ಮುಸ್ಲಿಂ ಯುವಕ -ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ

Gadag SP: ಇಜಾಜ್ ಶಿರೂಳ ಅಪೂರ್ವಾಳನ್ನು ಮದುವೆಯಾಗುವ ಮುಂಚೆ ಮುಸ್ಲಿಂ ಸಮಾಜದ ಮಹಿಳೆಯನ್ನು ಮದುವೆಯಾಗಿದ್ದ. ಅವಳಿಗೆ ಮೂವರು ಮಕ್ಕಳು ಕೂಡಾ ಇದ್ದಾರಂತೆ! ಇಜಾಜ್ ಮದುವೆಯಾಗಿರೋ ಸತ್ಯ ಗೊತ್ತಾದ ಮೇಲೆ ಅಪೂರ್ವಾ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ನಾಳೆ ಕೋರ್ಟಿಗೆ ಹೋಗಬೇಕಾಗಿತ್ತು. ಅಷ್ಟರಲ್ಲಿ...

ಮುಸ್ಲಿಂ ಯುವಕ -ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ
ಮುಸ್ಲಿಂ ಯುವಕ-ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ
Follow us
| Updated By: ಸಾಧು ಶ್ರೀನಾಥ್​

Updated on:Mar 10, 2022 | 6:25 PM

ಗದಗ: ಆತ ಮುಸ್ಲಿಂ ಯುವಕ, ಅವಳು ಹಿಂದು ಯುವತಿ. ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಯುವತಿಯ ಕುಟುಂಬಸ್ಥರ ವಿರೋಧದ ನಡುವೆ ಮದುವೆ ಕೂಡಾ ಆಗಿದ್ದರು. ಮುದ್ದಾದ ಮಗು ಕೂಡಾ ಆಗಿದೆ. ಆಗಲೇ ಒಂದು ಅಸಲಿ ಒಂದು ಸತ್ಯ ಬಯಲಾಗಿದೆ. ಆ ಯುವಕನಿಗೆ ಮೊದಲೇ ಒಂದು ಮದುವೆಯಾಗಿದೆ ಎನ್ನುವ ಕಠೋರ ಸತ್ಯ. ಆಗ ಯುವತಿ ವಿಚ್ಚೇದನಕ್ಕೆ ಮುಂದಾಗುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪತಿರಾಯ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಹಾಡಹಗಲೇ ಪತ್ನಿಯನ್ನು ಅಟ್ಟಾಡಿಸಿ 23 ಬಾರಿ ಮನಸೋ ಇಚ್ಚೆ ಚುಚ್ಚಿ ಹಲ್ಲೆ ಮೇಲಿನ ಫೋಟೋದಲ್ಲಿರುವ ಸುಂದರ ಯುವತಿಯ ಹೆಸರು ಅಪೂರ್ವಾ ಪುರಾಣಿಕ (apoorva pauranik) ಅಂತಾ. ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್ ಶಿರೂರು (ijaz shirur) ಎನ್ನುವ ಮುಸ್ಲಿಂ ಯುವಕನನ್ನು ಪ್ರೀತಿ ಮಾಡ್ತಾ ಇದ್ದಳು. ಆತ ಕೂಡಾ ಇವಳನ್ನು ಪ್ರೀತಿ ಮಾಡ್ತಾಯಿದ್ದ. 2018 ರಲ್ಲಿ ಅಪೂರ್ವಾ ಕುಟುಂಬಸ್ಥರ ವಿರೋಧದ ನಡುವೆ ಇಜಾಜ್ ಶಿರೂರು ಜೊತೆ ಮದುವೆಯಾಗಿದ್ದಾಳೆ. ಕೆಲ ವರ್ಷಗಳ ಕಾಲ ಸುಂದರವಾಗಿ ಸಂಸಾರ ನಡೆಸಿದ್ದಾನೆ. ಎರಡು ವರ್ಷದ ಮುದ್ದಾದ ಮಗು ಕೂಡಾ ಈ ಪ್ರೇಮಿಗಳಿಗೆ ಆಗಿದೆ. ಆದರೆ…

ಕಿರಾತಕ ಗಂಡ ಪ್ರೀತಿಸಿದ ಯುವತಿಯಿಂದ ಕಠೋರ ಸತ್ಯ ಮುಚ್ವಿಟ್ಟಿದ್ದ. ಮುಂದೆ ಇಜಾಜ್ ತನ್ನ ಅಸಲಿ ಆಟವನ್ನು ಆರಂಭ ಮಾಡಿದ್ದಾನೆ. ಅಪೂರ್ವಾಳನ್ನು ಮುಸ್ಲಿಂ ಸಂಪ್ರದಾಯದಂತೆ ಇರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಪೂರ್ವಾ ಪುರಾಣಿಕ ಬದಲಾಗಿ, ಅರ್ಪಾ ಬಾನು ಇಜಾಜ್ ಶಿರೂರು ಅಂತಾ ಮರು ನಾಮಕರಣ ಸಹ ಮಾಡಲಾಗಿದೆ! ಆಗಿನಿಂದ ಇಜಾಜ್ ಶಿರೂರು ಪತ್ನಿಯ ಮೇಲೆ ನಿತ್ಯ ಕಿರುಕುಳ ನೀಡ್ತಾಯಿದ್ದ. ನೀನು ಬುರ್ಕಾ ಹಾಕಿಕೊಳ್ಳಬೇಕು, ಹಾಗೇ ಹೀಗೆ ಎಂದೆಲ್ಲಾ ರೊಳ್ಳೆ ತೆಗೆದಿದ್ದಾನೆ.

