ತುಮಕೂರಿನಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ! ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

| Updated By: sandhya thejappa

Updated on: Mar 12, 2022 | 8:58 AM

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಮಹಿಳೆ ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಬರಲು ಆ್ಯಂಬುಲೆನ್ಸ್ಗಾಗಿ ಪರದಾಡಿದ್ದಾರೆ. ಆ್ಯಂಬುಲೆನ್ಸ್ ಸಿಗದೆ ಕಾರಿನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ತುಮಕೂರಿನಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ! ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಕಾರಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ
Follow us on

ತುಮಕೂರು: ಹೆರಿಗೆಗೆ ಬಂದ ತಾಯಿ-ಮಗು ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ವೈದ್ಯರ (Doctor) ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಬಂದ ವಾಹನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ತುಮಕೂರು (Tumkur) ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆ ಮುಂದೆ ಈ ಘಟನೆ ಸಂಭವಿಸಿದೆ. ಹೆರಿಗೆ ನೋವಿನಿಂದ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬಂದಿದ್ದರು. ಆದರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪ ಕೇಳಿಬಂದಿದೆ.

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಮಹಿಳೆ ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಬರಲು ಆ್ಯಂಬುಲೆನ್ಸ್​ಗಾಗಿ ಪರದಾಡಿದ್ದಾರೆ. ಆ್ಯಂಬುಲೆನ್ಸ್ ಸಿಗದೆ ಕಾರಿನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪಾವಗಡ ತಾಲೂಕಿನ ಮಡಕಶಿರಾ ಹೋಬಳಿಯ ಪಿಲ್ಲಕುಂಟೆಯ ಗ್ರಾಮದ ಲಕ್ಷ್ಮೀದೇವಿ ಮಗುವಿಗೆ ಜನ್ಮ ನೀಡಿದ ಮಹಿಳೆ.

ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ತಾಯಿ-ಮಗುವನ್ನು ಸಿಬ್ಬಂದಿ ಒಳಗೆ ಕರೆದೊಯ್ದಿದ್ದಾರೆ. ಕಳೆದ ವಾರವೂ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಬಲಿಯಾಗಿದ್ದರು. ಈಗ ಮತ್ತೆ ಆಸತ್ರೆಯಲ್ಲಿ ಮತ್ತೊಂದು ಎಡವಟ್ಟಾಗಿದೆ.

ಮನೆ ಬೀಗ ಒಡೆದು ಒಡವೆ ಕಳ್ಳತನ:
ಮನೆ ಬೀಗ ಒಡೆದು ಒಡವೆ ಕಳ್ಳತನ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಮಾಕ್ಷಮ್ಮ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಒಡವೆ ಕಳುವಾಗಿದೆ. ಕಳ್ಳರು ಕಳ್ಳತನ ಬಳಿಕ ಯಥಾವತ್ತಾಗಿ ಬೀಗ ಹಾಕಿ ಹೋಗಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ

ಇದನ್ನೂ ಓದಿ

ನಮ್ಮೊಂದಿಗೆ ವಿಲೀನಗೊಳ್ಳುವ ಸಮಯ ಬಂದಿದೆ: ಕಾಂಗ್ರೆಸ್​​ಗೆ ಟಿಎಂಸಿ ಸಲಹೆ

ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ

Published On - 8:54 am, Sat, 12 March 22