ಮಾನವೀಯತೆಗೆ ಮೊದಲ ಆದ್ಯತೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ
ಪೊಲೀಸ್ ಠಾಣೆಗಳಲ್ಲಿ ಮೊದಲು ಮಾನವೀಯತೆಗೆ ಪ್ರಾಶಸ್ತ್ಯ ನೀಡಿ. ನಿಮ್ಮ ವರ್ತನೆ ಜನರ ಮನಸ್ಸಿನಲ್ಲಿ ಮತ್ತಷ್ಟು ಭಯ ಸೃಷ್ಟಿಸಬಾರದು. ಈ ನಿಟ್ಟಿನಲ್ಲಿ ಎಲ್ಲ ಪೊಲೀಸರು ಕೆಲಸ ಮಾಡಬೇಕು. ಈ ಬಗ್ಗೆ ದೂರುಗಳು ಬಂದರೇ ಗಂಭೀರವಾಗಿ ಪರಿಗಣಿಸಲಾಗುತ್ತೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರು ಪೊಲೀಸರಿಗೆ ಸೂಚನೆ ನೀಡಿದರು.
ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ (Bengaluru city police commissioner B Dayananda) ನೂತನವಾಗಿ ನೇಮಕಗೊಂಡ ಬೆನ್ನಲ್ಲೇ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಮೊದಲು ಮಾನವೀಯತೆಗೆ ಪ್ರಾಶಸ್ತ್ಯ ನೀಡಿ. ನಿಮ್ಮ ವರ್ತನೆ ಜನರ ಮನಸ್ಸಿನಲ್ಲಿ ಮತ್ತಷ್ಟು ಭಯ ಸೃಷ್ಟಿಸಬಾರದು. ಈ ನಿಟ್ಟಿನಲ್ಲಿ ಎಲ್ಲ ಪೊಲೀಸರು ಕೆಲಸ ಮಾಡಬೇಕು. ಈ ಬಗ್ಗೆ ದೂರುಗಳು ಬಂದರೇ ಗಂಭೀರವಾಗಿ ಪರಿಗಣಿಸಲಾಗುತ್ತೆ ಎಂದು ಪೊಲೀಸರಿಗೆ ಸೂಚನೆ ನೀಡಿದರು.
ಜನ ಸ್ನೇಹಿ ಪೊಲೀಸಿಂಗ್ ಮೂಲಕ ಜನರ ಮನಸ್ಸು ಗೆಲ್ಲಿ. ಪೊಲೀಸ್ ಠಾಣೆಗಳಿಗೆ ಈಗಲೂ ಜನರು ಭಯದಿಂದ ಬರುತ್ತಾರೆ. ಆದರಲ್ಲೂ ಬಡವರು ಹಾಗೂ ಮಧ್ಯಮವರ್ಗದ ಜನ ಆತಂಕದಿಂದ ಠಾಣೆಗೆ ಬರುತ್ತಾರೆ. ಹೀಗೆ ಬಂದವರ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ನೂತನ ಪೊಲೀಸ್ ಕಮೀಷನರ್ ದಯಾನಂದ ಅವರು ಪೊಲೀಸರಿಗೆ ಕಿವಿ ಮಾತು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 pm, Sun, 4 June 23