Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಇಪ್ಯಾನ್​ ಅನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 28, 2022 | 1:36 PM

ಆಧಾರ್ ಕಾರ್ಡ್, ಪರ್ಮನೆಂಟ್ ಅಕೌಂಟ್ ನಂಬರ್ (PAN), ವೋಟರ್ ಐಡಿ -ಇವೆಲ್ಲ ಬಹಳ ಮುಖ್ಯವಾದ ದಾಖಲೆಗಳು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಬೇಕು ಅಂದರೆ ಇವುಗಳು ತುಂಬ ಮುಖ್ಯ. ನಿಮ್ಮ ಬಳಿ ಇವೆಲ್ಲ ಇದೆಯಾ? ಒಂದು ವೇಳೆ ಇಲ್ಲ ಎಂದಾದಲ್ಲಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ನೀವು ಅಪ್ಲೈ ಮಾಡಬಹುದು. ನಿಮ್ಮ ಬಳಿ ಆಧಾರ್​ ಕಾರ್ಡ್ ಇದೆ ಅಂತಾದರೆ ಅದರ ಸಂಖ್ಯೆಯನ್ನು ಬಳಸಿ ePANಗೆ ಅಪ್ಲೈ ಮಾಡಬಹುದು. ಆದರೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಒಂದು ವೇಳೆ ಪ್ಯಾನ್ ಇಲ್ಲ, ಆದರೆ ಸಿಂಧುವಾದ ಆಧಾರ್​ ಇದೆ ಹಾಗೂ ಕೆವೈಸಿ ಮಾಹಿತಿ ಅಪ್​ಡೇಟ್​ ಆಗಿದೆ ಎಂದಾಗ ಮಾತ್ರ ಈ ಸೇವೆಯನ್ನು ಬಳಸುವುದು ಸಾಧ್ಯ. ಆಧಾರ್​ ಕಾರ್ಡ್ ಅನ್ನು UIDAIನಿಂದ ಒದಗಿಸಲಾಗುತ್ತದೆ. ಐಟಿಆರ್​ ಫೈಲಿಂಗ್​ಗೆ, ಬ್ಯಾಂಕ್​ ಖಾತೆ ತೆರೆಯುವುದಕ್ಕೆ ಮುಂತಾದವಕ್ಕೆ ಅದರ ಉಪಯೋಗ ಇದೆ.

ಪ್ಯಾನ್​ ಕಾರ್ಡ್​ ಅನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ. ಇದು ಡಿಜಿಟಲ್​ ಸಹಿ ಆದಂಥ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಫಾರ್ಮಾಟ್​ನ ಪ್ಯಾನ್​ಕಾರ್ಡ್. ಐಟಿಆರ್​ ಫೈಲಿಂಗ್​ ಮಾಡುವಾಗ ಪ್ಯಾನ್​ ನಮೂದಿಸುವುದು ಕಡ್ಡಾಯ ಆಗಿದೆ. ನಿಮ್ಮ ಆಧಾರ್ ಹಾಗೂ ಮೊಬೈಲ್ ನಂಬರ್ ಅನ್ನು ಬಳಸಿ ಇಪ್ಯಾನ್ ಜನರೇಟ್ ಮಾಡಬಹುದು. ಇದು ಉಚಿತವಾಗಿರುತ್ತದೆ ಹಾಗೂ ಆನ್​ಲೈನ್​ನಲ್ಲಿ ಮಾಡಬಹುದಾಗಿರುತ್ತದೆ.

ಆಧಾರ್​ ಕಾರ್ಡ್​ ಮೂಲಕ ePANಗೆ ಅಪ್ಲೈ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರ ಇಲ್ಲಿದೆ:

ಹಂತ 1: ಆದಾಯ ತೆರಿಗೆ ಅಧಿಕೃತ ವೆಬ್​ಸೈಟ್ ಅಥವಾ ಲಿಂಕ್ – https://www.incometax.gov.in/iec/foportalಗೆ ​ಗೆ ತೆರಳಬೇಕು.

ಹಂತ 2: ಹೋಮ್​ ಪೇಜ್​ನಲ್ಲಿ ಲಭ್ಯ ಇರುವ “ಕ್ವಿಕ್ ಲಿಂಕ್ಸ್” vಇಭಾಗದಿಂದ “ಇನ್​ಸ್ಟಂಟ್​ ಇಪ್ಯಾನ್” ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹಂತ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಗೆಟ್​ ನ್ಯೂ ಇ-ಪ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಹಂತ 4: ಪ್ಯಾನ್​ ವಿತರಣೆಗಾಗಿ ಆಧಾರ್​ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಮುಂದುವರಿಯಿರಿ ಬಟನ್ ಒತ್ತುವ ಮುನ್ನ, ನಾನು ಖಾತ್ರಿ ಪಡಿಸುತ್ತೇನೆ ಎಂಬುದರ ಮೇಲೆ ಟಿಕ್ ಮಾಡಬೇಕು.

