ದಂಪತಿಗಳ ಮಧ್ಯೆ ಗಲಾಟೆ; ಪತ್ನಿಯನ್ನು ಹತ್ಯೆಗೈದು ತಾನೂ ನೇಣಿಗೆ ಶರಣಾದ ಪತಿ
ಕಡೆಗರ್ಜೆ ಬಳಿ ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಬಲಿ ಆಗಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳ್ಳಂ ಬೆಳಿಗ್ಗೆ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ.
ಧಾರವಾಡ: ಪತ್ನಿಯನ್ನು ಹತ್ಯೆಗೈದು ಪತಿ ನೇಣಿ (hanga) ಗೆ ಶರಣಾದಂತಹ ಘಟನೆ ನಡೆದಿದೆ. ಧಾರವಾಡದ ಗಣೇಶ ನಗರದಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ದಂಪತಿ ಮಧ್ಯೆ ಗಲಾಟೆ ಹಿನ್ನೆಲೆ ಪತ್ನಿ ಮನೀಷಾ (25)ಳನ್ನು ಕೊಲೆ ಮಾಡಿದ್ದು, ಬಳಿಕ ಪತಿ ಗದಗವಾಲೆ(30) ನೇಣಿಗೆ ಶರಣಾಗಿದ್ದಾನೆ. ನಾಲ್ಕು ದಿನಗಳ ಹಿಂದಷ್ಟೇ ದಂಪತಿಗಳಿಬ್ಬರು ಗೋವಾದಲ್ಲಿ ಕೆಲಸಕ್ಕೆ ಎಂದು ಹೋಗಿಬಂದಿದ್ದರು. ಕಳೆದ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ರಾತ್ರಿಯೇ ಪತ್ನಿಯನ್ನ ಪತಿ ಕೊಲೆ ಮಾಡಿದ್ದಾನೆ. ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಡಾನೆ ದಾಳಿಗೆ ಇಬ್ಬರೂ ಕಾರ್ಮಿಕರು ಬಲಿ:
ಹಾಸನ: ಕಡೆಗರ್ಜೆ ಬಳಿ ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಬಲಿ ಆಗಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳ್ಳಂ ಬೆಳಿಗ್ಗೆ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ, ಇಂದು ಅದರ ದಾಳಿಗೆ ಚಿಕ್ಕಯ್ಯ(65), ಚಿಕ್ಕಯ್ಯ(68) ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶಗೊಂಡಿದ್ದು, ಕಾಡಾನೆ ದಾಳಿ ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ರಸ್ತೆಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಮತ್ತು ಲಾರಿ ನಡುವೆ ಡಿಕ್ಕಿ:
ವಿಜಯಪುರ: ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಎರಡು ಟ್ರ್ಯಾಕ್ಟರ್ಗಳಿಗೆ ಲಾರಿ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರ ಭಾಗದಲ್ಲಿ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ 2 ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿ ಚಾಲಕರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಕಾರಣವೆಂದು ಆರೋಪ ಮಾಡಲಾಗಿದೆ. ಸದ್ಯ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜು ಪ್ರವೇಶ ದ್ವಾರದ ಮೇಲೆ ಬಿದ್ದ ಮರದ ಕೊಂಬೆ; ಅದೃಷ್ಟವಶಾತ್ ತಪ್ಪಿದ ಅನಾಹುತ:
ಮೈಸೂರು: ಕಾಲೇಜು ಪ್ರವೇಶ ದ್ವಾರದ ಮೇಲೆ ಮರದ ಕೊಂಬೆ ಬಿದಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ರಾಮವಿಲಾಸ್ ರಸ್ತೆಯ ಮರಿಮಲ್ಲಪ್ಪ ಕಾಲೇಜುನಲ್ಲಿ ಘಟನೆ ನಡೆದಿದ್ದು, ಪ್ರವೇಶ ದ್ವಾರದ ಮೇಲೆ ಮರದ ಕೊಂಬೆ ಬಿದ್ದಿದೆ. ಪ್ರವೇಶ ದ್ವಾರದ ಬದಲು ಪಕ್ಕಕ್ಕೆ ಬಿದ್ದಿದ್ದರೆ ಅನಾಹುತ ನಡೆಯುತ್ತಿದ್ದು, ಆದರೆ ಅದೃಷ್ಟವಶಾತ್ ಅನಾಹುತ ತಪ್ಪಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆಯಿತ್ತು. ವಾಹನಗಳು ಜಖಂ ಆಗುತ್ತಿದ್ದವು. ಪಾಲಿಕೆ ಸಿಬ್ಬಂದಿಯಿಂದ ಮರದ ಕೊಂಬೆ ತೆರವು ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ:
ಮಹಾಯುದ್ಧಗಳು ಆರಂಭವಾದ ದಿನಾಂಕಗಳ ನಡುವಿನ ವಿಚಿತ್ರ ಹೋಲಿಕೆ: ವೈರಲ್ ಆಯ್ತು ಹೊಸ ಗಣಿತ ಸೂತ್ರ