲ್ ಆಫೀಸರ್​​ ಆಗಿ ನೇಮಕ
ಬೆಂಗಳೂರು ಪೊಲೀಸ್​​
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Jun 05, 2023 | 3:30 PM

Share

ಬೆಂಗಳೂರು: ಇತ್ತೀಚಿಗೆ ಮಾದಕವಸ್ತುಗಳಿಗೆ ಶಾಲಾ-ಕಾಲೇಜುಗಳ (School-Colleges) ವಿದ್ಯಾರ್ಥಿಗಳೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ಮಾದಕ ವಸ್ತುಗಳ ಮಾರಾಟ ಜಾಲವನ್ನು ಬುಡಸಮೇತ ಕಿತ್ತೆಸೆಯಲು ಬೆಂಗಳೂರು ಪೊಲೀಸರು (Bengaluru Police) ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳ ಬಳಿ ಮಾದಕವಸ್ತು ತಡೆಗೆ ಸಮರ ಸಾರಿದ್ದಾರೆ. ಶಾಲೆ-ಕಾಲೇಜುಗಳಿಂದಲೇ ಡ್ರಗ್ಸ್ ಕಂಟ್ರೋಲ್ (Drugs Control) ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಪಿಟಿ ಮಾಸ್ಟರ್ ಅಥವಾ ಹೆಡ್​ಮಾಸ್ಟರ್​ ಅವರನ್ನ ನೋಡಲ್ ಆಫೀಸರ್​​ ಆಗಿ ನೇಮಿಸಲು ಮುಂದಾಗಿದ್ದಾರೆ.

ಶಾಲಾ ಅವದಿಯಲ್ಲಿ ಮತ್ತು ಬಳಿಕ ಶಾಲೆಯ ಸುತ್ತಮುತ್ತ ಅಂಗಡಿಗಳು, ಸಂದೇಹಾಸ್ಪದ ಸ್ಥಳಗಳ ಮೇಲೆ ಹಾಗೂ ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ನಿಗಾ ಇಡಬೇಕು. ವಿದ್ಯಾರ್ಥಿಗಳ ಓಡಾಟ, ಎಲ್ಲೆಲ್ಲಿ ಓಡಾಡ್ತರೆ, ಶಾಲೆಯ ಹೊರಗೆ ಯಾರನ್ನ ಭೇಟಿಯಾಗ್ತಾರೆ ಎಂಬುವುದರ ಬಗ್ಗೆ ಗಮನ ಇಡಬೇಕು. ಅನುಮಾನಸ್ಪದ ವ್ಯಕ್ತಿಗಳು ಶಾಲಾ-ಕಾಲೇಜು ಬಳಿ ಕಂಡುಬಂದರೇ ಮಾಹಿತಿ ನೀಡಬೇಕು. ಅವರು ನಿತ್ಯ ಬರುತ್ತಾರಾ? ಒಂದು ದಿನ ಮಾತ್ರ ಬಂದಿದ್ದರಾ? ವಾರಕ್ಕೆ ಎಷ್ಟು ಬಾರಿ ಬರುತ್ತಾರೆ ಅನ್ನೋದನ್ನ ಗಮನಿಸಬೇಕು ಎಂದು ಪಿಟಿ ಮಾಸ್ಟರ್ ಅಥವಾ ಹೆಡ್ ಮಾಸ್ಟರ್​​ಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: 4 ದಿನಗಳಲ್ಲಿ 38 ಡ್ರಗ್​​​​ ಪೆಡ್ಲರ್​ಗಳನ್ನು ಬಂಧಿಸಿದ ಬೆಂಗಳೂರು ಪೊಲೀಸ್​

ಈ ಹಿಂದೆ ನಗರದ ಎಲ್ಲ ವಿಭಾಗದ ಪೊಲೀಸರು ಶಾಲಾ-ಕಾಲೇಜು ಸಮೀಪದ ಅಂಗಡಿ-ಮುಂಗಟ್ಟು ಹಾಗೂ ಎರಡು ಸಾವಿರಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು. ಈ ವೇಳೆ ಕೆಲವು ಅಂಗಡಿಗಳಲ್ಲಿ ಮಾದಕವಸ್ತು ಪತ್ತೆಯಾಗಿತ್ತು. ಈ ವೇಳೆ ೧೫೦ ಹೆಚ್ಚು ಕಡೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಸುಮಾರು ೨೫ಕ್ಕು ಹೆಚ್ಚು ಕೇಜಿ ಗಾಂಜಾ, ಎಂಡಿಎಂಎ ಸೇರಿ ಹಲವಾರು ಮಾದರಿಯ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

200ಕ್ಕೂ ಹೆಚ್ಚು ಜನ ವಶ

ನಗರ ಪೊಲೀಸರು ಡ್ರಗ್ಸ್​ ದಂಧೆ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಕಳೆದ 2-3 ದಿನಗಳಿಂದ ನಗರದ ಶಾಲಾ-ಕಾಲೇಜು, ಪಿಜಿ ಸುತ್ತಮುತ್ತ ಪ್ರದೇಶಗಳಲ್ಲಿ ದಾಳಿ ಮಾಡಿದ್ದರು. ಜೂ.02 ರಂದು ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರು ನಗರದ ಎಲ್ಲಾ ವಿಭಾಗದ ಪೊಲೀಸರು ಏಕಕಾಲಕ್ಕೆ  ನಗರದ 250ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿ ಗಾಂಜಾ, ಎಂಡಿಎಂಎ ಸೇರಿದಂತೆ ಹಲವಾರು ಮಾದರಿಯ ಡ್ರಗ್ಸ್​​ಗಳನ್ನು ಜಪ್ತಿ ಮಾಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿವೇಕ ಬಿರಾದಾರ
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್