ಹಂತ 5: ಇದಾದ ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅಗತ್ಯ ಸ್ಥಳದಲ್ಲಿ ಒಟಿಪಿ ಹಾಕಬೇಕು ಮತ್ತು ವ್ಯಾಲಿಡೇಟ್ ಆಧಾರ್ ಒಟಿಪಿ ಹಾಗೂ ಮುಂದುವರಿಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಹಂತ 6: ಒಟಿಪಿ ವ್ಯಾಲಿಡೇಷನ್ ಪುಟದಲ್ಲಿ ಇರುವ ನಿಯಮ, ನಿಬಂಧನಗೆಳನ್ನು ಸಮ್ಮತಿಸಬೇಕು ಹಾಗೂ ಮುಂದುವರಿಯಿರಿ ಬಟನ್​ ಮೇಲೆ ಕ್ಲಿಕ್ ಮಾಡಬೇಕು.

ಹಂತ 7: ನಿಮ್ಮ ಒಟಿಪಿ ಒದಗಿಸಿ, ಬಾಕ್ಸ್​ ಚೆಕ್ ಮಾಡಬೇಕು ಮತ್ತು ಇನ್ನೊಂದು ಸಲ ಮುಂದುವರಿಯಿರಿ ಬಟನ್ ಒತ್ತಬೇಕು.

ಹಂತ 8: ಇಮೇಲ್ ಐಡಿ ಅಥೆಂಟಿಕೇಟ್ ಆಗಿಲ್ಲ ಅಂತಾದಲ್ಲಿ “ವ್ಯಾಲಿಡೇಟ್​ ಇಮೇಲ್​ ಐಡಿ” ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಕ್ರೆಡೆನ್ಷಿಯಲ್ಸ್ ನಮೂದಿಸಬೇಕು ಮತ್ತು ಮುಂದುವರಿಯಿರಿ ಎಂಬ ಬಟ್ ಒತ್ತಬೇಕು.

ಹಂತ 9: ವ್ಯಾಲಿಡೇಷನ್​ಗಾಗಿ ನಿಮ್ಮ ಆಧಾರ್​ ಮಾಹಿತಿ ಸಲ್ಲಿಸಿದ ಮೇಲೆ ಅದಕ್ಕೆ ಅಕ್​ನಾಲೆಡ್ಜ್​ಮೆಂಟ್ ಸಂಖ್ಯೆ ಬರುತ್ತದೆ. ನಿಮ್ಮ ಆಧಾರ್​ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ಯಾನ್ ವಿತರಣೆ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಹಂತ 10: ಇಪ್ಯಾನ್​ ಡೌನ್​ಲೋಡ್ ಮಾಡವುದಕ್ಕೆ ಮೊದಲಿ ಎರಡು ಹಂತಗಳನ್ನು ಪೂರ್ಣಗೊಳಿಸಬೇಕು. ಚೆಕ್​ ಸ್ಟೇಟಸ್/ಡೌನ್​ಲೋಡ್ ಪ್ಯಾನ್ ಮೇಲೆ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್​ ಒದಗಿಸಬೇಕು. ಸಬ್​ಮಿಟ್​ ಐಕಾನ್​ ಮೇಲೆ ಒತ್ತಬೇಕು. ಒಟಿಪಿ ನಮೂದಿಸುವ ಮೂಲಕ ವ್ಯಾಲಿಡೇಟ್ ಮಾಡಬೇಕು ಮತ್ತು ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಹಂತ 11: ಪ್ಯಾನ್​ ವಿತರಣೆ ಯಶಸ್ವಿಯಾದಲ್ಲಿ 10 ನಿಮಿಷದೊಳಗಾಗಿ ಪಿಡಿಎಫ್​ ಫೈಲ್ ಲಿಂಕ್ ವಿತರಣೆ ಆಗುತ್ತದೆ.

ಇದನ್ನೂ ಓದಿ: ಮಾಹಿತಿ ಹೊಂದಾಣಿಕೆಯಾಗದ ಕಾರಣ ಪ್ಯಾನ್-ಆಧಾರ್ ಲಿಂಕ್ ಆಗುತ್ತಿಲ್ಲವಾ?; ಹೀಗೆ ಮಾಡಿ ನೋಡಿ

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್