ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ

ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016ರಲ್ಲಿ ನಾಪತ್ತೆಯಾಗಿದ್ದ

ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ
ನಾಗಪುರದಲ್ಲಿ ಮಗನ ಬಿಗಿದಪ್ಪಿದ ತಾಯಿ ಪಾರ್ವತಮ್ಮ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 12, 2022 | 7:01 AM

ಬೆಂಗಳೂರು: ನಗರದಲ್ಲಿ ಕಳೆದುಹೋಗಿದ್ದ (Missing) ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್​ (Aadhaar Card) ನೆರವಿಗೆ ಬಂದಿದೆ. 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016ರಲ್ಲಿ ನಾಪತ್ತೆಯಾಗಿದ್ದ. ಎಷ್ಟು ಹುಡುಕಾಡಿದರೂ ಭರತ್ ಸಿಕ್ಕಿರಲಿಲ್ಲ. ಹೀಗಾಗಿ ಪಾರ್ವತಮ್ಮ ಅನಿವಾರ್ಯವಾಗಿ ಯಲಹಂಕ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು.

ಯಲಹಂಕದಿಂದ ನಾಗಪುರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದ ಭರತ್, ರೈಲ್ವೆ ಭದ್ರತಾ ಪಡೆ ಅಧಿಕಾರಿಗಳಿಗೆ ಸಿಕ್ಕಿದ್ದ. ಅವರು ಅವನಿಗೆ ಆಶ್ರಯ ಒದಗಿಸಿದ್ದರು. 6 ವರ್ಷಗಳ ಬಳಿಕ ಆಧಾರ್ ಕಾರ್ಡ್ ಮಾಡಿಸಲು ಬೆರಳು ಮುದ್ರೆ ಪಡೆದುಕೊಂಡಿದ್ದರು. ಈ ವೇಳೆ ಅದಾಗಲೇ ಆಧಾರ್ ಮಾಡಿಸಿರುವುದು ಪತ್ತೆಯಾಗಿತ್ತು. ಆಧಾರ್‌ನಲ್ಲಿದ್ದ ವಿಳಾಸ ಸಂಪರ್ಕಿಸಿದ ಅಧಿಕಾರಿಗಳು ಭರತ್ ತಾಯಿ ಪಾರ್ವತಮ್ಮಗೆ ಕರೆ ಮಾಡಿ ವಿಷಯ ತಿಳಿಸಿದರು. ಅಧಿಕಾರಿಗಳ ನೆರವಿನಿಂದ ಭರತ್ ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾದರು.

ಯಲಹಂಕದ ರೈತ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಪಾರ್ವತಮ್ಮ ಮಗನನ್ನು ಕಳೆದುಕೊಂಡಿದ್ದರು. ಮಗನಿಗೆ ಎಲ್ಲೆಡೆ ಹುಡುಕಾಡಿ ಸೋತು ಹೋಗಿದ್ದರು. ಯಲಹಂಕದಲ್ಲಿ ತಪ್ಪಿಸಿಕೊಂಡಿದ್ದ ಭರತ್ ಹೇಗೋ 10 ತಿಂಗಳ ನಂತರ ನಾಗಪುರ ಸೇರಿದ್ದ. ಕಂಗೆಟ್ಟು ಓಡಾಡುತ್ತಿದ್ದ ಭರತ್‌ನನ್ನು ಕಂಡು ರಕ್ಷಿಸಿದ್ದ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಅವನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

ಭರತ್‌ಗೆ ಆಧಾರ್​ಕಾರ್ಡ್ ಮಾಡಿಸಲು ಪುನರ್ವಸತಿ ಕೇಂದ್ರದ ಅಧಿಕಾರಿ ಮಹೇಶ್ 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾಗಿರುವ ಬಗ್ಗೆ ಮಾಹಿತಿ ನೀಡಿದ್ದ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ, ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಮಹೇಶ್ ವಿನಂತಿಸಿದರು. ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇದ್ದುದು ಗುರುತಿಸಿದರು. ಭರತ್‌ನ ತಾಯಿ ಪಾರ್ವತಮ್ಮ ಅವರ ಮೊಬೈಲ್ ನಂಬರ್ ಸಹ ಅದೇ ಕಾರ್ಡ್​ನಲ್ಲಿ ಸಿಕ್ಕಿತು. ಈ ಮಾಹಿತಿಯನ್ನು ಅವರು ತಕ್ಷಣ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದರು.

Mother-Son

ಮಹಾರಾಷ್ಟ್ರದ ನಾಗಪುರದಲ್ಲಿ ಮಗ ಭರತ್ ಜೊತೆಗೆ ತಾಯಿ ಪಾರ್ವತಮ್ಮ

ಯಲಹಂಕ ಪೊಲೀಸರನ್ನು ಸಂಪರ್ಕಸಿದ ನಾಗಪುರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ವಿಷಯ ತಿಳಿಸಿದರು. ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಭರತ್ ತಾಯಿಯನ್ನು ಪತ್ತೆ ಹಚ್ಚಿ, ತಮ್ಮ ಠಾಣಾ ಸಿಬ್ಬಂದಿಯೊಂದಿಗೆ ಪಾರ್ವತಮ್ಮ ಅವರನ್ನ ನಾಗಪುರಕ್ಕೆ ಕಳುಹಿಸಿ ಕೊಟ್ಟರು. ಮಾರ್ಚ್ 7ರಂದು ಮಗನನ್ನು ಕಂಡು ಭಾವುಕರಾದ ಪಾರ್ವತಮ್ಮ ಅಪ್ಪಿ ಮುದ್ದಾಡಿದರು. ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆ ತಂದರು. 6 ವರ್ಷಗಳ ಬಳಿಕ ಕೊನೆಗೂ ಮಗ ಭರತ್ ತಾಯಿಯ ಮಡಿಲು ಸೇರಿದ. ಪುನರ್ವಸತಿ ಕೇಂದ್ರದ ಅಧಿಕಾರಿಗಳು ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು.

ಇದನ್ನೂ ಓದಿ: Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?

ಇದನ್ನೂ ಓದಿ: Baal Aadhaar Card: ನವಜಾತ ಶಿಶುವಿಗೇ ಪಡೆಯಿರಿ ಬಾಲ್ ಆಧಾರ್ ಕಾರ್ಡ್; ಅರ್ಜಿ ಸಲ್ಲಿಕೆ ಹಂತಹಂತ ಮಾಹಿತಿ ಇಲ್ಲಿದೆ

Published On - 6:58 am, Sat, 12 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