ಇದನ್ನೆಲ್ಲಾ ಸಹಿಸಿಕೊಂಡು ಜೀವನ ಮಾಡ್ತಾಯಿದ್ದಳು ಈ ಅರ್ಪಾಬಾನು. ಆದ್ರೆ ಇಜಾಜ್ ಶಿರೂರು ಮೊದಲು ಒಂದು ಮದುವೆಯಾಗಿದ್ದಾನೆ ಅನ್ನುವ ಸತ್ಯ ಬಹಿರಂಗವಾದ ಮೇಲೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಆಗ ಇಬ್ಬರ ನಡುವೆ ಜಗಳವಾಗಿ ಪತ್ನಿ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬಂದು ವಾಸ ಮಾಡುತ್ತಾಳೆ. ಆದರೆ ಏಕಾಏಕಿ ಬಂದ ಕಿರಾತಕ ಪತಿ ಇಜಾಜ್ ಅವಳ ಮೇಲೆ ಮಚ್ಚಿನಿಂದ 23 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅರ್ಪಾ ಬಾನುರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಮೊಸಗಾರ ಪತಿ ಇಜಾಜ್ ಸಹವಾಸ ಬೇಡ ಎಂದು ಗದಗ ತಾಯಿಯ ಮನೆಯಲ್ಲಿ ಅಪೂರ್ವಾ ಹಾಗೂ ಎರಡು ವರ್ಷದ ಮಗು ಕಳೆದ ನಾಲ್ಕು ತಿಂಗಳಿಂದ ವಾಸವಾಗಿದ್ರು. ಇಂದು ಗುರುವಾರ ಮುಂಜಾನೆ ಬೈಕ್ ಕಲಿಯಲು ಅಪೂರ್ವಾ ಹಾಗೂ ಪಕ್ಕದ ಮನೆಯ ರವಿ ಎನ್ನುವ ಹುಡುಗನ ಜೊತೆಗೆ ಗದಗ ನಗರದ ಲಯನ್ ಸ್ಕೂಲ್ ಗ್ರೌಂಡ್ ನಲ್ಲಿ ಬೈಕ್ ಕಲಿಯುವಾಗ ಏಕಾಏಕಿ ಪ್ರತ್ಯಕ್ಷವಾದ ಇಜಾಜ್ ಶಿರೂರು ಅಪೂರ್ವಾ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.

ಮನಸೋ ಇಚ್ಚೆ 23 ಕ್ಕೂ ಹೆಚ್ಚು ಬಾರಿ ದೇಹದ ಮೇಲೆ ದಾಳಿ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಾಗ ಆತನ ಜೊತೆಗೆ ಇದ್ದ ಹುಡುಗ ಗಾಬರಿಗೊಂಡು ವಾಕಿಂಗ್ ಮಾಡ್ತಾಯಿದ್ದ ಜನರಿಗೆ ಹೇಳಿದ್ದಾನೆ. ಅಷ್ಟರಲ್ಲಿ ಪತಿ ಇಜಾಜ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಪೂರ್ವಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಲಾಗುವುದು ಎಂದಿದ್ದಾರೆ.

ಇಜಾಜ್ ಶಿರೂರು ಅಪೂರ್ವಾಳನ್ನು ಮದುವೆಯಾಗುವ ಮುಂಚೆ ಮುಸ್ಲಿಂ ಸಮಾಜದ ಮಹಿಳೆಯನ್ನು ಮದುವೆಯಾಗಿದ್ದ. ಅವಳಿಗೆ ಮೂವರು ಮಕ್ಕಳು ಕೂಡಾ ಇದ್ದಾರಂತೆ! ಇಜಾಜ್ ಮದುವೆಯಾಗಿರೋ ಸತ್ಯ ಗೊತ್ತಾದ ಮೇಲೆ ಅಪೂರ್ವಾ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ನಾಳೆ ಕೋರ್ಟಿಗೆ ಹೋಗಬೇಕಾಗಿತ್ತು. ಅಷ್ಟರಲ್ಲಿ ಪತ್ನಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ, ಅದೃಷ್ಟವಶಾತ್ ಪತ್ನಿ ಬದುಕಿ ಉಳಿದಿದ್ದಾಳೆ. ಇಜಾಜ್ ಪತ್ತೆಗಾಗಿ ಬಲೆ ಬೀಸಿದ್ದೇವೆ ಎಂದು ಗದಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್ಪಿ) ಶಿವಪ್ರಕಾಶ್ ದೇವರಾಜು ಟಿವಿ9 ಗೆ ತಿಳಿಸಿದ್ದಾರೆ. – ಸಂಜೀವ ಪಾಂಡ್ರೆ, ಟಿವಿ 9, ಗದಗ

Published On - 5:31 pm, Thu, 10 March 22

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